ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧವನ್ನು ನಾನೇ ನಿಲ್ಲಿಸಿದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.
ಗಾಜಾದ ಹವಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ನಿಲ್ಲಿಸಿದ ಬಗ್ಗೆ ಮಾತನಾಡಿದ ಅವರು, ಇದುವರೆಗೆ ನಾನು 8 ಯುದ್ಧಗಳನ್ನು ತಪ್ಪಿಸಿದ್ದೇನೆ. ಮುಂದಿನ ದಿನಗಳಲ್ಲಿ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸುವ ಕಡೆ ಗಮನ ಹರಿಸಲಿದ್ದೇವೆ ಎಂದರು.
ಅಮೆರಿಕದ ಸುಂಕ ಸಮರ ವಿರುದ್ಧ ಭಾರತ ಮತ್ತು ಚೀನಾ ಒಗ್ಗೂಡುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಅಮೆರಿಕ ಶೇ.50, 100, 150 ಮತ್ತು 200ರಷ್ಟು ತೆರಿಗೆ ವಿಧಿಸುವ ಬೆದರಿಕೆ ಹಾಕಿ ಭಾರತ ಮತ್ತು ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿದ್ದೇವೆ ಎಂದರು.
ನಾನು ಯುದ್ಧವನ್ನು ನಿಲ್ಲಿಸುವುದರಲ್ಲಿ ಪರಿಣಿತನಾಗಿದ್ದೇನೆ. ಕೇವಲ ಸುಂಕ ಹೇರಿಕೆಯಿಂದಲೇ ಹಲವು ಯುದ್ಧಗಳನ್ನು ತಪ್ಪಿಸಿದ್ದೇನೆ. ಉದಾಹರಣೆಗೆ ಭಾರತ ಮತ್ತು ಪಾಕಿಸ್ತಾನ ಎಂದು ಅವರು ಹೇಳಿದರು.
ನಿಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳಿವೆ. ನೀವು ಯುದ್ಧವನ್ನು ಆರಂಭಿಸುವುದಾದರೆ ನಾವು ದೊಡ್ಡ ಮೊತ್ತದ ಸುಂಕ ವಿಧಿಸುತ್ತೇನೆ. ಅದು ಶೇ.50, 100, 150 ಅಥವಾ 200 ಕೂಡ ಆಗಬಹುದು ಎಂದು ಎಚ್ಚರಿಸಿದ್ದೆ ಎಂದು ಅವರು ವಿವರಿಸಿದರು.
24 ಗಂಟೆಯೊಳಗೆ ಯುದ್ಧವನ್ನು ನಿಲ್ಲಿಸಿ. ಇಲ್ಲದಿದ್ದರೆ ನಾನು ಎರಡೂ ದೇಶಗಳ ಮೇಲೆ ತೆರಿಗೆ ಹೆಚ್ಚಿಸುತ್ತೇನೆ. ನಾನು ತೆರಿಗೆ ವಿಧಿಸದೇ ಇದ್ದರೆ ನೀವು ಯುದ್ಧವನ್ನೂ ಯಾವತ್ತೂ ನಿಲ್ಲಿಸುವುದಿಲ್ಲ ಎಂದು ಎರಡೂ ದೇಶಗಳಿಗೆ ಎಚ್ಚರಿಕೆ ನೀಡಿದ್ದೆ. ಆದ್ದರಿಂದ ಎರಡೂ ದೇಶಗಳು ಕೂಡಲೇ ಯುದ್ಧ ನಿಲ್ಲಿಸಿದವು ಎಂದು ಟ್ರಂಪ್ ವಿವರಿಸಿದರು.
