ನಾಡಿಗೆ ಬಂದ ಚಿರತೆಯನ್ನು ಬೆಕ್ಕು ಅಂತ ಭಾವಿಸಿದ ನಾಯಿಗಳು ಅಟ್ಟಿಸಿಕೊಂಡು ಹೋದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜುಲೈ 3ರಂದು ರಾತ್ರಿ 11 ಗಂಟೆಗೆ ದೆಹಲಿಯಲ್ಲಿ ನಡೆದಿರುವ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಾಡಿಗೆ ಬಂದ ಚಿರತೆ ರಸ್ತೆ ದಾಟುವುದನ್ನು ಗಮನಿಸಿದ ಸುಮಾರು 9 ಬೀದಿನಾಯಿಗಳು ಬೆಕ್ಕು ಎಂದು ಭಾವಿಸಿ ಅಟ್ಟಿಸಿಕೊಂಡು ಹೋದವು. ಆದರೆ ಕೆಲವೇ ನಿಮಿಷಗಳಲ್ಲಿ ಅದು ಬೆಕ್ಕಲ್ಲ ಅಂತ ಗೊತ್ತಾಗುತ್ತಿದ್ದಂತೆ ಅಟ್ಟಿಸಿಕೊಂಡು ಹೋದ ವೇಗದಲ್ಲೇ ವಾಪಸ್ ಓಡಿ ಬಂದಿವೆ.
9 ಬೀದಿನಾಯಿಗಳು ಒಂದರ ಹಿಂದೆ ಒಂದರಂತೆ ಚಿರತೆಯನ್ನು ಅಟ್ಟಿಸಿಕೊಂಡು ಹೋಗಿದೆ. ಆದರೆ ಹತ್ತಿರ ಹೋಗುತ್ತಿದ್ದಂತೆ ಬೆಕ್ಕು ಅಲ್ಲ ಅದು ಚಿರತೆ ಎಂದು ಅರಿವಾಗುತ್ತಿದ್ದಂತೆ ಒಂದೊಂದು ನಾಯಿಗಳು ಒಂದೊಂದು ಕಡೆ ದಿಕ್ಕಾಪಾಲಾಗಿ ಓಡಿ ಹೋಗಿವೆ.



