Monday, June 29, 2026
Google search engine
Homeವಿದೇಶಹರ್ಮುಜ್ ಜಲಸಂಧಿ ಮುಕ್ತ: ಇರಾನ್ ಷರತ್ತುಬದ್ಧ ಘೋಷಣೆ

ಹರ್ಮುಜ್ ಜಲಸಂಧಿ ಮುಕ್ತ: ಇರಾನ್ ಷರತ್ತುಬದ್ಧ ಘೋಷಣೆ

ಟೆಹ್ರಾನ್: ಶತ್ರುರಾಷ್ಟ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ದೇಶಗಳ ಹಡಗುಗಳಿಗೆ ಇರಾನ್ ಹರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದೆ.

24 ಗಂಟೆಯೊಳಗೆ ಹರ್ಮುಜ್ ಜಲಸಂಧಿ ಮುಕ್ತಗೊಳಿಸದೇ ಇದ್ದರೆ ಭೂಪಟದಿಂದಲೇ ಇರಾನ್ ನಾಪತ್ತೆ ಮಾಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರು.

ಈ ನಡುವೆ ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ 22 ರಾಷ್ಟ್ರಗಳು ಹರ್ಮುಜ್ ಜಲಸಂಧಿ ತೆರವುಗೊಳಿಸುವಂತೆ ಇರಾನ್ ಗೆ ಮನವಿ ಮಾಡಿದ್ದವು. ಈ ಎಲ್ಲಾ ಬೇಡಿಕೆಗಳ ಹಿನ್ನೆಲೆಯಲ್ಲಿ ಇರಾನ್ ಶತ್ರು ರಾಷ್ಟ್ರಗಳನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಹರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಿದೆ.

ಅಂತಾರಾಷ್ಟ್ರೀಯ ಸಮುದ್ರ ವ್ಯವಹಾರಗಳ ಸಂಘಟನೆಯ ಇರಾನ್ ವಕ್ತಾರ ಅಲಿ ಮೌಸವಿ ಹರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲಾಗಿದೆ. ಆದರೆ ಶತ್ರು ರಾಷ್ಟ್ರಗಳ ಹಡಗು ಸಾಗಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

ವಿಶ್ವಸಂಸ್ಥೆಗೆ ನಾವು ಸಹಕಾರ ನೀಡುತ್ತೇವೆ. ಅರಬ್ ಮಾರ್ಗದಲ್ಲಿ ಸಾಗುವ ಹಡಗುಗಳಿಗೆ ರಕ್ಷಣೆ ನೀಡುತ್ತೇವೆ. ಪರಸ್ಪರ ನಂಬಿಕೆ ಹಾಗೂ ವಿಶ್ವಾಸದ ಮೇಲೆ ನಾವು ಹಡಗುಗಳ ಸಾಗಾಟಕ್ಕೆ ಅನುವು ಮಾಡಿಕೊಡುತ್ತಿದ್ದೇವೆ. ಆದರೆ ಯಾವುದೇ ಕಾರಣಕ್ಕೂ ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳಿಗೆ ಬಿಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇಸ್ರೇಲ್‌ ಪರಮಾಣು ನೆಲೆ ಮೇಲೆ ಇರಾನ್‌ ದಾಳಿ

ಇರಾನ್‌ ಪರಮಾಣು ಸ್ಥಾವರದ ಮೇಲೆ ದಾಳಿ ಮಾಡಿದ್ದ ಇಸ್ರೇಲ್‌ ನ ಪರಮಾಣು ಸ್ಥಾವರಗಳ ಮೇಲೆ ಇರಾನ್‌ ದಾಳಿ ನಡೆಸುವ ಮೂಲಕ ತಿರುಗೇಟು ನೀಡಿದೆ.

ಇಸ್ರೇಲ್‌ ನ ಪರಮಾಣು ಸ್ಥಾವರದ ಮೂಲಸೌಕರ್ಯ ಇರುವ ಡಿಮೊನಾ ಮೇಲೆ ಇರಾನ್‌ ದಾಳಿ ನಡೆಸಿದ್ದು, ಕನಿಷ್ಠ 100 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇರಾನ್‌ ನ ನತಾನ್ಜ್‌ ನಲ್ಲಿರುವ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿ ಇಸ್ರೇಲ್‌ ಎರಡನೇ ಬಾರಿ ದಾಳಿ ನಡೆಸಿದ್ದಕ್ಕಾಗಿ ಪ್ರತಿಯಾಗಿ ಇಸ್ರೇಲ್‌ ನ ಪರಮಾಣು ಸ್ಥಾವರದ ಮೇಲೆ ದಾಳಿ ನಡೆದಿದೆ.

ಡಿಮೊನಾದಲ್ಲಿರುವ ಶಿಮೊನ್‌ ಪೆರೆಸ್‌ ನೆಗೆವ್‌ ಪರಮಾಣು ಸಂಶೋಧನಾ ಕೇಂದ್ರದಲ್ಲಿರುವ ವಸತಿ ಕೇಂದ್ರಗಳ ಮೇಲೆ ಇರಾನ್‌ ನ ಎರಡು ಕ್ಷಿಪಣಿಗಳು ಬಿದ್ದಿವೆ. ಇದಲ್ಲದೇ ಅರದ್‌ ನಗರದ ಮೇಲೂ ಇರಾನ್‌ ದಾಳಿ ನಡೆಸಿದೆ.

ಅರದ್‌ ನಲ್ಲಿ 84 ಮಂದಿ ಗಾಯಗೊಂಡಿದ್ದು, ಇದರಲ್ಲಿ 10 ಮಂದಿ ಸ್ಥಿತಿ ಗಂಭೀರವಾಗಿದೆ. ಡಿಮೊನಾದಲ್ಲಿ ನಡೆದ ದಾಳಿಯಲ್ಲಿ 33 ಮಂದಿ ಗಾಯಗೊಂಡಿದ್ದಾರೆ ಎಂದು ಇಸ್ರೇಲ್‌ ಹೇಳಿಕೊಂಡಿದ್ದು, ಇರಾನ್‌ ದಾಳಿಯನ್ನು ದೃಢಪಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments