Friday, May 29, 2026
Google search engine
Homeದೇಶಬೆಕ್ಕು ಸಾಕಲು ಹೆತ್ತವರು ಅನುಮತಿ ಕೊಡಲಿಲ್ಲ ಅಂತ ವೈದ್ಯೆ ಆತ್ಮಹತ್ಯೆ

ಬೆಕ್ಕು ಸಾಕಲು ಹೆತ್ತವರು ಅನುಮತಿ ಕೊಡಲಿಲ್ಲ ಅಂತ ವೈದ್ಯೆ ಆತ್ಮಹತ್ಯೆ

ಬೆಕ್ಕು ಸಾಕಲು ಹೆತ್ತವರು ಅನುಮತಿ ಕೊಡಲಿಲ್ಲ ಎಂದು ನೊಂದು 23 ವರ್ಷದ ವೈದ್ಯೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದ್‌ ನಲ್ಲಿ ನಡೆದಿದೆ.

ಅತ್ವಾಲ್‌ ನಗರದಲ್ಲಿ ಶುಕ್ರವಾರ ಶ್ರೇಷ್ಠ ಅಲಿಯಾಸ್‌ ಟಿ ಪ್ರಿನ್ಸಿ ಕ್ಷುಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಯುವ ವೈದ್ಯೆ.

ತಾಯಿ ಕುಸುಮಲತಾ ಮತ್ತು ಅಜ್ಜಿ ಜೊತೆ ಕೆಲವು ವಾರಗಳಿಂದ ವಾಸವಾಗಿದ್ದ ಪ್ರಿನ್ಸಿ, ಬೆಕ್ಕು ತಂದು ಸಾಕುತ್ತಿದ್ದಳು. ಬೆಕ್ಕು ತಂದ ನಂತರ ಪ್ರಿನ್ಸಿ, ಕೋಲ್ಡ್‌ ಮತ್ತು ಶೀತದ ಬಳಲುತ್ತಿದ್ದಳು.

ಬೆಕ್ಕು ತಂದ ನಂತರ ಪದೇಪದೆ ಅಸ್ವಸ್ಥಳಾಗುತ್ತಿದ್ದರಿಂದ ಪ್ರಿನ್ಸಿ ಮತ್ತು ತಾಯಿ ನಡುವೆ ಪದೇಪದೆ ಜಗಳ ಆಗುತ್ತಿದ್ದವು. ತಾಯಿ ಮತ್ತು ಅಜ್ಜಿ ಹೊರಗೆ ಹೋಗಿದ್ದಾಗ ಪ್ರಿನ್ಸಿ ಮನೆಯಲ್ಲಿ ಒಬ್ಬಳೇ ಇದ್ದಾಗ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ವಿಚಾರಣೆ ನಡೆಸಿದಾಗ ತಾಯಿ, ಬೆಕ್ಕು ಸಾಕುವ ವಿಷಯಕ್ಕೆ ಮನೆಯಲ್ಲಿ ಪದೇಪದೇ ಜಗಳ ಆಗುತ್ತಿತ್ತು. ಬೆಕ್ಕು ಮನೆಗೆ ತಂದ ನಂತರ ಆಕೆಯ ಆರೋಗ್ಯ ಪದೇಪದೇ ಹದಗೆಡುವುತ್ತಿದ್ದರಿಂದ ಬೆಕ್ಕು ಸಾಕಬಾರದು ಎಂದು ಹೇಳಿದ್ದೆವು ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments