Tuesday, June 23, 2026
Google search engine
Homeದೇಶಪಕ್ಷ ಒಡೆಯಲು ಸಂಸದರಿಗೆ 40 ಕೋಟಿ ಆಮೀಷ: ಟಿಎಂಸಿ ಸಂಸೆದೆ ಮಹುತಾ ಬಾಂಬ್

ಪಕ್ಷ ಒಡೆಯಲು ಸಂಸದರಿಗೆ 40 ಕೋಟಿ ಆಮೀಷ: ಟಿಎಂಸಿ ಸಂಸೆದೆ ಮಹುತಾ ಬಾಂಬ್

ಕೋಲ್ಕತಾ: ಬಂಡಾಯ ಘೋಷಿಸಿ ಪಕ್ಷ ಒಡೆಯಲು ಸಂಸದರಿಗೆ ತಲಾ 40 ಕೋಟಿ ರೂ. ಆಮೀಷ ಒಡ್ಡಲಾಗಿದೆ ಎಂದು ಆರೋಪಿಸಿದ್ದ ಮಹುವಾ ಮೊಯಿತ್ರಾ ವಿರುದ್ಧ 20 ಬಂಡಾಯ ಟಿಎಂಸಿ ಸಂಸದರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಪಕ್ಷ ಬದಲಾಯಿಸಿದ ಸಂಸದರಿಗೆ 40 ಕೋಟಿ ರೂ.ಗಳಷ್ಟು ಆಮೀಷ ನೀಡಲಾಗಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದರು. ಇವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಬಂಡಾಯ ಟಿಎಂಸಿ ಸಂಸದರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬೆಂಬಲಿಗರಾದ ಮೊಯಿತ್ರಾ, 20 ಸಂಸದರಿಗೆ ಮುಂಗಡವಾಗಿ 4 ಕೋಟಿ ರೂ., ನಂತರ 36 ತಿಂಗಳವರೆಗೆ ಪ್ರತಿ ತಿಂಗಳು 1 ಕೋಟಿ ರೂ. ನೀಡಲಾಗಿದೆ ಎಂದು ಆರೋಪಿಸಿದ್ದರು.

ಮಹಾರಾಷ್ಟ್ರ ಸಂಸದರಿಗೆ ಪಕ್ಷ ಬದಲಾಯಿಸಲು ತಲಾ 15 ಕೋಟಿ ರೂ. ನೀಡಲಾಗುತ್ತಿದೆ ಎಂಬ ಶಿವಸೇನೆ (ಯುಬಿಟಿ) ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಅವರ ಹೇಳಿಕೆಗಳು ಬಂದವು.

“ಕೇವಲ 15 ಕೋಟಿ?

ಸಸ್ತೇ ಮೇ ಕ್ಯೋ ಜಾ ರಹೇ ಹೈ? (ಇಷ್ಟು ಕಡಿಮೆ ಮೊತ್ತಕ್ಕೆ ಯಾಕೆ ಹೋಗ್ತಿದ್ದಾರೆ?) ನಮ್ಮವರಿಗೆ ಮುಂಗಡವಾಗಿ 4 ಕೋಟಿ ರೂ. ಮತ್ತು ಮುಂದಿನ 36 ತಿಂಗಳ ಅವಧಿಗೆ ತಿಂಗಳಿಗೆ 1 ಕೋಟಿ ರೂ. ಸಿಗುತ್ತದೆ ಎಂದು ನಂಬಿ” ಎಂದು ಮೊಯಿತ್ರಾ ಜೂನ್ 17 ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments