ಧಾರವಾಡ :ಡಿಜಿಟಲ್ ತಂತ್ರಜ್ಞಾನದಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚುತ್ತಿದೆ ಎಂದು ಧಾರವಾಡದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರು ಕಳವಳ ವ್ಯಕ್ತಪಡಿಸಿದರು.
ಅವರು ಕರ್ನಾಟಕ ವಿಶ್ವವಿದ್ಯಾಲಯದ, ಸ್ನಾತಕೋತ್ತರ ಕಾನೂನು ಅಧ್ಯಯನ ವಿಭಾಗದ ವತಿಯಿಂದ ದಿ. ಪ್ರೊ. ವಿ.ಆರ್. ಭಟ್, ಅವರ ಸ್ಮರಣಾರ್ಥ 19 ನೇ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ‘ಪೋಕ್ಸೊ ಮತ್ತು ವಿಧಿ 21 : ಡಿಜಿಟಲ್ ಯುಗದಲ್ಲಿ ಬಾಲ್ಯದ ಹಕ್ಕುಗಳ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳು ಶಿಕ್ಷಣ ಮನರಂಜನೆ ಮತ್ತು ಸಾಮಾಜಿಕ ಸಂವಹನಕ್ಕಾಗಿ ಆನ ಲೈನ ವೇದಿಕೆಗಳಿಗೆ ಹೆಚ್ಚಾಗಿ ಅವಲಂಬಿತರಾಗುತ್ತಿದ್ದು, ಈ ಅವಕಾಶಗಳ ಜೊತೆಗೆ ಮಗುವಿನ ಸುರಕ್ಷತೆಗೆ ದಕ್ಕೆ ತರುವ ಲೈಂಗಿಕ ದೌರ್ಜನ್ಯಗಳಿಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಇವುಗಳು ವೈಯಕ್ತಿಕ ಸ್ವಾತಂತ್ರ್ಯಕ್ಕೆ ದಕ್ಕೆ ತರುತ್ತಿವೆ ಹಾಗು ಮಾನವನ ಘನೆತೆಗೂ ದಕ್ಕೆ ಉಂಟು ಮಾಡುತ್ತಿವೆ ಎಂದು ತಿಳಿಸಿದರು.
ಪೋಕ್ಸೊ ಕಾಯದೆ 2012 ಸಂಬಂದಿಸಿದಂತೆ, ಭಾರತದ ಸರ್ವೋಚ್ಚ ನ್ಯಾಯಲಯವು ನಿರಂತರವಾಗಿ ಭಾರತ ಸಂವಿಧಾನದ 21ನೇ ವಿಧಿ ಅಡಿ ಡಿಜಿಟಲ್ ಯುಗದಲ್ಲಿ ಬಾಲ್ಯದ ಹಕ್ಕುಗಳನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕಾನೂನು ವಿಭಾಗದ ಡೀನರು ಹಾಗು ಮುಖ್ಯಸ್ಥರು ಹಿರಿಯ ಪ್ರಾಧ್ಯಾಪಕ ಡಾ.ವಿಶ್ವನಾಥ ಎಂ., ನಿವೃತ್ತ ಪ್ರೊ ಎ.ಆರ್. ದೇಸಾಯಿ, ವಿಭಾಗದ ಉಪನ್ಯಾಸಕ ಡಾ.ಶಿವಕುಮಾರ ಎಂ.ಎ. ಡಾ.ಆರ್.ಎಮ. ಕಾಂಬಳೆ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮನ್ನು ಕು.ಮಹಮ್ಮದ ಮೀರ ಮತ್ತು ಅಮೃತಾ ಕೌಶಿಕ ನಿರೂಪಿಸಿದರು. ಪೂಜಾ ನವಲಿ, ವಂದಿಸಿದರು.



