Wednesday, May 13, 2026
Google search engine
Homeವಿದೇಶ36 ಗಂಟೆಯಲ್ಲಿ 80 ಡ್ರೋಣ್ ನಿಂದ ವಾಯುನೆಲೆ ಮೇಲೆ ದಾಳಿ: ಆಪರೇಷನ್ ಸಿಂಧೂರ್ ಒಪ್ಪಿಕೊಂಡ ಪಾಕಿಸ್ತಾನ!

36 ಗಂಟೆಯಲ್ಲಿ 80 ಡ್ರೋಣ್ ನಿಂದ ವಾಯುನೆಲೆ ಮೇಲೆ ದಾಳಿ: ಆಪರೇಷನ್ ಸಿಂಧೂರ್ ಒಪ್ಪಿಕೊಂಡ ಪಾಕಿಸ್ತಾನ!

ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿದ ಭಾರತ 36 ಗಂಟೆಯಲ್ಲಿ 80 ಡ್ರೋಣ್ ಗಳಿಂದ ವಾಯುನೆಲೆಗಳ ಮೇಲೆ ದಾಳಿ ಮಾಡಿದೆ ಎಂದು ಪಾಕಿಸ್ತಾನ ಇದೇ ಮೊದಲ ಬಾರಿ ಬಹಿರಂಗವಾಗಿ ಒಪ್ಪಿಕೊಂಡಿದೆ.

ಪೆಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ 4 ದಿನಗಳ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ವಾಯುನೆಲಗಳ ಮೇಲೆ ಯಶಸ್ವಿಯಾಗಿ ದಾಳಿ ಮಾಡಿತ್ತು.

ಭಾರತದ ದಾಳಿಯಲ್ಲಿ ಯಾವುದೇ ಹಾನಿ ಆಗಿಲ್ಲ. ನಾವೇ 6 ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದ ಪಾಕಿಸ್ತಾನ 8 ತಿಂಗಳ ನಂತರ ಇದೇ ಮೊದಲ ಬಾರಿ ಬಹಿರಂಗವಾಗಿ ಭಾರತದ ದಾಳಿಯನ್ನು ಒಪ್ಪಿಕೊಂಡಿದೆ.

https://twitter.com/RealWahidaAFG/status/2004946965910749526

ಪಾಕಿಸ್ತಾನದ ಉಪ ಪ್ರಧಾನಿ ಇಕ್ಬಾಲ್ ದಾರ್ ಭಾರತದ ಡ್ರೋಣ್ ದಾಳಿಗಳಿಂದ ಪಾಕಿಸ್ತಾನದ ನುರ್ ಖಾನ್ ವಾಯುನೆಲೆ ಹಾಗೂ ರಾಯಲ್ಪಿಡಿಯಲ್ಲಿರುವ ಚಕ್ಲಾಲ ಪ್ರದೇಶಗಳು ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ.

ಭಾರತ 36 ಗಂಟೆಗಳ ಅವಧಿಯಲ್ಲಿ ಸುಮಾರು 80 ಡ್ರೋಣ್ ಗಳನ್ನು ಬಳಸಿ ದಾಳಿ ಮಾಡಿದೆ. ಆದರೆ 80 ಡ್ರೋಣ್ ಗಳ ಪೈಕಿ 79 ಹೊಡೆದುರುಳಿಸಿದ್ದೇವೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವರೂ ಆಗಿರುವ ಇಕ್ಬಾಲ್ ದರ್ ಹೇಳಿಕೊಂಡಿದ್ದಾರೆ.

ಭಾರತ 2025 ಮೇ 7ರಂದು ಮುಂಜಾನೆ ಪಾಕಿಸ್ತಾನದ ವಾಯುನೆಲೆಗಳನ್ನು ಗುರಿಯಾಗಿಸಿ ಡ್ರೋಣ್ ದಾಳಿ ನಡೆಸಿತ್ತು. ಮೇ 10ರಂದು ಮುಂಜಾನೆ ನುರ್ ಖಾನ್ ವಾಯುನೆಲೆಗಳ ಮೇಲೆ ಮುಂಜಾನೆ ದಾಳಿ ನಡೆಸಿ ಅಪಾರ ಹಾನಿ ಉಂಟು ಮಾಡಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments