Wednesday, May 13, 2026
Google search engine
Homeದೇಶ`ದೇಶದ್ರೋಹಿ ಸ್ನೇಹಿತ’ ಹೇಳಿಕೆ ವಿವಾದ: ರಾಹುಲ್ ಗಾಂಧಿ- ರವನೀತ್ ಬಿಟ್ಟು ಚಕಮಕಿ

`ದೇಶದ್ರೋಹಿ ಸ್ನೇಹಿತ’ ಹೇಳಿಕೆ ವಿವಾದ: ರಾಹುಲ್ ಗಾಂಧಿ- ರವನೀತ್ ಬಿಟ್ಟು ಚಕಮಕಿ

ಹೊಸದಿಲ್ಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕೇಂದ್ರ ಸಚಿವ ರವನೀತ್ ಬಿಟ್ಟು ನಡುವೆ ಬುಧವಾರ ಸಂಸತ್ ಭವನದ ಸಂಕೀರ್ಣದಲ್ಲಿ ಮಾತಿನ ಚಕಮಕಿ ನಡೆದಿದ್ದು, “ನನ್ನ ದೇಶದ್ರೋಹಿ ಸ್ನೇಹಿತ’ ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ.

ಬುಧವಾರ ಬೆಳಿಗ್ಗೆ ಸಂಸತ್ ಭವನದ ಮಕರ ದ್ವಾರ ಬಳಿ ಅಮಾನತುಗೊಂಡ ಸಂಸದರೊಂದಿಗೆ ರಾಹುಲ್ ಗಾಂಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆ, ಬಿಟ್ಟು ಸಂಕೀರ್ಣಕ್ಕೆ ಪ್ರವೇಶಿಸುತ್ತಿದ್ದರು. ಈ ವೇಳೆ ಅಮಾನತುಗೊಂಡ ಸಂಸದರು ಯುದ್ಧ ಗೆದ್ದವರಂತೆ ಕುಳಿತಿದ್ದಾರೆ ಎಂದು ಬಿಟ್ಟು ಪ್ರತಿಕ್ರಿಯ

ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ ಅವರು “ನೋಡಿ ದೇಶದ್ರೋಹಿ ನಡೆದುಕೊಂಡು ಬರುತ್ತಿದ್ದಾನೆ, ಅವನ ನಡೆಯ ವೇಗ ನೋಡಿ” ಎಂದು ಹೇಳಿ ಕೈಕುಲುಕಲು ಮುಂದಾದರು. ಆದರೆ ಕಾಂಗ್ರೆಸ್ ದೇಶವನ್ನು

ಮಾರಿದೆ ಎಂದು ಆರೋಪಿಸಿದ ಬಿಟ್ಟು ಕೈಕುಲುಕುವುದನ್ನು ನಿರಾಕರಿಸಿದರು. ಬಳಿಕ ಕಾಂಗ್ರೆಸ್ ಸಂಸದರು ಬಿಜೆಪಿ ದೇಶವನ್ನು ಮಾರಿದೆ ಎಂದು ತಿರುಗೇಟು ನೀಡಿದರು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಬಿಟ್ಟು ಅಲ್ಲಿಂದ ತೆರಳಿದರು

ರವನೀತ್ ಬಿಟ್ಟು ಅವರು ಹಿಂದೆ ಕಾಂಗ್ರೆಸ್ ಪಕ್ಷದ ಸಂಸದರಾಗಿದ್ದು, ನಂತರ ಬಿಜೆಪಿ ಸೇರ್ಪಡೆಯಾಗಿದ್ದರು. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕವೂ ಅವರು ಬಿಜೆಪಿಯಲ್ಲೇ ಮುಂದುವರಿ

ಈ ಹೇಳಿಕೆಯನ್ನು ಸಿಖ್ ಶಾಸಕ ಹಾಗೂ ದಿಲ್ಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಖಂಡಿಸಿದರು. “ಸಿಖ್ಖರು ದೇಶದ್ರೋಹಿಗಳಾಗಲು ಸಾಧ್ಯವಿಲ್ಲ. ಈ ಹೇಳಿಕೆ ಕಾಂಗ್ರೆಸ್ ಮನೋಭಾವದಲ್ಲಿ ಬದಲಾವಣೆ ಇಲ್ಲದಿರುವುದನ್ನು ತೋರಿಸುತ್ತದೆ” ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ಗಾಂಧಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, “ದ್ರೋಹ ಮಾಡಿದವನನ್ನು ಬೇರೆ ಯಾವ ಪದದಲ್ಲಿ ಕರೆಯಬೇಕು? ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡದಾಗ ನಾವು ಇನ್ನೇನು ಮಾಡಬಹುದು?” ಎಂದು ಕಾಂಗ್ರೆಸ್ ಸಂಸದ ಅಮರಿಂದರ್ ರಾಜಾ ವಾರಿಂಗ್ ಪ್ರಶ್ನಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments