ಇಸ್ಲಮಾಬಾದ್: ಅಮೆರಿಕ ನಮ್ಮ ಮೇಲೆ ದಾಳಿ ಮಾಡಿದರೆ ನಾವು ಮರು ಯೋಚಿಸದೇ ಭಾರತದ ಮೇಲೆ ದಾಳಿ ಮಾಡುತ್ತೇವೆ ಎಂದು ಭಾರತದಲ್ಲಿದ್ದ ಪಾಕಿಸ್ತಾನದ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಣಾಮಗಳ ಕುರಿತು ಉನ್ನತ ಮಟ್ಟದ ಸಭೆಯಲ್ಲಿ ಮಾಜಿ ರಾಯಭಾರ ಅಧಿಕಾರಿ ಅಬ್ದುಲ್ ಬಾಸಿಟ್ ಈ ಹೇಳಿಕೆ ನೀಡಿದ್ದು, ಅಮೆರಿಕ ನಮ್ಮ ಮೇಲೆ ದಾಳಿ ಮಾಡಿದರೆ ಮರು ಯೋಚಿಸದೇ ನಾವು ದೆಹಲಿ ಹಾಗೂ ಮುಂಬೈ ಮೇಲೆ ದಾಳಿ ಮಾಡುತ್ತೇವೆ. ಮುಂದೆ ಏನಾಗುತ್ತದೆ ಎಂಬುದನ್ನು ಆಮೇಲೆ ನೋಡಿಕೊಳ್ಳೋಣ ಎಂದಿದ್ದಾರೆ.
ಪಾಕಿಸ್ತಾನದ ಮೇಲೆ ಕೆಟ್ಟ ಕಣ್ಣು ಬಿದ್ದರೆ ಅದು ಯಾರದ್ದೇ ಆಗಿದ್ದರೂ ನಾವು ಭಾರತದ ಮೇಲೆ ಮರು ಯೋಚಿಸದೇ ದಾಳಿ ಮಾಡುತ್ತೇವೆ. ಈ ಬಗ್ಗೆ ಪಾಕಿಸ್ತಾನ ಯಾವುದೇ ಆಲೋಚನೆ ಮಾಡುವುದಿಲ್ಲ ಎಂದು ಪುನರುಚ್ಚರಿಸಿದರು.
ಪಾಕಿಸ್ತಾನದ ರಾಯಭಾರಿಯಾಗಿ 2014ರಿಂದ 2017ರವರೆಗೆ ಭಾರತದಲ್ಲಿ ಕೆಲಸ ಮಾಡಿದ್ದ ಬಾಸಿಸ್ಟ್, ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಣ ಯುದ್ಧಕ್ಕೆ ಪರೋಕ್ಷ ಭಾರತ ಕಾರಣ ಎಂದು ಬಾಸಿಟ್ ಆರೋಪಿಸಿದರು.



