Sunday, September 13, 2026
Google search engine
Homeಅಪರಾಧಮತಾಂತರ, ಮದುವೆ ನಿರಾಕರಿಸಿದ ಮಹಿಳೆಯ ಕತ್ತುಸೀಳಿ ಕಗ್ಗೊಲೆ

ಮತಾಂತರ, ಮದುವೆ ನಿರಾಕರಿಸಿದ ಮಹಿಳೆಯ ಕತ್ತುಸೀಳಿ ಕಗ್ಗೊಲೆ

ಮದುವೆ ಆಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಮಹಿಳೆಯ ಕತ್ತು ಸೀಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ನಾವರ ಗ್ರಾಮದ ನೇಪಾಂಗರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 35 ವರ್ಷದ ಭಾಗ್ಯಶ್ರೀ ನಾಮದೇವ್ ಧನುಕ್ ಎಂಬುವವರನ್ನು ಶೇಖ್ ರಯೀಸ್ (42) ಕೊಲೆಗೈದಿದ್ದು, ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮದುವೆ ಆದ ನಂತರ ಮತಾಂತರಗೊಳ್ಳುವಂತೆ ಹಲವದು ದಿನಗಳಿಂದ ಒತ್ತಡ ಹೇರುತ್ತಿದ್ದ ಶೇಖ್ ರಯೀಸ್ ಮನೆಗೆ ನುಗ್ಗಿ ಗಲಾಟೆ ಮಾಡಿದ್ದು, ಮದುವೆಗೆ ನಿರಾಕರಿಸಿದ್ದರಿಂದ ಕೂದಳೆದು ಹಲ್ಲೆ ಮಾಡಿದ್ದ ನಂತರ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಮೃತಳ ಸೋದರಿ ಸುಂದರ ಬಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಈ ಘಟನೆ ಹಿಂದೂ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದೂ ಸಂಘಟನೆ ಮುಖಂಡರು ಇದೊಂದು ಲವ್‌ ಜಿಹಾದ್‌ ಪ್ರಕರಣ, ಪೊಲೀಸರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಅಂತ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಆರೋಪಿಯನ್ನ ಗಲ್ಲಿಗೇರಿಸುವಂತೆ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments