ಕತಾರ್ ನ ದೋಹಾ ವಾಯುನೆಲೆ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬೆನ್ನಲ್ಲೇ ಅರಬ್ ರಾಷ್ಟ್ರಗಳ 5 ವಾಯುನೆಲೆಗಳನ್ನು ಬಂದ್ ಮಾಡಲಾಗಿದೆ.
ಕತಾರ್, ಕುವೈತ್, ಇರಾಕ್, ಯುಎಇ ಮತ್ತು ಬಹರೇನ್ ವಾಯುನೆಲೆಗಳನ್ನು ಮುಚ್ಚಲಾಗಿದೆ.
ಅಮೆರಿಕ ಅಣು ಸ್ಥಾವರಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಇರಾನ್ ಕತಾರ್ ನ ದೋಹಾದಲ್ಲಿರುವ ಅಮೆರಿಕ ವಾಯುನೆಲೆ ಮೇಲೆ ದಾಳಿ ನಡೆಸಿತ್ತು.
ಇರಾನ್ ಅಮೆರಿಕ ವಿರುದ್ಧವೂ ತಿರುಗಿ ಬಿದ್ದಿರುವುದರಿಂದ ಜಗತ್ತಿನಾದ್ಯಂತ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದ್ದು, ಭಾರತ ಕತಾರ್ ಕಡೆ ಪ್ರಯಾಣ ಬೆಳೆಸಿದ್ದ 2 ವಿಮಾನಗಳ ಸಂಚಾರ ರದ್ದುಗೊಳಿಸಿದೆ.



