Saturday, 14 November 2026 — Kannadavahini
BREAKING NEWS
ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜಕೀಯ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳಿಗೆ ಕುತ್ತು: ಸಿಎಂ ಡಿ ಕೆ ಶಿವಕುಮಾರ್ ಅಪರಾಧ ದರೋಡೆ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಗನ್‌ ಮ್ಯಾನ್: 2.39 ಕೋಟಿ ರೂ. ವಶ ರಾಜ್ಯ ಎಥೆನಾಲ್ ಮಿಶ್ರಣ ಕುರಿತು 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ: ಸಿಎಂ ಡಿಕೆ ಶಿವಕುಮಾರ್ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜಕೀಯ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳಿಗೆ ಕುತ್ತು: ಸಿಎಂ ಡಿ ಕೆ ಶಿವಕುಮಾರ್ ಅಪರಾಧ ದರೋಡೆ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಗನ್‌ ಮ್ಯಾನ್: 2.39 ಕೋಟಿ ರೂ. ವಶ ರಾಜ್ಯ ಎಥೆನಾಲ್ ಮಿಶ್ರಣ ಕುರಿತು 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ: ಸಿಎಂ ಡಿಕೆ ಶಿವಕುಮಾರ್
Uncategorized

ಏಡ್ಸ್‌ ರೋಗಿಗಳಿಗೆ ಅಮೆರಿಕ ನೆರವು ಸ್ಥಗಿತ: 40 ಲಕ್ಷಕ್ಕೂ ಅಧಿಕ ಸಾವಿನ ಭೀತಿ

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 35 ವೀಕ್ಷಣೆಗಳು
donald trump
donald trump

ಜಿನಿವಾ: ನೆರವಿನ ರೂಪದಲ್ಲಿ ಅಮೆರಿಕ ನೀಡುತ್ತಿದ್ದ ಹಣವನ್ನು ಏಕಾಏಕಿ ನಿಲ್ಲಿಸಿರುವ ಕಾರಣ ಏಡ್ಸ್ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯಲ್ಲಿ ದೊಡ್ಡ ವ್ಯತ್ಯಯ ಉಂಟಾಗಿದ್ದು. ಲಕ್ಷಾಂತರ ಜನರನ್ನು ಪ್ರಾಣಾಪಾಯಕ್ಕೆ ದೂಡಿದೆ.

ವಿಶ್ವಸಂಸ್ಥೆಯ ಯುಎನ್‌ ಏಡ್ಸ್‌ ನ 2025ರ ಗ್ಲೋಬಲ್ ಏಡ್ಸ್ ವರದಿಯ ಪ್ರಕಾರ, ನಿಧಿ ಕೊರತೆಯಿಂದ 2029ರ ವೇಳೆಗೆ 40 ಲಕ್ಷಕ್ಕೂ ಅಧಿಕ ಏಡ್ಸ್ ಸಂಬAಧಿತ ಸಾವುಗಳು ಸಂಭವಿಸಬಹುದಾಗಿದೆ.

ನಿಧಿ ಸ್ಥಗಿತದ “ಟೈಮ್ ಬಾಂಬ್”

ಕಳೆದ ಆರು ತಿಂಗಳಿಂದ ಅಮೆರಿಕದ ನೆರವಿನ ನಿಧಿಯ ನಿಲುಗಡೆಯಿಂದ ಸಾವಿರಾರು ಆರೋಗ್ಯ ಕಾರ್ಯಕರ್ತರನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಏಡ್ಸ್ ತಡೆಗಟ್ಟುವ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಈ ಕೊರತೆಯನ್ನು “ಟೈಮ್ ಬಾಂಬ್” ಎಂದು ಯುಎನ್‌ಎ ಏಡ್ಸ್ ಕಾರ್ಯನಿರ್ವಾಹಕ ನಿರ್ದೇಶಕರಾದ ವಿನ್ನಿ ಬಯಾನಿಮಾ ವಿವರಿಸಿದ್ದಾರೆ. ಇದರಿಂದ ಮಕ್ಕಳು ಮತ್ತು ಗರ್ಭಿಣಿಯರಿಗೆ ಚಿಕಿತ್ಸೆ ತಲುಪದಿರುವುದು ಗಂಭೀರ ಸಮಸ್ಯೆಯಾಗಿದೆ.

ಅಮೆರಿಕದ ತುರ್ತು ಏಡ್ಸ್ ಪರಿಹಾರ ಯೋಜನೆ 2003ರಿಂದ 26 ಮಿಲಿಯನ್ ಜೀವಗಳನ್ನು ಉಳಿಸಿದೆ. ಆದರೆ, ಟ್ರಂಪ್ ಆಡಳಿತದಿಂದ ಈ ಯೋಜನೆಗೆ ನಿಧಿ ಕಡಿತಗೊಂಡಿದ್ದು, 2029ರ ವೇಳೆಗೆ 60 ಲಕ್ಷ ಹೊಸ ಎಚ್‌ಐವಿ ಸೋಂಕುಗಳು ಮತ್ತು 42 ಲಕ್ಷ ಏಡ್ಸ್ ಸಂಬಂಧಿತ ಸಾವುಗಳು ಸಂಭವಿಸಬಹುದು ಎಂದು ಯುಎನ್‌ಏಡ್ಸ್ ಎಚ್ಚರಿಸಿದೆ.

ಆರೋಗ್ಯದ ಮೇಲಿನ ದುಷ್ಪರಿಣಾಮ

2024ರಲ್ಲಿ 92 ಲಕ್ಷ ಜನರು ಎಚ್‌ಐವಿ ಚಿಕಿತ್ಸೆಯಿಂದ ವಂಚಿತರಾಗಿದ್ದರು, ಇದರಲ್ಲಿ 6.2 ಲಕ್ಷ ಮಕ್ಕಳು ಸೇರಿದ್ದಾರೆ. ಇದರಿಂದ 2024ರಲ್ಲಿ 6.3 ಲಕ್ಷ ಏಡ್ಸ್ ಸಂಬAಧಿತ ಸಾವುಗಳು ಸಂಭವಿಸಿದ್ದು, ಇದರ 61% ಸಬ್-ಸಹಾರನ್ ಆಫ್ರಿಕಾದಲ್ಲಿವೆ.

ಯುಎಸ್‌ಎಐಡಿ ಕಾರ್ಯಕ್ರಮಗಳು 2001-2021ರ ಅವಧಿಯಲ್ಲಿ 91 ಮಿಲಿಯನ್ ಜೀವಗಳನ್ನು ಉಳಿಸಿದ್ದವು, ಆದರೆ 2025ರಲ್ಲಿ 83% ಕಾರ್ಯಕ್ರಮಗಳ ಕಡಿತದಿಂದ 2030ರ ವೇಳೆಗೆ 14 ಮಿಲಿಯನ್ ಹೆಚ್ಚುವರಿ ಸಾವುಗಳು, ಇದರಲ್ಲಿ 45 ಲಕ್ಷ ಮಕ್ಕಳ ಸಾವುಗಳು ಸಂಭವಿಸಬಹುದು.

ವಿರೋಧ ಮತ್ತು ಟೀಕೆ

ತಜ್ಞರು ಈ ಕಡಿತವನ್ನು “ವಿನಾಶಕಾರಿ” ಎಂದು ಕರೆದಿದ್ದಾರೆ, ಇದು ಕೇವಲ ಆರ್ಥಿಕ ಕೊರತೆಯಲ್ಲದೇ ಜಾಗತಿಕ ಏಡ್ಸ್ ಪ್ರತಿಕ್ರಿಯೆಯಲ್ಲಿ ಭಾರಿ ಅಡೆತಡೆಯಾಗಿದೆ ಎಂದು ಹೇಳಿದ್ದಾರೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಈ ಕಡಿತಗಳಿಂದ ಯಾರೂ ಸಾಯುತ್ತಿಲ್ಲ ಎಂದು ವಾದಿಸಿದ್ದಾರೆ, ಆದರೆ ಆರೋಗ್ಯ ತಜ್ಞರು ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ.

ಬೋಸ್ಟನ್ ವಿಶ್ವವಿದ್ಯಾಲಯದ ಸಂಶೋಧಕ ಬ್ರೂಕ್ ನಿಕೋಲ್ಸ್, ಈ ಕಡಿತಗಳಿಂದ ಪ್ರತಿ ಗಂಟೆಗೆ 88 ಸಾವುಗಳು ಸಂಭವಿಸುತ್ತಿವೆ ಎಂದು ಅಂದಾಜಿಸಿದ್ದಾರೆ. ರಾಷ್ಟ್ರಗಳ ಪ್ರತಿಕ್ರಿಯೆ

ಕಡಿಮ-ಮಧ್ಯಮ ಆದಾಯದ ರಾಷ್ಟçಗಳಲ್ಲಿ 25 ರಾಷ್ಟ್ರಗಳು 2026ರಲ್ಲಿ ಎಚ್‌ಐವಿ ಕಾರ್ಯಕ್ರಮಗಳಿಗೆ ದೇಶೀಯ ಬಜೆಟ್‌ನಲ್ಲಿ ಹೆಚ್ಚಳವನ್ನು ಘೋಷಿಸಿವೆ. ಆದರೆ, ಇದು ಅಂತಾರಾಷ್ಟ್ರೀಯ ನಿಧಿಯ ಕೊರತೆಯನ್ನು ನೀಗಲು ಸಾಕಾಗುವುದಿಲ್ಲ.

ಯುರೋಪಿಯನ್ ರಾಷ್ಟçಗಳು ಕೂಡ ತಮ್ಮ ಮಾನವೀಯ ನೆರವಿನ ಬಜೆಟ್‌ನಲ್ಲಿ ಕಡಿತಗೊಳಿಸಿವೆ, ಇದು ಜಾಗತಿಕ ಆರೋಗ್ಯ ಕಾರ್ಯಕ್ರಮಗಳಿಗೆ ಮತ್ತಷ್ಟು ಸವಾಲು ಒಡ್ಡಿದೆ. 2025ರ ಗ್ಲೋಬಲ್ ಏಡ್ಸ್ ಅಪ್‌ಡೇಟ್ ವರದಿಯು ದೇಶಗಳು ಎಚ್‌ಐವಿಗೆ ಧನಸಹಾಯದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡದಿದ್ದರೆ ದಶಕಗಳ ಪ್ರಗತಿಯನ್ನು ಇಲ್ಲವಾಗಿಸುವ ಸಾಧ್ಯತೆ ಇದೆ ಎಂದು ಹೇಳಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8412 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment