Wednesday, May 13, 2026
Google search engine
Homeಕ್ರೀಡೆಬಿಸಿಸಿಐ ಗುತ್ತಿಗೆಯಲ್ಲಿ `ಬಿ' ಗುಂಪಿಗೆ ಕೊಹ್ಲಿ, ರೋಹಿತ್‌ ಗೆ ಹಿಂಬಡ್ತಿ: ಶಮಿ ಔಟ್

ಬಿಸಿಸಿಐ ಗುತ್ತಿಗೆಯಲ್ಲಿ `ಬಿ’ ಗುಂಪಿಗೆ ಕೊಹ್ಲಿ, ರೋಹಿತ್‌ ಗೆ ಹಿಂಬಡ್ತಿ: ಶಮಿ ಔಟ್

ಟಿ-20 ಮತ್ತು ಟೆಸ್ಟ್ ಕ್ರಿಕೆಟ್‌ ಗೆ ವಿದಾಯ ಹೇಳಿರುವ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಅವರನ್ನು ಬಿಸಿಸಿಐ ಶನಿವಾರ ಪ್ರಕಟಿಸಿದ ಗುತ್ತಿಗೆ ಪಟ್ಟಿಯಲ್ಲಿ ಹಿಂಬಡ್ತಿ ನೀಡಿದೆ. ಮೊಹಮದ್‌ ಶಮಿ ಅವರನ್ನು ಬಿಸಿಸಿಐ ಗುತ್ತಿಗೆಯಿಂದಲೇ ಹೊರಗೆ ಹಾಕಲಾಗಿದೆ.

ಭಾರತ ತಂಡದ ಸ್ಟಾರ್‌ ಆಟಗಾರರಾದ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮ ಅವರನ್ನು ಎ ಗುಂಪಿನಿಂದ ಬಿ ಗುಂಪಿಗೆ ಹಿಂಬಡ್ತಿ ನೀಡಲಾಗಿದೆ. ಇದರಿಂದ ಈ ಇಬ್ಬರು ಸ್ಟಾರ್‌ ಆಟಗಾರರ ವೇತನದಲ್ಲಿ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಲಿದೆ.

ಕೊಹ್ಲಿ ಮತ್ತು ರೋಹಿತ್‌ ಶರ್ಮ ಅವರಿಗೆ ಹಿಂಬಡ್ತಿ ನೀಡುವ ಮೂಲಕ ಬಿಸಿಸಿಐ ಭಾರತೀಯ ಕ್ರಿಕೆಟ್‌ ನಲ್ಲಿ ಹೊಸ ತಲೆಮಾರಿಗೆ ಮನ್ನಣೆ ನೀಡುವ ಬಗ್ಗೆ ಮುನ್ಸೂಚನೆ ಸ್ಪಷ್ಟವಾಗಿ ನೀಡಿದೆ. ಈ ಮೂಲಕ ಈ ಇಬ್ಬರು ಕ್ರಿಕೆಟಿಗರು ಟೆಸ್ಟ್‌ ಕ್ರಿಕೆಟ್‌ ಗೆ ಮರಳುವ ಬಗ್ಗೆ ಅನುಮಾನ ಹೆಚ್ಚಿದೆ.

ಬಹು ಮಾದರಿಯ ಕ್ರಿಕೆಟ್‌ ನಲ್ಲಿ ಆಡುವವರಿಗೆ ಮಾತ್ರ ಎ ಮತ್ತು ಎ+ ದರ್ಜೆಯಲ್ಲಿ ಸ್ಥಾನ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎ ದರ್ಜೆಯ ಕ್ರಿಕೆಟ್‌ ನಲ್ಲಿ ಶುಭಮನ್‌ ಗಿಲ್‌, ಜಸ್‌ ಪ್ರೀತ್‌ ಬುಮ್ರಾ ಮತ್ತು ರವೀಂದ್ರ ಜಡೇಜಾ ಮಾತ್ರ ಸ್ಥಾನ ಗಳಿಸಿದ್ದಾರೆ.

ಅಜಿತ್‌ ಅರ್ಗಕರ್‌ ನೇತೃತ್ವದ ಆಯ್ಕೆ ಸಮಿತಿ ಗುತ್ತಿಗೆ ಪದ್ಧತಿಯಲ್ಲಿ ನಿಗದಿಪಡಿಸುವ ವೇತನದಲ್ಲಿ ಪರಿಷ್ಕರಣೆಗೆ ಸೂಚಿಸಿದ್ದು, ಪ್ರಸ್ತುತ ಎ+ ವಿಭಾಗ ರದ್ದುಗೊಳಿಸಲಾಗಿದ್ದು, ಎ ಆಟಗಾರರಿಗೆ ವಾರ್ಷಿಕ 7 ಕೋಟಿ ರೂ. ನೀಡುವ ವ್ಯವಸ್ಥೆ ರದ್ದಾಗಲಿದೆ. ಅಲ್ಲದೇ ಆಟಗಾರರ ಪ್ರದರ್ಶನದ ಆಧಾರದ ಮೇಲೆ ಬಹುಮಾನ ರೂಪದಲ್ಲಿ ನೀಡುವ ಪ್ರಸ್ತಾಪ ಇಟ್ಟಿದೆ. ಆದರೆ ಈ ಬಗ್ಗೆ ಬಿಸಿಸಿಐ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಶುಭಮನ್‌ ಗಿಲ್‌, ರವೀಂದ್ರ ಜಡೇಜಾ, ಜಸ್‌ ಪ್ರೀತ್‌ ಬುಮ್ರಾ

ಬಿ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ವಾಷಿಂಗ್ಟನ್‌ ಸುಂದರ್‌, ಕೆಎಲ್‌ ರಾಹುಲ್‌, ಹಾರ್ದಿಕ್‌ ಪಾಂಡ್ಯ, ಮೊಹಮದ್‌ ಸಿರಾಜ್‌, ಕುಲದೀಪ್‌ ಯಾದವ್‌, ಯಶಸ್ವಿ ಜೈಸ್ವಾಲ್‌, ಶ್ರೇಯಸ್‌ ಅಯ್ಯರ್.‌

ಸಿ ಅಕ್ಸರ್‌ ಪಟೇಲ್‌, ತಿಲಕ್‌ ವರ್ಮಾ, ರಿಂಕು ಸಿಂಗ್‌, ಶಿವಂ ದುಬೆ, ಸಂಜು ಸ್ಯಾಮ್ಸನ್‌, ಅರ್ಷದೀಪ್‌ ಸಿಂಗ್‌, ಪ್ರಸಿದ್ಧ ಕೃಷ್ಣ, ಅಕ್ಷ್‌ ದೀಪ್‌, ಧ್ರುವ ಜುರೆಲ್‌, ಹರ್ಷಿತ್‌ ರಾಣಾ, ವರುಣ್‌ ಚಕ್ರವರ್ತಿ, ನಿತೀಶ್‌ ಕುಮಾರ್‌ ರೆಡ್ಡಿ, ಅಭಿಷೇಕ್‌ ಶರ್ಮ, ಸಾಯಿ ಸುದರ್ಶನ್‌, ರವಿ ಬಿಶ್ನೋಯಿ, ಋತುರಾಜ್‌ ಗಾಯಕ್ವಾಡ್.‌

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments