Tuesday, August 11, 2026
Google search engine
Homeವಿದೇಶಕೊಲಂಬಿಯಾದಲ್ಲಿ ಭೀಕರ ಭೂಕಂಪನ: 111ಕ್ಕೇರಿದ ಸಾವಿನ ಸಂಖ್ಯೆ

ಕೊಲಂಬಿಯಾದಲ್ಲಿ ಭೀಕರ ಭೂಕಂಪನ: 111ಕ್ಕೇರಿದ ಸಾವಿನ ಸಂಖ್ಯೆ

ಕೊಲಂಬಿಯಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪನದಿಂದ ಕನಿಷ್ಠ 111 ಮಂದಿ ಮೃತಪಟ್ಟಿದ್ದು, ದೇಶದ ಪರಿಸ್ಥಿತಿ ಕಠಿಣವಾಗಿದೆ ಎಂದು ಹೇಳಲಾಗಿದೆ.

ಸ್ಥಳೀಯ ಕಾಲಮಾನ ಪ್ರಕಾರ ಸೋಮವಾರ ಮಧ್ಯಾಹ್ಯ 12.30ರ ಸುಮಾರಿಗೆ 7.4 ತೀವ್ರತೆಯ ಪ್ರಬಲ ಭೂಕಂಪನ ಸಂಭವಿಸಿದ್ದು, ಇದು ವೆನಿಜುವೆಲಾ ಗಡಿ ಭಾಗ ಹಾಗೂ ಈಕ್ವೇಡಾರ್‌ ನಲ್ಲೂ ಭೂಮಿ ಕಂಪಿಸಿದೆ.
ಸ್ಯಾನ್ ಜೋಸ್ ಡೆಲ್ ಪಾಲ್ಮರ್ ಬಳಿ 107 ಕಿ.ಮೀ. ಆಳದಲ್ಲಿ ಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ.

ಚೊಕೊ ವಲಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಯಾನ್‌ ಜೋಸ್‌ ಪಾಲ್ಮರ್‌ ಬಳಿ ಅಪಾರ ಹಾನಿ ಭೂಕಂಪನದಿಂದ ಉಂಟಾಗಿದ್ದು, ಹಲವಾರು ಕಟ್ಟಡಗಳು ಧರೆಗುರುಳಿವೆ. ನಾಗರಿಕರು ಉರುಳುತ್ತಿರುವ ಕಟ್ಟಡದಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿರುವ ದೃಶ್ಯಗಳು ವೈರಲ್‌ ಆಗಿವೆ.

ಪೆರೆರಾ ಎಂಬ ಪ್ರದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದ್ದು, 4800ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಆವಶೇಷಗಳಡಿ ಹಲವಾರು ಮಂದಿ ಸಿಲುಕಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಭೀತಿ ಇದೆ.

ಪ್ರಬಲ ಭೂಕಂಪನ ಸಂಭವಿಸಿದ್ದರೂ ಸುನಾಮಿ ಭೀತಿ ಇಲ್ಲ ಎಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ಅಪಾರ ಪ್ರಮಾಣದಲ್ಲಿ ಕಟ್ಟಡಗಳು ಹಾನಿಯಾಗಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚುವ ಭೀತಿ ಇದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments