Monday, June 8, 2026
Google search engine
Homeಕ್ರೀಡೆಭಾರತ ಟಿ-20 ತಂಡ ಪ್ರಕಟ: ಶ್ರೇಯಸ್‌ ನಾಯಕ, ಸೂರ್ಯವಂಶಿ ಇನ್‌, ಸೂರ್ಯಕುಮಾರ್‌ ಔಟ್!‌

ಭಾರತ ಟಿ-20 ತಂಡ ಪ್ರಕಟ: ಶ್ರೇಯಸ್‌ ನಾಯಕ, ಸೂರ್ಯವಂಶಿ ಇನ್‌, ಸೂರ್ಯಕುಮಾರ್‌ ಔಟ್!‌

ಏಷ್ಯನ್‌ ಗೇಮ್ಸ್‌, ಇಂಗ್ಲೆಂಡ್‌ ಮತ್ತು ಐರ್ಲೆಂಡ್‌ ವಿರುದ್ಧದ ಟಿ-20 ತಂಡವನ್ನು ಬಿಸಿಸಿಐ ಪ್ರಕಟಿಸಲಿದ್ದು, ನಿರೀಕ್ಷೆಯಂತೆ ಹಲವು ಬದಲಾವಣೆ ಮಾಡಲಾಗಿದೆ.

ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿ ಭಾರತ ಟಿ-20 ತಂಡವನ್ನು ಪ್ರಕಟಿಸಿದ್ದು, ರನ್‌ ಬರ ಎದುರಿಸುತ್ತಿರುವ ಸೂರ್ಯಕುಮಾರ್‌ ಯಾದವ್‌ ಅವರನ್ನು ನಾಯಕತ್ವದಿಂದ ಅಲ್ಲದೇ ತಂಡದಿಂದಲೂ ಕೈಬಿಡಲಾಗಿದೆ.

ಶ್ರೇಯಸ್‌ ಅಯ್ಯರ್‌ ನಿರೀಕ್ಷೆಯಂತೆ ನಾಯಕರಾಗಿ ಆಯ್ಕೆಯಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದ್ದ 15 ವರ್ಷದ ಸ್ಫೋಟಕ ಬ್ಯಾಟ್ಸ್‌ ಮನ್‌ ವೈಭವ್‌ ಸೂರ್ಯವಂಶಿಗೆ ಇದೇ ಮೊದಲ ಬಾರಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಐರ್ಲೆಂಡ್‌ ವಿರುದ್ಧ 2, ಇಂಗ್ಲೆಂಡ್‌ ವಿರುದ್ಧ 5, ಜಪಾನ್‌ ನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ.

ಭಾರತ ತಂಡ

ಶ್ರೇಯಸ್‌ ಅಯ್ಯರ್‌ (ನಾಯಕ), ತಿಲಕ್‌ ವರ್ಮಾ, ರವಿ ಬಿಶ್ನೋಯಿ, ಅಭಿಷೇಕ್‌ ಶರ್ಮ, ನಿತೀಶ್‌ ಕುಮಾರ್‌ ರೆಡ್ಡಿ, ಜಸ್‌ ಪ್ರೀತ್‌ ಬುಮ್ರಾ, ಸಂಜು ಸ್ಯಾಮ್ಸನ್‌, ಅಕ್ಸರ್‌ ಪಟೇಲ್‌, ಹರ್ಷಿತ್‌ ರಾಣಾ, ಇಶಾನ್‌ ಕಿಶನ್‌, ವಾಷಿಂಗ್ಟನ್‌ ಸುಂದರ್‌, ಅರ್ಷದೀಪ್‌ ಸಿಂಗ್‌, ಶಿವಂ ದುಬೆ, ವರುಣ್‌ ಚಕ್ರವರ್ತಿ, ವೈಭವ್‌ ಸೂರ್ಯವಂಶಿ, ಮೊಹಮದ್‌ ಸಿರಾಜ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments