Sunday, December 7, 2025
Google search engine
Homeದೇಶಅಯೋಧ್ಯೆ ರಾಮಮಂದಿರಕ್ಕೆ 20 ದಿನ ಬರಬೇಡಿ: ರಾಮಜನ್ಮಭೂಮಿ ಟ್ರಸ್ಟ್ ಮನವಿ

ಅಯೋಧ್ಯೆ ರಾಮಮಂದಿರಕ್ಕೆ 20 ದಿನ ಬರಬೇಡಿ: ರಾಮಜನ್ಮಭೂಮಿ ಟ್ರಸ್ಟ್ ಮನವಿ

ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಭಕ್ತರು ಭಾರೀ ಸಂಖ್ಯೆಯಲ್ಲಿ ಅಯೋಧ್ಯೆಗೂ ಭೇಟಿ ನೀಡುತ್ತಿರುವ ಕಾರಣ ಜನಸಂದಣಿ ವಿಪರೀತವಾಗಿದೆ. ಹೀಗಾಗಿ ಅಯೋಧ್ಯೆಗೆ ಬರುವ ಭಕ್ತರು 15-20 ದಿನಗಳ ಕಾಲ ಪ್ರವಾಸ ಮುಂದೂಡಿ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮನವಿ ಮಾಡಿದೆ.

ರಾಮಜನ್ಮಭೂಮಿ ಟ್ರಸ್ಟಿನ ಮಹಾನಿರ್ದೇಶಕ ಚಂಪಕ್ ರಾಯ್ ವಿವರವಾದ ಮಾಹಿತಿಯನ್ನು ಹಂಚಿಕೊಂಡಿದ್ದು, ‘ಮಹಾಕುಂಭ ಮೇಳದಲ್ಲಿ ಪವಿತ್ರ ಸ್ನಾನ ಕೈಗೊಳ್ಳಲು ಅಪಾರ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ. ಅಲ್ಲಿಂದ ಅಯೋಧ್ಯೆಗೂ ಜನರು ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಹಿಂದೆಂದೂ ಕಂಡಿರದಷ್ಟು ಭಕ್ತ ಸಾಗರವನ್ನು ಅಯೋಧ್ಯೆಯಲ್ಲಿ ಕಾಣುತ್ತಿದ್ದೇವೆ. ಇದರ ಪರಿಣಾಮ ಶ್ರೀರಾಮನ ದರ್ಶನಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

‘ಜನರು ಹೆಚ್ಚಿರುವ ಕಾರಣ ವಾಹನಗಳ ನಿಲುಗಡೆ ಸೇರಿದಂತೆ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ, ಇದರಿಂದ ಭಕ್ತರು ಹೆಚ್ಚು ದೂರ ನಡೆದು ಬರಬೇಕಾಗಿದೆ. ಈ ಎಲ್ಲ ಕಾರಣಗಳಿಂದ ದೂರದ ಊರಿನಿಂದ ಬರುವವರಿಗೆ ರಾಮನ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಹತ್ತಿರದಲ್ಲಿರುವವರು ಮುಂದಿನ 15-20 ದಿನಗಳ ನಂತರ ಅಯೋಧ್ಯೆಗೆ ಬರುವ ಯೋಜನೆಯನ್ನು ರೂಪಿಸಿಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ.

ಫೆ.2ರಂದು ಇರುವ ವಸಂತ ಪಂಚಮಿ ಬಳಿಕ ದೇವರ ದರ್ಶನಕ್ಕೆ ಸುಲಭವಾಗಿ ಅವಕಾಶ ದೊರೆಯಲಿದೆ. ಹವಾಮಾನವೂ ಉತ್ತಮವಾಗಿರುತ್ತದೆ. ಸೋಮವಾರ ಮತ್ತು ಮಂಗಳವಾರ ಸುಮಾರು 40 ಲಕ್ಷ ಜನ ಅಯೋಧ್ಯೆಗೆ ಭೇಟಿ ನೀಡಿದ್ದಾರೆ ಎಂದು ದೇಗುಲದ ಟ್ರಸ್ಟ್ ಹೇಳಿದೆ

ಉತ್ತರಪ್ರದೇಶ ಸರ್ಕಾರದ ಮಾಹಿತಿ ಪ್ರಕಾರ, ಜ.13 ರಿಂದ ಜ.27ರವರೆಗೆ 14 ಕೋಟಿಗೂ ಹೆಚ್ಚು ಜನ ಪ್ರಯಾಗ್ ರಾಜ್ ನಲ್ಲಿ ಪವಿತ್ರ ಸ್ನಾನ ಕೈಗೊಂಡಿದ್ದಾರೆ. ಇದರ ನಡುವೆ, ಅಯೋಧ್ಯೆ ನಗರದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಮುಂದಿನ 10 ದಿನ ಆನ್ ಲೈನ್ ತರಗತಿ ನಡೆಸುವಂತೆ ಜಿಲ್ಲಾಡಳಿತ ಸೂಚಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments