Tuesday, May 19, 2026
Google search engine
Homeಅಪರಾಧ3 ವರ್ಷದ ಮಗನಿಗೆ ಕಾದ ಕಬ್ಬಿಣದಿಂದ ಬರೆ ಹಾಕಿದ ಪಾಪಿ ತಾಯಿ!

3 ವರ್ಷದ ಮಗನಿಗೆ ಕಾದ ಕಬ್ಬಿಣದಿಂದ ಬರೆ ಹಾಕಿದ ಪಾಪಿ ತಾಯಿ!

ಅತಿಯಾಗಿ ಆಡ್ತಾನೆ ಅಂತ 3 ವರ್ಷದ ಮಗನಿಗೆ ಕಾದ ಕಬ್ಬಿಣದಿಂದ ಕೈ, ಕಾಲು ಕುತ್ತಿಗೆಗೆ ಬರೆ ಹಾಕಿ ಶಿಕ್ಷೆ ವಿಧಿಸಿದ ತಾಯಿಯನ್ನು ಧಾರವಾಡ ಪೊಲೀಸರು ಬಂಧಿಸಿದ್ದಾರೆ.

ಹಳೇ ಹುಬ್ಬಳ್ಳಿಯ ನಿವಾಸಿ 34 ವರ್ಷದ ಅನುಷಾ ಹುಲಿಮಾರ ಅವರನ್ನು ಬಂಧಿಸಲಾಗಿದೆ.

ಮಗು ಅಳುತ್ತೆ, ಅತಿಯಾಗಿ ಆಡುತ್ತೆ, ಇದರ ನಡವಳಿಕೆ ಸರಿಯಿಲ್ಲ ಅಂತ ತಾಯಿ ಮಗುವಿನ ಕೈ, ಕಾಲು, ಕುತ್ತಿಗೆ ಬಳಿ ಕಾದ ಕಬ್ಬಿಣದಿಂದ ಬರೆ ಎಳೆದು ಚಿತ್ರಹಿಂಸೆ ನೀಡಿದ್ದಾಳೆ.
ಮಗುವಿನ ಆಕ್ರಂದನ ಕೇಳಿ ಅಕ್ಕಪಕ್ಕದ ಮನೆಯವರು ಬಂದು ನೋಡಿ ಮಗುವಿನ ಪರಿಸ್ಥಿತಿ ನೋಡಿ ಆಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಮಗುವನ್ನು ರಕ್ಷಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಹಳೇ ಹುಬ್ಬಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತಾಯಿಯನ್ನು ವಶಕ್ಕೆ ಪಡೆದಿದ್ದು, ಮಕ್ಕಳ ಹಕ್ಕು ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಗುವಿನ ನಡತೆ ವಿಚಿತ್ರವಾಗಿದೆ. ಬರೆ ಹಾಕಿದರೆ ಸರಿ ಹೋಗುತ್ತದೆ ಎಂಬ ಕಾರಣಕ್ಕೆ ಮೂಢನಂಬಿಕೆಯಿಂದ ಈ ರೀತಿಯ ಘಟನೆ ನಡೆಯುತ್ತಿರುತ್ತದೆ. ಇದಕ್ಕೆ ಮೂಢನಂಬಿಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments