Sunday, May 31, 2026
Google search engine
Homeವಿದೇಶಜಲ ಡ್ರೋಣ್‌ ಬಳಸಿ ಅಮೆರಿಕ, ಗ್ರೀಸ್‌ ಹಡಗು ಸ್ಫೋಟಿಸಿದ ಇರಾನ್‌; ಒಬ್ಬ ಭಾರತೀಯ ಸಾವು

ಜಲ ಡ್ರೋಣ್‌ ಬಳಸಿ ಅಮೆರಿಕ, ಗ್ರೀಸ್‌ ಹಡಗು ಸ್ಫೋಟಿಸಿದ ಇರಾನ್‌; ಒಬ್ಬ ಭಾರತೀಯ ಸಾವು

ನೀರಿನಾಳದ‌ ಡ್ರೋಣ್ ಬಳಸಿ ಇರಾನ್‌ ನಡೆಸಿದ ದಾಳಿಯಲ್ಲಿ ಗ್ರೀಸ್‌ ಮತ್ತು ಅಮೆರಿಕದ ಹಡಗುಗಳನ್ನು ಹೊಡೆದು ಹಾಕಿದ್ದು, ಒಬ್ಬ ಭಾರತೀಯ ಸೇರಿದಂತೆ ಹಲವು ಮಂದಿ ಅಸುನೀಗಿದ್ದಾರೆ.

ಸಫೇಸಿಯಾ ವಿಷ್ಣು ಹೆಸರಿನ ಅಮೆರಿಕ ಮೂಲದ ಹಡಗನ್ನು ಇರಾನ್‌ ಬಳಿಯ ಬಾಸ್ರಾ ಬಳಿ ಧ್ವಂಸಗೊಳಿಸಲಾಗಿದೆ. ಒಬ್ಬ ಭಾರತೀಯ ಮೃತಪಟ್ಟಿದ್ದು, 15 ಮಂದಿ ಭಾರತೀಯರು ಸೇರಿದಂತೆ ಹಲವು ಸಿಬ್ಬಂದಿಯನ್ನು ರಕ್ಷಿಸಲಾಗಿದೆ.

ಇರಾಕ್‌ ನ ಬಾಗ್ದಾದ್‌ ನಲ್ಲಿರುವ ರಾಯಭಾರ ಕಚೇರಿ ಈ ವಿಷಯವನ್ನು ದೃಢಪಡಿಸಿದ್ದು, ಇರಾನ್‌ ನ ಸಮುದ್ರ ಭಾಗದಲ್ಲಿ ಮತ್ತೊಂದು ಹಡಗಿನ ಮೇಲೆ ಕೂಡ ದಾಳಿಯಾಗಿದ್ದು, ಈ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ಈ ಹಡಗಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಪರ್ಶಿಯನ್‌ ಸಮುದ್ರದಲ್ಲಿ ಎರಡು ಹಡಗುಗಳನ್ನು ಹೊಡೆದು ಹಾಕಿರುವುದಾಗಿ ಇರಾನ್‌ ಹೇಳಿಕೊಂಡಿದೆ. ಇರಾನ್‌ ಭೂಮಿಯ ಮೇಲೆ ಮಾತ್ರವಲ್ಲ, ಸಮುದ್ರದಾಳದಲ್ಲಿ ಡ್ರೋಣ್‌ ಗಳ ಮೂಲಕ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಬಲ್ಲದು ಎಂಬುದು ಈ ದಾಳಿಯಿಂದ ದೃಢಪಟ್ಟಿದೆ.

ಗ್ರೀಸ್‌ ದೇಶದ ಕಂಪನಿ ಒಡೆತನದ ಮಲ್ಟೆಸೆ ಜೈಫೋರಸ್‌ ಅಮೆರಿಕದ ಸಫೆಸಿಯಾ ಕಂಪನಿ ಒಡೆತನದ ಸಫೆಸಿಯಾ ವಿಷ್ಣು ಹಡಗುಗಳನ್ನು ಹೊಡೆದುರುಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments