ವೃತ್ತಿಪರ ದೇಹದಾರ್ಡ್ಯ ಸ್ಪರ್ಧಿ ಹಾಗೂ ಪಂಜಾಬಿ ನಟ ವರಿಂದರ್ ಸಿಂಗ್ ಗುಮನ್ ಹೃದಯಾಘಾತದಿಂದ ಅಸುನೀಗಿದ್ದಾರೆ. ಅವರಿಗೆ 41 ವರ್ಷ ವಯಸ್ಸಾಗಿತ್ತು.
ಭುಜದ ನೋವು ಕಾಣಿಸಿಕೊಂಡ ಕಾರಣ ವರಿಂದರ್ ಸಿಂಗ್ ಗುಮನ್ ಅವರನ್ನು ಅಮೃತಸರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಗುಮನ್ ಅವರ ಮ್ಯಾನೇಜರ್ ಯದ್ವಿಂದರ್ ಸಿಂಗ್ ಹೇಳಿದ್ದಾರೆ.
2023ರಲ್ಲಿ ಸಲ್ಮಾನ್ ಖಾನ್ ಅಭಿನಯದ ಟೈಗರ್-3 ಹಾಗೂ ರೋರ್: ಟೈಗರ್ ಆಫ್ ಸುಂದರ್ ಬೇನ್, 2019ರಲ್ಲಿ ಮರ್ದ್ ವಾನ್, 2012ರಲ್ಲಿ ಕಬಡ್ಡಿ ಓನ್ಸ್ ಎಗೈನ್ ಚಿತ್ರಗಳಲ್ಲಿ ನಟಿಸಿದ್ದರು.
6 ಅಡಿ 2 ಇಂಚು ಎತ್ತರದ ಅಜಾನುಬಾಹು ವರಿಂದರ್ ಸಿಂಗ್ ಗುಮಾನ್ 2009ರಲ್ಲಿ ಮಿಸ್ಟರ್ ಇಂಡಿಯಾ ಪ್ರಶಸ್ತಿಗೆ ಪಾತ್ರರಾಗಿದ್ದರು. ಮಿಸ್ಟರ್ ಏಷ್ಯಾ ಸ್ಪರ್ಧೆಯಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ್ದರು.



