Friday, December 12, 2025
Google search engine
Homeದೇಶಟ್ರಂಪ್ ಶೇ.25 ಸುಂಕ: ಭಾರತದ ಜವಳಿ ಉದ್ಯಮಕ್ಕೆ ದೊಡ್ಡ ಹೊಡೆತ

ಟ್ರಂಪ್ ಶೇ.25 ಸುಂಕ: ಭಾರತದ ಜವಳಿ ಉದ್ಯಮಕ್ಕೆ ದೊಡ್ಡ ಹೊಡೆತ

ನವದೆಹಲಿ: ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇಕಡಾ 25ರಷ್ಟು ಹೆಚ್ಚುವರಿ ಆಮದು ಸುಂಕ ಮತ್ತು ದಂಡವನ್ನು ವಿಧಿಸುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಘೋಷಣೆಯು ಭಾರತದ ಜವಳಿ ರಫ್ತುದಾರರಿಗೆ ಭಾರೀ ಪೆಟ್ಟು ನೀಡಲಿದೆ.

ಅಮೆರಿಕವು ಭಾರತದ ಜವಳಿ ಮತ್ತು ರೆಡಿಮೇಡ್ ಗಾರ್ಮೆಂಟ್‌ಗಳ ರಫ್ತಿನ ಅತಿದೊಡ್ಡ ಮಾರುಕಟ್ಟೆಯಾಗಿದೆ. ಒಟ್ಟಾರೆ ಭಾರತದಿಂದ ವಾರ್ಷಿಕವಾಗಿ 17 ಬಿಲಿಯನ್ ಡಾಲರ್ ಮೌಲ್ಯದ ರೆಡಿಮೇಡ್ ಗಾರ್ಮೆಂಟ್‌ಗಳನ್ನು ರಫ್ತು ಮಾಡಲಾಗುತ್ತದೆ, ಇದರಲ್ಲಿ 5.6 ಬಿಲಿಯನ್ ಡಾಲರ್‌ನಷ್ಟು ಅಮೆರಿಕಕ್ಕೆ ಸೀಮಿತವಾಗಿದೆ.

ಭಾರತವು ಗುಣಮಟ್ಟದಲ್ಲಿ ಬಾಂಗ್ಲಾದೇಶ ಮತ್ತು ಕಾಂಬೋಡಿಯಾದಂತಹ ದೇಶಗಳಿಗಿಂತ ಮುಂದಿದೆಯಾದರೂ, ವಿಯೆಟ್ನಾಂ ಮತ್ತು ಇಂಡೋನೇಷ್ಯಾದ ಕಡಿಮೆ ಸುಂಕದಿಂದಾಗಿ ಭಾರತೀಯ ರಫ್ತುದಾರರು ಪೈಪೋಟಿಯ ಒತ್ತಡವನ್ನು ಎದುರಿಸುತ್ತಿದ್ದಾರೆ.

ಈ ಸುಂಕವು ಭಾರತದ ಜವಳಿ ಉತ್ಪನ್ನಗಳನ್ನು ಅಮೆರಿಕದ ಮಾರುಕಟ್ಟೆಯಲ್ಲಿ ಕಡಿಮೆ ಸ್ಪರ್ಧಾತ್ಮಕವಾಗಿಸಿದೆ. ಚಿಕ್ಕ ರಫ್ತುದಾರರು ಈ ಒತ್ತಡವನ್ನು ತಡೆದುಕೊಳ್ಳಲು ಕಷ್ಟಪಡಬಹುದು” ಎಂದು ಚಟರ್ಜಿ ಎಚ್ಚರಿಸಿದ್ದಾರೆ.
ಪರ್ಯಾಯ ಮಾರುಕಟ್ಟೆಗಳತ್ತ ಗಮನ

ಈ ಸವಾಲನ್ನು ಎದುರಿಸಲು, ರಫ್ತುದಾರರು ಯುಕೆ, ಯುಎಇ, ಜಪಾನ್, ಕೊರಿಯಾ ಮತ್ತು ಇತರ ಮಾರುಕಟ್ಟೆಗಳತ್ತ ಗಮನ ಹರಿಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ಅಮೆರಿಕದ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಂಡು, ಇತರ ದೇಶಗಳೊಂದಿಗಿನ ವ್ಯಾಪಾರವನ್ನು ವಿಸ್ತರಿಸುವ ಸಮಯ ಇದು ಎಂದು ಸೈಬೆಕ್ಸ್ ಎಕ್ಸಿಮ್ ಸೊಲ್ಯೂಶನ್ಸ್ ಒತ್ತಿ ಹೇಳಿದೆ.

ಭಾರತದ ಜವಳಿ ರಫ್ತು:

2024ರಲ್ಲಿ ಭಾರತವು ಅಮೆರಿಕಕ್ಕೆ 10.5 ಬಿಲಿಯನ್ ಡಾಲರ್ ಮೌಲ್ಯದ ಜವಳಿ ಮತ್ತು ಗಾರ್ಮೆಂಟ್ ಉತ್ಪನ್ನಗಳನ್ನು ರಫ್ತು ಮಾಡಿತು. ಇದು ಒಟ್ಟು ಜವಳಿ ರಫ್ತಿನ ಶೇಕಡಾ 28ರಷ್ಟು. ಈ ಸುಂಕವು ಈ ರಫ್ತುಗಳ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ.

ವಿಶೇಷವಾಗಿ ಕಾರ್ಪೆಟ್‌ಗಳು, ಹೋಮ್ ಟೆಕ್ಸ್‌ ಟೈಲ್ಸ್‌ ಮತ್ತು ರೆಡಿಮೇಡ್ ಗಾರ್ಮೆಂಟ್‌ಗಳಂತಹ ವಿಭಾಗಗಳ ಮೇಲೆ ದೊಡಡ ಹೊಡೆತ ಬಿದ್ದಿದೆ. ಈ ಉತ್ಪನ್ನಗಳು ಈಗಾಗಲೇ ಶೇಕಡಾ 10-12ರಷ್ಟು ಸುಂಕವನ್ನು ಎದುರಿಸುತ್ತಿದ್ದು, ಹೆಚ್ಚುವರಿ ಶೇಕಡಾ 25ರ ಸುಂಕವು ಒಟ್ಟಾರೆ ದರವನ್ನು ಶೇಕಡಾ 31-34ಕ್ಕೆ ಏರಿಸಲಿದೆ. ಇದರ ಜೊತೆಗೆ ದಂಡವೂ ಸೇರಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments