Monday, June 29, 2026
Google search engine
Homeದೇಶನ.15ರಿಂದ ಫಾಸ್ಟ್‌ಟ್ಯಾಗ್ ನಿಯಮದಲ್ಲಿ ಬದಲಾವಣೆ: ದಂಡ ಪಾವತಿಯ ಮೊತ್ತದಲ್ಲಿ ಕಡಿತ!

ನ.15ರಿಂದ ಫಾಸ್ಟ್‌ಟ್ಯಾಗ್ ನಿಯಮದಲ್ಲಿ ಬದಲಾವಣೆ: ದಂಡ ಪಾವತಿಯ ಮೊತ್ತದಲ್ಲಿ ಕಡಿತ!

ನವದೆಹಲಿ: ನವೆಂಬರ್ 15 ರಿಂದ ಫಾಸ್ಟ್‌ಟ್ಯಾಗ್ ಶುಲ್ಕದಲ್ಲಿ ಬದಲಾವಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಟೋಲ್‌ ಗೇಟ್‌ ಬಳಿ ದಂಡ ಪಾವತಿಯ ಮೊತ್ತದಲ್ಲಿ ಕಡಿತ ಮಾಡಲಾಗಿದೆ.

ಫಾಸ್ಟ್‌ ಟ್ಯಾಗ್‌ ಇಲ್ಲದ ವಾಹನಗಳ ಮಾಲೀಕರು ದುಪ್ಪಟ್ಟು ಹಣ ಪಾವತಿಸುವ ನಿಯಮವನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಲಿದೆ. ನಗದು ರೂಪದಲ್ಲಿ ಪಾವತಿ ಆಯ್ಕೆ ಮಾಡಿಕೊಂಡರೆ ಟೋಲ್ ಶುಲ್ಕವನ್ನು ದುಪ್ಪಟ್ಟು ಪಾವತಿಸಬೇಕಾಗುತ್ತದೆ. ಆದರೆ ಯುಪಿಎ ಮೂಲಕ ಪಾವತಿ ಮಾಡಿದರೆ ಶುಲ್ಕದ 1.25 ಪಟ್ಟು ಟೋಲ್ ಪಾವತಿಸಬೇಕಾಗುತ್ತದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ ಶುಲ್ಕ(ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮಗಳು, 2008 ಅನ್ನು ತಿದ್ದುಪಡಿ ಮಾಡಿದ್ದು, ಫಾಸ್ಟ್‌ಟ್ಯಾಗ್ ಇಲ್ಲದ ಬಳಕೆದಾರರಿಗೆ ಅವರ ಪಾವತಿ ವಿಧಾನವನ್ನು ಆಧರಿಸಿ ವಿಭಿನ್ನ ಶುಲ್ಕ ಪರಿಚಯಿಸಿದೆ. ಈ ಕ್ರಮವು ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಮತ್ತು ಟೋಲ್ ಪ್ಲಾಜಾಗಳಲ್ಲಿ ನಗದು ಬಳಕೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ.

ಹೊಸ ನಿಯಮದ ಪ್ರಕಾರ, ಫಾಸ್ಟ್‌ಟ್ಯಾಗ್ ಇಲ್ಲದ ಅಥವಾ ದೋಷಯುಕ್ತ ಫಾಸ್ಟ್‌ಟ್ಯಾಗ್ ಹೊಂದಿರುವ ವಾಹನಗಳು ಈಗ ಯುಪಿಐ ಬಳಸಿ ಪಾವತಿಸಿದರೆ ಟೋಲ್ ಪ್ಲಾಜಾಗಳಲ್ಲಿ ದುಪ್ಪಟ್ಟು ಬದಲು 1.25 ಪಟ್ಟು ಟೋಲ್ ಪಾವತಿಸಬೇಕಾಗುತ್ತದೆ.

ಉದಾಹರಣೆಗೆ, ವಾಹನದ ಟೋಲ್ 100 ರೂ. ಆಗಿದ್ದರೆ, ಮೊದಲು ಫಾಸ್ಟ್‌ಟ್ಯಾಗ್ ಇಲ್ಲದವರು 200 ರೂ. ಪಾವತಿಸಬೇಕಿತ್ತು. ಆದರೆ ಈಗ ನೀವು ಯುಪಿಎ ಬಳಸಿ ಪಾವತಿಸಿದರೆ, 125 ರೂ. ಮಾತ್ರ ಪಾವತಿಸಬೇಕಾಗುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments