ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಬೆನ್ನು ನೋವಿನ ಕಾರಣ ಶಸ್ತ್ರಚಿಕಿತ್ಸೆ ಕಾರಣ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಗೆ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್ ಪ್ರಕರಣದ 7 ಆರೋಪಿಗಳಿಗೆ ಸಕ್ರಿಯ ಜಾಮೀನು ನೀಡಿದೆ.
ಪ್ರಸ್ತುತ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿರುವ ದರ್ಶನ್ ಅವರ ಮಧ್ಯಂತರ ಜಾಮೀನು ಅವಧಿ ಡಿಸೆಂಬರ್ ೧೧ಕ್ಕೆ ಮುಕ್ತಾಯಗೊಂಡಿತ್ತು. ಇದೇ ದಿನವೇ ದರ್ಶನ್ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿತ್ತು. ಆದರೆ ದರ್ಶನ್ ಇದುವರೆಗೂ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ.
ಪೊಲೀಸರು ತನಿಖೆ ವೇಳೆ ಹೇಳಿಕೆ ಪಡೆಯುವಲ್ಲಿ ಮಾಡಿದ ವಿಳಂಬ ಸೇರಿದಂತೆ ನಾನಾ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ನ್ಯಾಯಾಲಯ ಜಾಮೀನು ಮಂಜೂರ ಮಾಡಿದೆ
ದರ್ಶನ್, ಪವಿತ್ರಾ ಗೌಡ ಅಲ್ಲದೇ ನಾಗರಾಜು, ಅನ್ಬುಕುಮಾರ್, ಪ್ರದೋಶ್ ರಾವ್, ಲಕ್ಷ್ಮಣ್, ಜಗದೀಶ್ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
Leave a Reply