ಆಟೋ ಡ್ರೈವರ್ ನನ್ನು ಅಮ್ಮ, ಮಗ ಹಾಗೂ ಪ್ರಿಯಕರ ಮೂವರು ಸೇರಿ ಕೊಲೆ ಮಾಡಿ ಬೆಡ್ ಶೀಟ್ ನಲ್ಲಿ ಸುತ್ತಿ ಶವ ಬಿಸಾಕಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ನಗರದ ಆಟೋ ಡ್ರೈವರ್ ರವಿಕುಮಾರ್ ಕೊಲೆಯಾದ ದುರ್ದೈವಿ. ಆರೋಪಿಗಳಾದ ಹಂತಕ ಗಣೇಶ್, ಕೊಲೆಯಾದ ರವಿ ಕುಮಾರ್ ಪತ್ನಿ ಸುನೀತಾ, ಮಗ ವಿಷ್ಣುವನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ರೌಡಿ ಶೀಟರ್ ಗಣೇಶ್ ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಸುನೀತಾ, ಅಡ್ಡಿಯಾಗಿದ್ದ ಗಂಡನನ್ನು ಕೊಲೆ ಮಾಡಲು ಮಗ ವಿಷ್ಣು ಜೊತೆ ಸೇರಿ ಸುಪಾರಿ ನೀಡಿದ್ದರು.
ಗಣೇಶ್ ಹಾಗೂ ಸಹಚರರು ದುಷ್ಕರ್ಮಿಗಳು ಹೊಳಲ್ಕೆರೆ ರಸ್ತೆಯ ಮಂಗಳಮುಖಿಯರ ರೂಂ ನಲ್ಲಿ ಕೊಲೆ ಮಾಡಿ ಬೆಡ್ ಶೀಟ್ ನಲ್ಲಿ ಮೂಟೆ ಕಟ್ಟಿ ಚಿತ್ರದುರ್ಗ ನಗರದ ಹೊರಭಾಗದ ಜಾನುಕೊಂಡ ಸಮೀಪ ಶವ ಎಸೆದು ಹೋಗಿದ್ದರು.
ಬೆಡ್ ಶೀಟ್ ಆಧಾರದ ಮೇಲೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಹಂತಕ ಗಣೇಶ್ ಹಾಗೂ ಸುನೀತಾಳವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಚಿತ್ರದುರ್ಗ ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ್, ಪಿಎಸ್ಐ ಸುರೇಶ್ ನೇತೃತ್ವದಲ್ಲಿ ಆರೋಪಿಗಳ ಬಂಧನ ಕಾರ್ಯಾಚರಣೆ ನಡೆಯಿತು.



