Wednesday, 28 October 2026 — Kannadavahini
BREAKING NEWS
Uncategorized ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ Uncategorized ನೂತನ ನೀರಾವರಿ ಯೋಜನೆಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್
ವಾಣಿಜ್ಯ

2027ರ ವೇಳೆಗೆ ದೇಶದಲ್ಲಿ ಶೇ.50 ರಷ್ಟು ಸೇವಾ ಪ್ರಕರಣಗಳಿಗೆ ಎಐ ಪರಿಹಾರ ನಿರೀಕ್ಷೆ: ಸೇಲ್ಸ್ ಫೋರ್ಸ್ ರಿಸರ್ಚ್

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
4 ನಿಮಿಷ ಓದು 2 ವೀಕ್ಷಣೆಗಳು
ai servie

ಬೆಂಗಳೂರು: ವಿಶ್ವದ ಅಗ್ರಮಾನ್ಯ #1 AI CRM* ಸಂಸ್ಥೆಯಾದ ಸೇಲ್ಸ್‌ಫರ್ಸ್ ಸ್ಟೇಟ್‌ ಆಫ್‌ ರ‍್ವೀಸ್‌  ವರದಿಯ ಫಲಿತಾಂಶಗಳನ್ನು ಪ್ರಕಟಿಸಿದೆ. ವರದಿ ಪ್ರಕಾರ, ಎಐ ನಮ್ಮು ಮುಂದಿನ ದೈನಂದಿನ ಕೆಲಸಗಳನ್ನು ಸ್ವಯಂಚಾಲಿತ ಮಾಡುವುದಿಲ್ಲ ಬದಲಾಗಿ ಸೇವಾ ಕ್ಷೇತ್ರದ ಮೇಲೆ ಹೆಚ್ಚು ಪರಿಣಾಮ ಬೀರಲಿದೆ.

ಸೇವಾ ತಂಡಗಳು ವೇಗ, ವೆಚ್ಚ ಮತ್ತು ಗ್ರಾಹಕರ ತೃಪ್ತಿಯಲ್ಲಿ ಸುಧಾರಣೆಗಾಗಿ ಕಣ್ಣಿಟ್ಟಿದ್ದರಿಂದ ಎಐ ಅತ್ಯಂತ ಪ್ರಾಮುಖ್ಯತೆಯ ವಿಷಯವಾಗಿ ಹೊರಹೊಮ್ಮಿದೆ

ಭಾರತೀಯ ಸೇವಾ ನಾಯಕರ ಪ್ರಾಮುಖ್ಯತಾ ಪಟ್ಟಿಯಲ್ಲಿ ಎಐ ಕೇವಲ ಒಂದು ವರ್ಷದಲ್ಲಿ 7 ರಿಂದ  2ನೇ ಸ್ಥಾನಕ್ಕೆ ಏರಿದೆ. ಆದರೆ ಬದಲಾಗದ ಸಂಗತಿಯೆಂದರೆ ಭಾರತೀಯ ಸೇವಾ ನಾಯಕರ ಪ್ರಮುಖ ಕೇಂದ್ರೀಕೃತ ಉದ್ದೇಶ: ಗ್ರಾಹಕರ ಅನುಭವವನ್ನು ಉತ್ತಮಗೊಳಿಸುವುದು.

ಬದಲಾವಣೆ ಈಗಾಗಲೇ ಆರಂಭವಾಗಿದೆ:

ಭಾರತೀಯ ಸೇವಾ ತಂಡಗಳ ಅಂದಾಜು ಪ್ರಕಾರ, ಪ್ರಸ್ತುತ ಸುಮಾರು ಶೇ.30 ಪ್ರಕರಣಗಳನ್ನು ಎಐ ನಿರ್ವಹಿಸುತ್ತಿದೆ. 2027ರ ವೇಳೆಗೆ, ಎಐ ಏಜೆಂಟರು ಅಥವಾ ಡಿಜಿಟಲ್‌ ಲೇಬರ್‌ ವೇಗ ಪಡೆಯುತ್ತಿದ್ದಂತೆ, ಈ ಪ್ರಮಾಣವು ಶೇ.30 ತಲುಪಲಿದೆ ಎಂದು ಅವರು ನಿರೀಕ್ಷಿಸುತ್ತಿದ್ದಾರೆ. ಈ ಪರಿವರ್ತನೆ ಏಜೆಂಟಿಕ್‌ ಎಂಟ್ರಪ್ರೈಸಸ್ ಎಂಬ ಹೊಸ ಯುಗದ ಉದಯವನ್ನು ಸೂಚಿಸುತ್ತದೆ  ಇಲ್ಲಿ ಎಐ ಏಜೆಂಟರು ಮಾನವ ತಂಡಗಳ ಜೊತೆಯಲ್ಲಿ ಸಹಯೋಗದ ಪಾಲುದಾರರಾಗಿ ಕೆಲಸ ಮಾಡುತ್ತಾರೆ, ಸಾಮಾನ್ಯ ಕೆಲಸಗಳನ್ನು ಸ್ವತಂತ್ರವಾಗಿ ನರ‍್ವಹಿಸುತ್ತಾರೆ ಮತ್ತು ನೌಕರರು ಹೆಚ್ಚು ಕಠಿಣ ಹಾಗೂ ಮೌಲ್ಯಯುತ ಕರ‍್ಯಗಳಿಗೆ ಗಮನ ಕೊಡುತ್ತಾರೆ.

ಹೆಚ್ಚಿನ ಪ್ರಕರಣಗಳನ್ನು ಪರಿಹರಿಸುವುದರ ಹೊರತಾಗಿ, ಸೇವಾ ವೆಚ್ಚವನ್ನು ಕಡಿತಗೊಳಿಸುವುದರಿಂದ ಕಸ್ಟಮರ್‌ ಸಾಟಿಸ್ಫ್ಯಾಕ್ಶನ್‌ ಅನ್ನು ಸುಧಾರಿಸುವವರೆಗೆ ತಮ್ಮ ಪ್ರಭಾವವನ್ನು ಹೆಚ್ಚಿಸಲು ತಂಡಗಳು ಎಐ ಏಜೆಂಟರ ಮೇಲೆ ಬಾಜಿ ಕಟ್ಟುತ್ತಿವೆ. ಏಜೆಂಟಿಕ್‌ ಎಐ ಅಪ್ ಸೆಲ್ ಆದಾಯವನ್ನು ಶೇ.16ರಷ್ಟು ಹೆಚ್ಚಿಸುತ್ತದೆ ಎಂದು ಭಾರತೀಯ ಸೇವಾ ವೃತ್ತಿಪರರು ಅಂದಾಜಿಸಿದ್ದಾರೆ.

ಎಐ ಹೊಂದಿರುವ ಪ್ರತಿನಿಧಿಗಳು ಕಡಿಮೆ ರೂಟಿನ್ ಕೆಲಸ, ಹೆಚ್ಚಿನ ಬೆಳವಣಿಗೆಯ ಅವಕಾಶಗಳು ಮತ್ತು ಪ್ರಕಾಶಮಾನವಾದ ವೃತ್ತಿಜೀವನದ ದೃಷ್ಟಿಕೋನವನ್ನು ವರದಿ ಮಾಡುತ್ತಾರೆ: ಸಾಂಸ್ಥಿಕ ಮಟ್ಟದ ಲಾಭಗಳ ಹೊರತಾಗಿ, ಎಐ ಕೆಲಸದಲ್ಲಿ ವೈಯಕ್ತಿಕ ಸೇವಾ ಪ್ರತಿನಿಧಿಗಳ ಕೆಲಸದ ಅನುಭವಗಳನ್ನು ಮರುರೂಪಿಸುತ್ತಿದೆ.

ಭಾರತದಲ್ಲಿ, ಎಐ ಏಜೆಂಟ್ ಬಳಕೆದಾರರ ೬೯% ಜನರು ಮತ್ತು ಏಜೆಂಟ್‌ಗಳನ್ನು ಬಳಸದವರಲ್ಲಿ ಕೇವಲ ಶೇ.12 ಜನರು ತಮ್ಮ ವೃತ್ತಿ ಭವಿಷ್ಯದ ಬಗ್ಗೆ ಅತ್ಯಂತ ಸಕಾರಾತ್ಮಕ ನಿಲುವು ಹೊಂದಿದ್ದಾರೆ. ಇದು ಭವಿಷ್ಯಕೇಂದ್ರೀತ ಮೊದಲ ಬಳಕೆದಾರರ ಆಯ್ಕೆಪರ ಪಕ್ಷಪಾತವನ್ನು ಪ್ರತಿಬಿಂಬಿಸಬಹುದಾದರೂ, ಇದು ಕೌಶಲ್ಯಾಭಿವೃದ್ಧಿ, ಪರಿಣತಿ ಮತ್ತು ನಾಯಕತ್ವದ ಅವಕಾಶಗಳೊಂದಿಗೆ ಹೊಂದಿಕೆಯಾಗುತ್ತದೆ.

ಸಂಸ್ಥೆಗಳು ಎಐ ಅನ್ನು ಅಳವಡಿಸುತ್ತಿರುವಾಗ, ಭದ್ರತೆ ಮತ್ತು ನಿಖರತೆಯು ಮನಸ್ಸಿನಲ್ಲಿ ಅಗ್ರಸ್ಥಾನದಲ್ಲಿದೆ.  ಭಾರತೀಯ ಸೇವಾ ನಾಯಕರಲ್ಲಿ ಶೇ.90 ಜನರು, ಎಐ ಅಳವಡಿಸುವ ಸಂಪರ್ಕದಲ್ಲಿ ಎದುರಿಸಿದ ಸವಾಲುಗಳು ನಿರೀಕ್ಷಿತ ಅಥವಾ ನಿರೀಕ್ಷೆಗಿಂತ ಸುಲಭವಾಗಿವೆ ಎಂದು ಹೇಳುತ್ತಾರೆ.

ಭದ್ರತೆಯು ಪ್ರಮುಖ ಕಾಳಜಿಯಾಗಿ ಉಳಿದಿದೆ, ಭಾರತೀಯ ಸೇವಾ ನಾಯಕರಲ್ಲಿ ಜನರು ಅದು ತಮ್ಮ ಎಐ ಯೋಜನೆಗಳನ್ನು ವಿಳಂಬಗೊಳಿಸಿದ್ದಾರೆ ಅಥವಾ ಸೀಮಿತಗೊಳಿಸಿದ್ದಾರೆ ಎಂದು ವರದಿ ಮಾಡಿದ್ದಾರೆ.

ದೃಷ್ಟಿಕೋನ ಬದಲಾಗುತ್ತಿದೆ. ಸೇಲ್ಸ್‌ ಫರ‍್ಸ್‌ ನ ಸ್ಟೇಟ್‌ ಆಫ್‌ ಐಟಿ ಸೆಕ್ಯುರಿಟಿ ವರದಿಯ ಪ್ರಕಾರ, ಸಮೀಕ್ಷೆಯಲ್ಲಿ ಭಾಗವಹಿಸಿದ ಎಲ್ಲಾ ಭದ್ರತಾ ನಾಯಕರು ಎಐ ಏಜೆಂಟ್‌ಗಳು ತಮ್ಮ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ಸಾರ‍್ಥ್ಯದ ಬಗ್ಗೆ ಆಶಾವಾದ ನಿಲುವು ಹೊಂದಿದ್ದಾರೆ.

ಬೆದರಿಕೆ ಪತ್ತೆ, ಅಸಂಗತತೆಯ ಮೇಲ್ವಿಚಾರಣೆ ಮತ್ತು ಉಲ್ಲಂಘನೆ ತಡೆಗಟ್ಟುವಿಕೆಯನ್ನು ಹೆಚ್ಚಿಸುವ ಎಐ ಸಾರ‍್ಥ್ಯವನ್ನು ನಾಯಕರು ಎತ್ತಿ ತೋರಿಸಿದರು.

ಜವಾಬ್ದಾರಿಯುತವಾಗಿ ಅಳವಡಿಸಿದಾಗ, ಏಜೆಂಟಿಕ್ ಎಐ ಅನ್ನು ಈಗ ಅಪಾಯವೆಂದು ಅಲ್ಲ, ಬದಲಾಗಿ ಹೆಚ್ಚಿನ ಧೈರ್ಯ ಮತ್ತು ನಂಬಿಕೆಗೆ ಪ್ರೇರಕಶಕ್ತಿಯೆಂದು ಹೆಚ್ಚಾಗಿ ಪರಿಗಣಿಸಲಾಗುತ್ತಿದೆ.

ಎಐ ಹೆಚ್ಚು ಸಂವಾದಾತ್ಮಕವಾಗುತ್ತಿದೆ. ಈಗ ಭಾರತದಲ್ಲಿನ ಶೇ.44 ಸೇವಾ ತಂಡಗಳು ಒಂದೇ ಸಮಯದಲ್ಲಿ ಹಲವು ವಿಧದ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ರಚಿಸುವ ಸಾಮರ್ಥ್ಯ ಹೊಂದಿರುವ ಮಲ್ಟಿಮೋಡಲ್ ಎಐ ಅನ್ನು ಬಳಸುತ್ತಿವೆ. ಜೊತೆಗೆ, ಧ್ವನಿ ಆಧಾರಿತ ಎಐ ಬಳಕೆದಾರರಲ್ಲಿ ಶೇ..90 ಜನರು ಗ್ರಾಹಕರಿಗೆ ಮಾನವ ಪ್ರತಿನಿಧಿಗಳತ್ತ ಬದಲಾಗುವ ಪ್ರಕ್ರಿಯೆ ಸುಗಮವಾಗಿದ್ದು, ಇದು ಪ್ರವೇಶಾತಿ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

ಈ ವರದಿಯ ಮಾಹಿತಿಯನ್ನು ಡಬಲ್-ಅನಾನಿಮಸ್ ಸಮೀಕ್ಷೆಯಿಂದ ಸಂಗ್ರಹಿಸಲಾಗಿದೆ, ಇದರಲ್ಲಿ 6500 ಸೇವಾ ವೃತ್ತಿಪರರು ಮತ್ತು ನರ‍್ಧಾರ ತೆಗೆದುಕೊಳ್ಳುವವರು ಭಾಗವಹಿಸಿದ್ದರು. ಇವರಲ್ಲಿ ಭಾರತದಿಂದ 300 ಪ್ರತಿಕ್ರಿಯೆ ನೀಡಿದ್ದಾರೆ. ಸಮೀಕ್ಷೆ 2025ರ ಏಪ್ರಿಲ್ 25ರಿಂದ ಜೂನ್ 6ರವರೆಗೆ ನಡೆಯಿತು.

ಅರ್ಜೆಂಟೀನಾ, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಮ್, ಬ್ರೆಜಿಲ್, ಕೆನಡಾ, ಚಿಲಿ, ಕೊಲಂಬಿಯಾ, ಚೆಕ್ ರಿಪಬ್ಲಿಕ್, ಡೆನ್ಮರ್ಕ್, ಫಿನ್ ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ರೀಸ್, ಭಾರತ, ಇಂಡೋನೇಶಿಯಾ, ಐರ‍್ಲೆಂಡ್, ಇಸ್ರೇಲ್, ಇಟಲಿ, ಜಪಾನ್, ಮೆಕ್ಸಿಕೋ, ನೆದರ್‌ಲ್ಯಾಂಡ್ಸ್, ನ್ಯೂಜಿಲ್ಯಾಂಡ್, ನಾರ್ವೆ, ಪೆರು, ಫಿಲಿಪೈನ್ಸ್, ಪೋಲಂಡ್, ಪರ್ಚುಗಲ್, ಸೌದಿ ಅರೇಬಿಯಾ, ಸಿಂಗಾಪುರ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಸ್ಪೇನ್, ಸ್ವೀಡನ್, ಸ್ವಿಟ್ಜರ್‌ಲ್ಯಾಂಡ್, ಥೈಲ್ಯಾಂಡ್, ಟರ್ಕಿ ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕದಿಂದ ಮಾಹಿತಿ ಸಂಗ್ರಹಿಸಲಾಗಿದೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8392 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment