Saturday, May 16, 2026
Google search engine
Homeಕ್ರೀಡೆಆರ್ ಸಿಬಿ ಮಾರಟಕ್ಕಿಲ್ಲ: ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಸ್ಪಷ್ಟನೆ

ಆರ್ ಸಿಬಿ ಮಾರಟಕ್ಕಿಲ್ಲ: ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಸ್ಪಷ್ಟನೆ

ಐಪಿಎಲ್ ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ಮಾರಾಟ ಮಾಡುತ್ತಿಲ್ಲ ಎಂದು ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಸ್ಪಷ್ಟಪಡಿಸಿದೆ.

ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ ಆರ್ ಸಿಬಿ ತಂಡವನ್ನು ಮಾರಾಟ ಮಾಡಲು ಮಾಲೀಕರಾ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಸಂಸ್ಥೆ ಮಾರಾಟಕ್ಕೆ ಮುಂದಾಗಿದೆ ಎಂದು ವರದಿಯಾಗಿತ್ತು.

ವರದಿ ವೈರಲ್ ಆಗುತ್ತಿದ್ದಂತೆ ಆರ್ ಸಿಬಿ ಅಧಿಕೃತ ವೆಬ್ ಸೈಟ್ ನಲ್ಲಿ ಸ್ಪಷ್ಟನೆ ನೀಡಿರುವ ಸಂಸ್ಥೆ ಆರ್ ಸಿಬಿ ತಂಡವನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುತ್ತಿಲ್ಲ.  ಇದೊಂದು ಊಹಾಪೋಹಾ ಸುದ್ದಿ ಎಂದು ಸ್ಪಷ್ಟನೆ ನೀಡಿದೆ.

ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಅಭಿಮಾನಿಗಳು ಮೃತಪಟ್ಟಿದ್ದು, ಪ್ರಕರಣದಲ್ಲಿ ಆರ್ ಸಿಬಿಯ ಮಾರುಕಟ್ಟೆ ಮುಖ್ಯಸ್ಥ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ ಎನ್ನಲಾಗಿತ್ತು.

ಬ್ರಿಟನ್ ಮೂಲದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಭಾರತದಲ್ಲಿ ಮುನ್ನಡೆಸುತ್ತಿರುವ ಆರ್ ಸಿಬಿಯ  ಮೌಲ್ಯಮಾಪನದ ಪ್ರಕಾರ ಸಂಪೂರ್ಣವಾಗಿ 2 ಬಿಲಿಯನ್ ಡಾಲರ್ (17,000 ಕೋಟಿ ರೂ.) ಆಗಿದ್ದು, ಖರೀದಿದಾರರನ್ನು ಸೆಳೆಯಲು ಆರಂಭಿಸಿದೆ ಎಂಬ ಸುದ್ದಿ ಪ್ರಕಟವಾಗಿತ್ತು.

ಇತ್ತೀಚಿನ ಪ್ರಶಸ್ತಿ ಗೆಲುವಿನ ನಂತರ ಐಪಿಎಲ್ ಫ್ರಾಂಚೈಸಿಯನ್ನು ಹಣಗಳಿಸುವ ಮಾರ್ಗಗಳನ್ನು ಮದ್ಯದ ದೈತ್ಯ ಕಂಪನಿಯು ಅನ್ವೇಷಿಸುತ್ತಿದೆ ಎಂದು ಜನರು ಹೇಳಿದರು, ಡಿಯಾಜಿಯೊ ಒಪ್ಪಂದವನ್ನು ನಿರ್ವಹಿಸಲು ಸಂಭಾವ್ಯ ಸಲಹೆಗಾರರೊಂದಿಗೆ ಮಾತನಾಡುತ್ತಿದೆ.

ಆರ್‌ಸಿಬಿಯ ಸಂಭಾವ್ಯ ಮಾರಾಟದ ಸುದ್ದಿ ಹೊರಬೀಳುತ್ತಿದ್ದಂತೆ, ಯುನೈಟೆಡ್ ಸ್ಪಿರಿಟ್ಸ್‌ನ ಷೇರುಗಳಿಗೆ ಭಾವನೆಗಳು ಉತ್ತೇಜನ ನೀಡಿತು. ಮಂಗಳವಾರ ಬೆಳಿಗ್ಗೆ ಷೇರು ಬೆಲೆಗಳು 3.3% ರಷ್ಟು ಏರಿಕೆಯಾಗಿದ್ದವು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments