Thursday, July 30, 2026
Google search engine
Homeವಿದೇಶಆನ್ ಲೈನ್ ನಲ್ಲಿ ಔಷಧಿಗೆ ಆರ್ಡರ್ ಮಾಡಿದರೆ ಬಂದಿದ್ದು ಮಾನವ ದೇಹದ ಅಂಗಾಂಗಳು!

ಆನ್ ಲೈನ್ ನಲ್ಲಿ ಔಷಧಿಗೆ ಆರ್ಡರ್ ಮಾಡಿದರೆ ಬಂದಿದ್ದು ಮಾನವ ದೇಹದ ಅಂಗಾಂಗಳು!

ಆನ್ ಲೈನ್ ನಲ್ಲಿ ಔಷಧಗಳನ್ನು ಆರ್ಡರ್ ಮಾಡಿದ್ದ ಮಹಿಳೆ ಮಾನವ ಅಂಗಾಂಗಳು ಕಂಡು ಹೌಹಾರಿದ ಘಟನೆ ಅಮೆರಿಕದಲ್ಲಿ ನಡೆದಿದೆ.

ಮಹಿಳ ಔಷಧಿಗಳನ್ನು ಆರ್ಡರ್ ಮಾಡಿದ್ದರು. ಮನೆಗೆ ಬಾಕ್ಸ್ ಬಂದ ಕೂಡಲೇ ತೆರೆದು ನೋಡಿದಾಗ ಅದರಲ್ಲಿ ಔಷಧಿಗಳಲ್ಲ ಬದಲಾಗಿ ಮನುಷ್ಯದ ದೇಹದ ಅಂಗಗಳಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ.

ಅದರಲ್ಲಿ ಮನುಷ್ಯನ ತೋಳುಗಳು ಹಾಗೂ ಬೆರಳುಗಳನ್ನು ಐಸ್ ಜತೆಗೆ ಇಟ್ಟಿರುವುದು ಕಂಡುಬಂದಿದೆ. ಕೆಂಟುಕಿಯ ಹಾಪ್ತಿನ್ಸ್ ವಿಲ್ಲೆಯಲ್ಲಿರುವ ತನ್ನ ಮನೆಯಲ್ಲಿ ಬುಧವಾರ ಪಾರ್ಸೆಲ್ ಪಡೆದ ನಂತರ, ಪೊಲೀಸರಿಗೆ ಕರೆ ಮಾಡಿದ್ದಾರೆ. ನಾವು ತುರ್ತು ಔಷಧಿಗಳನ್ನು ನಿರೀಕ್ಷಿಸುತ್ತಿದ್ದವು ಅವರು ಎರಡು ಬಾಕ್ಸ್‌ಗಳನ್ನು ನೀಡಿದ್ದರು.

ಒಂದು ಪೆಟ್ಟಿಗೆಯಲ್ಲಿ ಕಸಿಗೆ ಬೇಕಾದ ಮಾನವ ದೇಹದ ಬಿಡಿ ಭಾಗಗಳಿದ್ದವು. ಅದು ಎಲ್ಲಿಗೆ ಹೋಗಬೇಕಿತ್ತು ಎಂಬ ಅರಿವಿಲ್ಲ. ಕ್ರಿಶ್ಚಿಯನ್ ಕೌಂಟಿ ಕರೋನರ್ ಸ್ಕಾಟ್ ಡೇನಿಯಲ್ ಸ್ಥಳಕ್ಕೆ ಬಂದು ಅವಶೇಷಗಳನ್ನು ವಶಪಡಿಸಿಕೊಂಡರು. ಡೇನಿಯಲ್ ಆ ಪ್ಯಾಕೇಜ್ ಅನ್ನು ಸ್ಥಳೀಯ ಶವಾಗಾರಕ್ಕೆ ತೆಗೆದುಕೊಂಡು ಹೋದರು, ಅಲ್ಲಿ ಮರುದಿನ ಬೆಳಗ್ಗೆ ಕೊರಿಯರ್ ಮೂಲಕ ಅದನ್ನು ಮರಳಿ ಪಡೆಯಲಾಯಿತು.

ದೇಹದ ಭಾಗಗಳು ನಾಲ್ಕು ವಿಭಿನ್ನ ದಾನಿಗಳಿಂದ ಬಂದಿದ್ದವು. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸಿದ್ದಕ್ಕಾಗಿ ಡೇನಿಯಲ್ ಆ ಮಹಿಳೆಯನ್ನು ಹೊಗಳಿದ್ದಾರೆ.

ಅಧಿಕಾರಿಗಳನ್ನು ಕರೆಯುವ ಮೂಲಕ ಸರಿಯಾದ ಕೆಲಸ ಮಾಡಿದ್ದಾರೆಂದು ಹೇಳಿದ್ದಾರೆ. ಯಾರದ್ದೂ ಶಸ್ತ್ರಚಿಕಿತ್ಸೆಗೆಂದು ಕಳುಹಿಸಲಾಗಿದ್ದ ದೇಹದ ಅಂಗಾಂಗಗಳು ಈ ಮಹಿಳೆಗೆ ತಲುಪಿದ್ದವು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments