Wednesday, 28 October 2026 — Kannadavahini
BREAKING NEWS
ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ ರಾಜ್ಯ ಅ. 24ರಿಂದ ಹೊಸ ಮೆರುಗಿನಲ್ಲಿ ‘ಗೋಲ್ಡನ್ ಚಾರಿಯಟ್’ ಐಷಾರಾಮಿ ಯಾತ್ರೆ ಆರಂಭ ಅಪರಾಧ ಮಡಿಕೇರಿಯಲ್ಲಿ 8 ಬೇಟೆಗಾರರ ಬಂಧನ ವಿದೇಶ ಸ್ಪೇನ್ ನಲ್ಲಿ ಭೀಕರ ರೈಲು ದುರಂತ: 64ಕ್ಕೆ ಏರಿದ ಸಾವಿನ ಸಂಖ್ಯೆ ಕ್ರೀಡೆ 3 ಬಾರಿ ಏಷ್ಯನ್‌ ಚಿನ್ನದ ಪದಕ ವಿಜೇತ ನೀರಜ್‌ ಯಾದವ್‌ ಶವವಾಗಿ ಪತ್ತೆ ರಾಜಕೀಯ ವಿಧಾನ ಪರಿಷತ್ತಿನ 4 ಕ್ಷೇತ್ರಗಳಿಗೆ ಮತದಾನ: 43 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಬೆಂಗಳೂರು ಬ್ಲೂ ಲೈನ್ ಮಟ್ರೋ ಕಾಮಗಾರಿ ಶೀಘ್ರ ಮುಗಿಸಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ ರಾಜ್ಯ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಬ್ರೇಕ್: ನ.1ರಿಂದ ದರಪಟ್ಟಿ ಪ್ರದರ್ಶನ ಕಡ್ಡಾಯ ಅಪರಾಧ ಪತ್ನಿ ಕೊಂದು ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಪತಿ ಅರೆಸ್ಟ್ ರಾಜ್ಯ ಅ. 24ರಿಂದ ಹೊಸ ಮೆರುಗಿನಲ್ಲಿ ‘ಗೋಲ್ಡನ್ ಚಾರಿಯಟ್’ ಐಷಾರಾಮಿ ಯಾತ್ರೆ ಆರಂಭ
ಬೆಂಗಳೂರು

ಸಚಿವರ ಪುತ್ರ, ಸಂಸದ ಸಾಗರ್ ಖಂಡ್ರೆ ಮನೆಗೆ ಕರೆಂಟ್ ಕಟ್: ಎಫ್ಐಆರ್ ದಾಖಲು

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 1 ವೀಕ್ಷಣೆಗಳು
sagar khandre

ಬೆಂಗಳೂರು: ಅರಣ್ಯ ಇಲಾಖೆ ಸಚಿವ ಈಶ್ವರ್​ ಖಂಡ್ರೆ ಅವರ ಪುತ್ರ ಸಂಸದ ಸಾಗರ್ ಖಂಡ್ರೆ ಅವರ ನಗರದ ಮನೆಯ ವಿದ್ಯುತ್ ಕಡಿತಗೊಳಿಸಿದ ವ್ಯಕ್ತಿಗಳ ವಿರುದ್ಧ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ವಿಧಾನಸೌಧ ಬಳಿಯ‌ ಶ್ರೀ ಕೃಷ್ಣ ಅರ್ಪಾಟಮೆಂಟ್ ನ ನಂ-103, ಬ್ಲ್ಯಾಕ್-1ನಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಪುತ್ರ ಹಾಗೂ ಸಂಸದ ಸಾಗರ ಖಂಡ್ರೆ ವಾಸವಾಗಿದ್ದು, ಮನೆಯನ್ನು ಕೃಷ್ಣ ಅರ್ಪಾಟಮೆಂಟ್ ಸೊಸೈಟಿ ಪೂರ್ವಾನುಮತಿ ಪಡೆದುಕೊಂಡು ನವೀಕರಣ ಮಾಡಲಾಗುತ್ತಿದೆ.

ನವೀಕರಣದ ವೇಳೆ ಮೆಟ್ಟಿಲುಗಳಿಗೆ ಬೆಳಕಿನ ವ್ಯವಸ್ಥೆ ಮಾಡಲು ವೈರ್​ ಎಳೆಯಲಾಗಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಏಪ್ರಿಲ್​ 2 ರಂದು ಮಧ್ಯಾಹ್ನ ಸುಮಾರು 04:30 ಗಂಟೆ ಸಮಯದಲ್ಲಿ ಅಪಾರ್ಟಮೆಂಟ್​ನ ಮ್ಯಾನೇಜರ್ ಚಂದ್ರಕುಮಾರ ನವೀಕರಣ ಕಾಮಗಾರಿ ಮಾಡುತ್ತಿರುವ ಕಾರ್ಮಿಕರನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದಿದಿದ್ದಾರೆ.

ಈ ಬಗ್ಗೆ ಮನೆಯ ಮಾಲೀಕ ಸಾಗರ ಖಂಡ್ರೆ ಅಥವಾ ಈಶ್ವರ ಖಂಡ್ರೆ ಅಥವಾ ಅವರ ಕುಟುಂಬ ಸದಸ್ಯರಿಗಾಗಲಿ ಅಥವಾ ಸಚಿವರ ಆಪ್ತ ಸಹಾಯಕರಿಗೆ ಮಾಹಿತಿ ನೀಡದೆ ಏಕಾಏಕಿ ಮನೆಯ ವಿದ್ಯುತ್ ಸಂಪರ್ಕವನ್ನು ಖಡಿತಗೊಳಿಸಲಾಗಿದೆ.

ಈ ವಿಚಾರವಾಗಿ ಮ್ಯಾನೇಜರ್​ಗೆ ಅದೇ ದಿನ ಸಂಜೆ 4:40 ಸುಮಾರಿಗೆ ಕರೆ ಮಾಡಿ ಸಚಿವರ ಆಪ್ತ ಸಹಾಯಕ ವಿಚಾರಿಸಿದಾಗ, ಕೃಷ್ಣ ಅಪಾರ್ಟಮೆಂಟ್ ಸೆಕ್ರೆಟರಿ ಆದೇಶದಂತೆ ವಿದ್ಯತ್ ಖಡಿತಗೊಳಿಸಿದ್ದೇನೆ ಎಂದು ಹೇಳಿ ಫೋನ್​ನ್ನು ಸ್ವಿಚ್ ಆಫ್ ಮಾಡಿದ್ದಾರೆ.

ವಿನಾಕಾರಣ ತಗಾದೆ ತೆಗೆದು ಪದೆ ಪದೆ ತೊಂದರೆ ನೀಡುತ್ತಿರುವ ಕೃಷ್ಣ ಅಪಾರ್ಟಮೆಂಟ್ ಮ್ಯಾನೇಜರ್ ಹಾಗೂ ವಿದ್ಯತ್ ಸಂಪರ್ಕ ಕಡಿತಗೊಳಿಸಲು ಹೇಳಿದವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ದಾಖಲಸಿದ್ದಾರೆ.

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8391 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment