ಟೆಹರಾನ್: ಇರಾನ್- ಇಸ್ರೇಲ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಯುದ್ಧ ವಾರ ಪೂರೈಸಿದ್ದು, ಉಭಯ ದೇಶಗಳು ದಾಳಿ-ಪ್ರತಿದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿವೆ.
ಶ್ರೀಲಂಕಾದ ಹಿಂದೂ ಮಹಾಸಾಗರದಲ್ಲಿ ಇರಾನ್ ನೌಕಾಪಡೆಯನ್ನು ಅಮೆರಿಕ ಹೊಡೆದುರುಳಿಸಿದ್ದಕ್ಕಾಗಿ ಶುಕ್ರವಾರ ಕುವೈತ್ ನಲ್ಲಿ ಅಮೆರಿಕ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ ಮಾಡಿ ಧ್ವಂಸಗೊಳಿಸಿದೆ.
ಇದೇ ವೇಳೆ ಇರಾಕ್, ಕತಾರ್, ದುಬೈ ಮುಂತಾದ ದೇಶಗಳಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಇರಾನ್ ದಾಳಿ ಮುಂದುವರಿಸಿದ್ದು, ನಾಗರಿಕರು ಕೂಡಲೇ ದೇಶ ತೊರೆಯುವಂತೆ ಸ್ಥಳೀಯ ಸರ್ಕಾರಗಳು ಆದೇಶಿಸಿವೆ.
ಮತ್ತೊಂದೆಡೆ ಇರಾನ್ ನ ಶಸ್ತ್ರಾಗಾರ, 50ಕ್ಕೂ ಹೆಚ್ಚು ಗಣ್ಯರು ಬಳಸುವ ಅತ್ಯಾಧುನಿಕ ವಿಮಾನಗಳು ಇರುವ ನೆಲೆಯ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಅಮೆರಿಕ ಅಡಗುತಾಣಗಳನ್ನು ಗುರಿಯಾಗಿಸಿ ಭಾರೀ ಪ್ರಮಾಣದಲ್ಲಿ ಬಾಂಬ್ ಹಾಕುತ್ತಿದೆ.
ಇಸ್ರೇಲ್ ಮತ್ತು ಅಮೆರಿಕ ಶಸ್ತ್ರಾಗಾರ ಕೇಂದ್ರೀಕರಿಸಿ ದಾಳಿ ಮುಂದುವರಿಸಿದ ಹಿನ್ನೆಲೆಯಲ್ಲಿ ಇರಾನ್ ಕ್ಷಿಪಣಿಗಳ ನಗರದಿಂದ ಶಸ್ತ್ರಾಸ್ತ್ರಗಳನ್ನು ಸ್ಥಳಾಂತರಗೊಳಿಸಲು ತೀರ್ಮಾನಿಸಿದೆ.
ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ಅನುಮತಿ
ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಷ್ಯಾದಿಂದ 30 ದಿನಗಳ ತೈಲ ಆಮದು ಮಾಡಿಕೊಳ್ಳಲು ಅಮೆರಿಕ ಭಾರತಕ್ಕೆ ಅನುಮತಿ ನೀಡಿದೆ.
ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳಬಾರದು. ಅಲ್ಲದೇ ಅಮೆರಿಕದಿಂದ ಮಾತ್ರ ತೈಲ ಆಮದು ಮಾಡಿಕೊಳ್ಳುವಂತೆ ಅಮೆರಿಕ ಜೊತೆ ಭಾರತ ಒಪ್ಪಂದ ಮಾಡಿಕೊಂಡಿತ್ತು.
ಆದರೆ ಮಧ್ಯಪ್ರಾಚ್ಯದಲ್ಲಿ ಯುದ್ಧ ವಾರ ಪೂರೈಸಿದರೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇರಾನ್ ಹರ್ಮುಜ್ ಜಲಸಂಧಿಯಲ್ಲಿ ಇರಾನ್ ಸಂಪೂರ್ಣ ಹಿಡಿತ ಸಾಧಿಸಿದ್ದು, ತೈಲ ಟ್ಯಾಂಕರ್ ಸೇರಿದಂತೆ ಯಾವುದೇ ಹಡಗು ಹೋಗದಂತೆ ತಡೆ ಹಿಡಿದಿದೆ. ಇದರಿಂದ ಹಲವು ದೇಶಗಳು ತೈಲ ಕೊರತೆ ಎದುರಿಸುವ ಭೀತಿಗೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ 30 ದಿನಗಳ ರಿಯಾಯಿತಿ ನೀಡಿದೆ.



