Friday, May 15, 2026
Google search engine
Homeಅಪರಾಧಪ್ರೀತಿಸಿ ಮದುವೆ ಆದ ಪತ್ನಿ ಕೊಂದು ರುಂಡದ ಜೊತೆ ಪೊಲೀಸರಿರೆ ಶರಣಾದ ಪತಿ!

ಪ್ರೀತಿಸಿ ಮದುವೆ ಆದ ಪತ್ನಿ ಕೊಂದು ರುಂಡದ ಜೊತೆ ಪೊಲೀಸರಿರೆ ಶರಣಾದ ಪತಿ!

ಪ್ರೀತಿಸಿ ಮದುವೆ ಆದ ಪತ್ನಿಯೇ ಅನೈತಿಕ ಸಂಬಂಧ ಹೊಂದಿದ್ದರಿಂದ ಬೇಸತ್ತ ಗಂಡ ಪತ್ನಿಯ ಕೊಂದು ಆಕೆಯ ರುಂಡದ ಜೊತೆ ಪತಿ ಪೊಲೀಸರಿಗೆ ಶರಣಾದ ಆಘಾತಕಾರಿ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.

ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೆನ್ನಾಗರ ಸಮೀಪದ ಕಾಚನಾಯಕನಹಳ್ಳಿ ನಿವಾಸಿ ಶಂಕರ್ (28) ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹೆಬ್ಬಗೋಡಿ ನಿವಾಸಿ ಮಾನಸ (26) ಕೊಲೆಯಾದ ಮಹಿಳೆ.

ಮಾನಸ ಮತ್ತು ಶಂಕರ್‌ ಪ್ರೀತಿಸಿ ಮದುವೆಯಾಗಿದ್ದರು. ತಿಂಗಳ ಹಿಂದಷ್ಟೇ ಹೀಲಲಗೆ ಗ್ರಾಮದ ಬಾಡಿಗೆ ಮನೆಗೆ ಶಿಫ್ಟ್‌ ಆಗಿದ್ದರು. ಇದೇ ತಿಂಗಳ 3ನೇ ತಾರೀಖು ಶಂಕರ್‌ ಕೆಲಸದ ನಿಮಿತ್ತ ತೆರಳಿದ್ದ, ಹೊರಡುವಾಗ ಮಾರನೆ ದಿನ ಬರುವುದಾಗಿ ಹೇಳಿದ್ದ.

ಕೆಲಸ ಬೇಗ ಮುಗಿದ ಹಿನ್ನೆಲೆ ಪತ್ನಿ ಒಬ್ಬಳೆ ಇರ್ತಾಳೆಂದು ತಡರಾತ್ರಿಯೇ ವಾಪಸ್‌ ಆಗಿದ್ದ. ಆದ್ರೆ ಗಂಡನ ಚಿಂತೆಯೇ ಇಲ್ಲದೇ ಪತ್ನಿ ಪ್ರಿಯಕರನೊಂದಿಗೆ ರಾಸಲೀಲೆಯಲ್ಲಿ ಮೈಮರೆತಿದ್ದಾಗಲೇ ಸಿಕ್ಕಿಬಿದ್ದಿದ್ದಾಳೆ.

ಆಕ್ರೋಶಗೊಂಡ ಪತಿ ಶಂಕರ್‌ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ. ನೀನು ನನಗೆ ಬೇಡ ಅಂತ ಪ್ರಿಯಕರನ ಜೊತೆಗೇ ಮನೆಯಿಂದ ಹೊರಗೆ ಹಾಕಿದ್ದಾನೆ. ಆದರೆ ಮಾನಸ ಮಾತ್ರ ಮನೆಗೆ ವಾಪಸ್ ಕರೆಸಿಕೊಳ್ಳುವಂತೆ ಕಿರುಕುಳ ನೀಡುತ್ತಿದ್ದಳು. ಗುರುವಾರ ರಾತ್ರಿ ಸಹ ಮನೆಗೆ ಬಂದು ಗಲಾಟೆ ಮಾಡಿದ್ದಾಳೆ. ಇದರಿಂದ ಬೇಸತ್ತ ಪತಿ ಆಕೆಯ ತಲೆ ಕಡೆದು ರುಂಡ ಸಮೇತ ಸೂರ್ಯನಗರ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ.

ಸೂರ್ಯನಗರ ಪೊಲೀಸರು ಶಂಕರ್ ನನ್ನು ವಶಕ್ಕೆ ಪಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದಂಪತಿಗೆ ಮಕ್ಕಳು ಇರಲಿಲ್ಲ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments