ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಅಮರಿಕ ಮತ್ತು ಇಸ್ರೇಲ್ ವಿರುದ್ಧ ಯುದ್ಧ ನಿಲ್ಲಿಸಲು ಇರಾನ್ 3 ಷರತ್ತು ವಿಧಿಸಿದೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಕಿಯಾನ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಯುದ್ಧ ನಿಲ್ಲಿಸಬೇಕಾದರೆ ಮೂರು ಷರತ್ತುಗಳನ್ನು ಹಾಕಿದ್ದಾರೆ.
ಭವಿಷ್ಯದಲ್ಲಿ ಇರಾನ್ ಮೇಲೆ ಯಾವುದೇ ರೀತಿಯ ದಾಳಿ ಮಾಡದೇ ಇರುವ ಬಗ್ಗೆ ಭರವಸೆ, ಇರಾನ್ ಜೀವಮಾನದ ಹಕ್ಕುಗಳ ಸಂರಕ್ಷಣೆ ಹಾಗೂ ಯುದ್ಧದ ವೇಳೆ ಸಂಭವಿಸಿದ ಹಾನಿಗೆ ಪರಿಹಾರ ಕೊಡಬೇಕು ಎಂದು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ರಷ್ಯಾ ಹಾಗೂ ಪಾಕಿಸ್ತಾನದ ಮುಖಂಡರ ಜೊತೆ ಮಾತುಕತೆ ನಡೆಸಿರುವುದನ್ನು ದೃಢಪಡಿಸಿರುವ ಇರಾನ್, ಈ ಭಾಗದಲ್ಲಿ ಶಾಂತಿ ಕಾಯ್ದುಕೊಳ್ಳಬೇಕಾಗಿದೆ. ಇದಕ್ಕಾಗಿ ಇರುವ ಏಕೈಕ ಮಾರ್ಗ ಅಂದರೆ ಯುದ್ಧ ನಿಲ್ಲಿಸುವುದು. ಭವಿಷ್ಯದಲ್ಲಿ ದಾಳಿ ಸಂಭಾವ್ಯ ತಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭರವಸೆ ಬೇಕಾಗಿದೆ ಎಂದು ಅವರು ಹೇಳಿದ್ದಾರೆ.



