Monday, July 13, 2026
Google search engine
Homeಅಪರಾಧಬೆಂಗಳೂರಿನಲ್ಲಿ ಬಾಲಕಿ ಶವದ ಸೂಟ್ ಕೇಸ್ ಬಿಸಾಡಿದ್ದ 7 ಮಂದಿ ಬಿಹಾರದಲ್ಲಿ ಅರೆಸ್ಟ್

ಬೆಂಗಳೂರಿನಲ್ಲಿ ಬಾಲಕಿ ಶವದ ಸೂಟ್ ಕೇಸ್ ಬಿಸಾಡಿದ್ದ 7 ಮಂದಿ ಬಿಹಾರದಲ್ಲಿ ಅರೆಸ್ಟ್

ಬೆಂಗಳೂರಿನಲ್ಲಿ ಸೂಟ್ ಕೇಸ್ ನಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ 7 ಆರೋಪಿಗಳನ್ನು ಬಿಹಾರದಲ್ಲಿ ಬಂಧಿಸಲಾಗಿದೆ.

ಮೇ 21ರಂದು ಆನೇಕಲ್ ತಾಲೂಕಿನ ಚಂದಾಪುರ ರೈಲ್ವೆ ಬ್ರಿಡ್ಜ್‌ ಬಳಿ ರೈಲಿನಿಂದ ಬಿಸಾಡಿದ್ದ ಸೂಟ್ ಕೇಸ್ ನಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಮತ್ತೊಂದು ಮೂಲದ ಪ್ರಕಾರ ರೈಲಿನಿಂದ ಸೂಟ್ ಕೇಸ್ ತಂದ ನಂತರ ಕ್ಯಾಬ್ ನಲ್ಲಿ ಬಂದು ಸೂಟ್ ಕೇಸ್ ಬಿಸಾಡಿದ್ದರು ಎಂದು ಹೇಳಲಾಗಿತ್ತು.

ಪ್ರಕರಣದ ಬೆನ್ನು ಬಿದ್ದಿದ್ದ ಸೂರ್ಯನಗರ ಠಾಣೆಯ ಪೊಲೀಸರು ಬಿಹಾರದಲ್ಲಿ 7 ಮಂದಿಯನ್ನು ಬಂಧಿಸಿದ್ದು, ಬಂಧಿತರಲ್ಲಿ ಮೂವರ ಗುರುತು ಪತ್ತೆಯಾಗಿದ್ದು, ಉಳಿದವರ ಗುರುತು ಪತ್ತೆ ಕಾರ್ಯ ನಡೆದಿದೆ.

ಆಶಿಕ್ ಕುಮಾರ್, ಮುಖೇಶ್ ಮತ್ತು ರಾಜಾರಾಮ್ ಮೋಹನ್ ಎಂಬುವವರನ್ನು ಗುರುತಿಸಲಾಗಿದ್ದು, ಆಶಿಕ್ ಕುಮಾರ್ ವಿವಾಹಿತನಾಗಿದ್ದು, ಆತನಿಗೆ ಇಬ್ಬರು ಮಕ್ಕಳಿದ್ದಾರೆ. ಬಂಧಿತರನ್ನು ಬೆಂಗಳೂರಿಗೆ ಕರೆತರಲಾಗಿದ್ದು, ವಿಚಾರಣೆ ಮುಂದುವರಿದಿದೆ.

ಸೂಟ್‌ಕೇಸ್‌ನಲ್ಲಿ ಶವ ಮಾತ್ರ ಇದ್ದು, ಯಾವುದೇ ಗುರುತಿನ ಚೀಟಿ ಅಥವಾ ವೈಯಕ್ತಿಕ ವಸ್ತುಗಳು ಪತ್ತೆಯಾದ ಕಾರಣ ಪೊಲೀಸರಿಗೆ ಈ ಪ್ರಕರಣ ಕಗ್ಗಂಟಾಗಿತ್ತು. ಹತ್ಯೆಯಾದ ಬಾಲಕಿಯನ್ನು ರೀಮಾ (17) ಎಂದು ಗುರುತಿಸಲಾಗಿತ್ತು.

ಪೊಲೀಸರು ರೈಲು ಹಳಿಗಳ ಪಕ್ಕದಲ್ಲಿ ಪತ್ತೆಯಾಗುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲೋ ಕೊಲೆ ಮಾಡಿ ರೈಲಿನಲ್ಲಿ ತಂದು ಬಿಸಾಡುವ ಪ್ರಕರಣಗಳು ಹೆಚ್ಚುತ್ತಿರುವ ಗಮನ ಹರಿಸಿದ್ದಾರೆ.

ಮೇ 21 ರಂದು ಚಂದಾಪುರ ರೈಲ್ವೆ ಬ್ರಿಡ್ಜ್‌ ಬಳಿ ಸೂಟ್‌ಕೇಸ್‌ನಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು. ಹತ್ಯೆಯಾದ ಬಾಲಕಿಯನ್ನು ರೀಮಾ (17) ಎಂದು ಗುರುತಿಸಲಾಗಿತ್ತು. ಪ್ರಾಥಾಮಿಕ ತನಿಖೆಯಲ್ಲಿ, ಬೇರೆಡೆ ಕೊಲೆ ಮಾಡಿ, ಶವ ಇಲ್ಲಿ ಎಸೆಯಲಾಗಿದೆ ಎಂದು ತಿಳಿದು ಬಂದಿತ್ತು. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments