Monday, June 15, 2026
Google search engine
Homeವಿದೇಶಅರಬ್‌ ರಾಷ್ಟ್ರಗಳ ಮೇಲೆ ಇರಾನ್‌ ಮತ್ತೆ ದಾಳಿ: ಕುವೈತ್‌ ವಿಮಾನ ನಿಲ್ದಾಣಕ್ಕೆ ಬಾಂಬ್

ಅರಬ್‌ ರಾಷ್ಟ್ರಗಳ ಮೇಲೆ ಇರಾನ್‌ ಮತ್ತೆ ದಾಳಿ: ಕುವೈತ್‌ ವಿಮಾನ ನಿಲ್ದಾಣಕ್ಕೆ ಬಾಂಬ್

ನೆರೆಯ ರಾಷ್ಟ್ರಗಳ ಮೇಲಿನ ದಾಳಿಗೆ ಅಧ್ಯಕ್ಷ ಮಸೂದ್‌ ಪೆಜೆಕಿಸ್ತಾನ್‌ ಕ್ಷಮೆ ಕೋರಿದ್ದ ಬೆನ್ನಲ್ಲೇ ಅರಬ್‌ ರಾಷ್ಟ್ರಗಳ ಮೇಲೆ ಇರಾನ್‌ ದಾಳಿ ಮುಂದುವರಿಸಿದ್ದು, ದುಬೈ ನಂತರ ಇದೀಗ ಕುವೈತ್‌ ನ ವಿಮಾನ ನಿಲ್ದಾಣಗಳ ಮೇಲೆ ಭೀಕರ ದಾಳಿ ನಡೆಸಿದೆ.

ಶನಿವಾರ ತಡರಾತ್ರಿ ಇರಾನ್‌ ಕ್ಷಿಪಣಿಗಳು ಕುವೈತ್‌ ನ ವಿಮಾನ ನಿಲ್ದಾಣ ಬಳಿಯ ತೈಲ ಸಂಗ್ರಹ ಘಟಕಗಳನ್ನು ಗುರಿಯಾಗಿಸಿ ದಾಳಿ ಮಾಡಿದೆ. ಇದೇ ವೇಳೆ ದುಬೈ ಮೇಲೂ 15 ಡೋಣ್‌ ಗಳ ದಾಳಿ ಮಾಡಲಾಗಿದೆ.‌

ಇರಾನ್‌ ನಿಂದ ೨ ಕ್ರೂಸ್‌ ಕ್ಷಿಪಣಿ ಹಾಗೂ 10 ಬ್ಯಾಲೆಸ್ಟಿಕ್‌ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದೆ ಎಂದು ಕತಾರ್‌ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ.

ಇರಾನ್‌ ದಾಳಿ ಬೆನ್ನಲ್ಲೆ ಕುರೈತ್‌ ನ ತೈಲ ಘಟಕಗಳು ತೈಲ ಉತ್ಪಾದನೆಯ ಪ್ರಮಾಣವನ್ನು ಕಡಿತಗೊಳಿಸಿದೆ. ಇರಾನ್‌ ದಾಳಿ ನಡೆಸಿದ ಬಹುತೇಕ ಕ್ಷಿಪಣಿಗಳನ್ನು ವಿಫಲಗೊಳಿಸಲಾಗಿದೆ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಉತ್ಪಾದನೆ ಪ್ರಮಾಣ ಕಡಿಮೆ ಮಾಡಲಾಗುತ್ತಿದೆ ಎಂದು ಕುವೈತ್‌ ಹೇಳಿದೆ.

ಇರಾನ್‌ ನಮ್ಮ ಮೂಲಭೂತ ವ್ಯವಸ್ಥೆಯ ಮೇಲೆ ದಾಳಿ ಆರಂಭಿಸಿದೆ. ದಾಳಿಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ನಾವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತದ್ದೇವೆ ಎಂದು ಕುವೈತ್‌ ಹೆಳಿದೆ.

ಇದೇ ವೇಳೆ ದುಬೈನ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದ್ದ ಇರಾನ್‌ ಇಂದು ನಾಗರಿಕ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಸೌದಿ ಅರೆಬಿಯಾದ ರಾಜಧಾನಿ ರಿಯಾದ್‌ ಮೇಲೂ ಇರಾನ್‌ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments