ಬೆಂಗಳೂರಿನಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಅಮೆರಿಕದ ಫ್ರಂಕ್ ಫ್ರೂಟ್ ನಲ್ಲಿ ಇಂಜಿನಿಯರ್ ಅಲ್ಲ ಬದಲಾಗಿ ಕಾಲೇಜನ್ನು ಮಧ್ಯದಲ್ಲೇ ತೊರೆದ ವ್ಯಕ್ತಿ ಎಂಬುದು ಈಗ ಬೆಳಕಿಗೆ ಬಂದಿದೆ.
ಬೆಂಗಳೂರಿನ ಇನ್ ಫ್ಲೋಯೆನ್ಸರ್ ಶರತ್ ಯುವರಾಜ್ ತಮ್ಮ ಜಾಲತಾಣದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಫ್ರಂಕ್ ಫ್ರೂಟ್ ನಲ್ಲಿ ಇಂಜಿನಿಯರ್ ಆಗಿದ್ದು ಆಂಗ್ಲ ಭಾಷೆಯಲ್ಲಿ ಸರಳವಾಗಿ ಮಾತನಾಡುತ್ತಿದ್ದಾರೆ ಎಂಬ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಇದೀಗ ಆ ವ್ಯಕ್ತಿ ಇಂಜಿನಿಯರ್ ಅಲ್ಲ. ಬದಲಾಗಿ ಕಾಲೇಜು ಡ್ರಾಪೌಟ್ ಎಂಬುದು ದೃಢಪಟ್ಟಿದೆ.
ಇಂಜಿನಿಯರ್ ಎಂದು ವೀಡಿಯೊದಲ್ಲಿ ಹೇಳಿಕೊಂಡಿದ್ದ ವ್ಯಕ್ತಿ ಕೃಷ್ಣ ವೀಡಿಯೋ ವೈರಲ್ ಆಗುತ್ತಿದ್ದಂತೆ ನಾಪತ್ತೆಯಾಗಿದ್ದರು. ಇದೀಗ ಶರತ್ ಇನ್ ಸ್ಟಾಗ್ರಾಂನಲ್ಲಿ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಕೃಷ್ಣ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವೈಯಕ್ತಿಕವಾಗಿ ಜೀವನದಲ್ಲಿ ಕಳೆದುಕೊಂಡ ನೋವು ಹಾಗೂ ಕುಡಿತದ ದಾಸನಾಗಿದ್ದರಿಂದ ಭಿಕ್ಷಾಟನೆಗೆ ಇಳಿದಿದ್ದರು ಎಂದು ತಿಳಿಸಲಾಗಿದೆ. ಅಲ್ಲದೇ ವೀಡಿಯೋದಲ್ಲಿ ಮಾತನಾಡಿರುವ ಕೃಷ್ಣ, ಜೀವನದಲ್ಲಿ ತುಂಬಾ ಕಷ್ಟದ ದಿನಗಳನ್ನು ನೋಡಿದ್ದು, ಮದ್ಯದ ಚಟಕ್ಕೆ ಬಿದ್ದಿದ್ದೆ. ಈಗ ಹೊಸ ಜೀವನ ಆರಂಭಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ನಾನು ಇದುವರೆಗೆ ಜೀವನದಲ್ಲಿ ಮಡಿದ ತಪ್ಪುಗಳಿಂದ ಪಾಠ ಕಲಿತಿದ್ದೇನೆ. ಇನ್ನು ಮುಂದೆ ಒಳ್ಳೆಯ ಜೀವನ ನಡೆಸುತ್ತೇನೆ. ಮುಂದಿನ ದಿನಗಳಲ್ಲಿ ಸ್ವಚ್ಛ ಹಾಗೂ ಒಳ್ಳೆಯ ಜೀವನ ನಡೆಸುವ ಏಕೈಕ ಗುರಿ ಹೊಂದಿದ್ದೇನೆ ಎಂದು ಕೃಷ್ಣ ಭಾವುಕರಾಗಿ ಹೇಳಿಕೊಂಡಿದ್ದಾರೆ.
Leave a Reply