Monday, June 29, 2026
Google search engine
Homeವಿದೇಶರಿಯಾದ್‌ ನ ಅಮೆರಿಕ ರಾಯಭಾರ ಕಚೇರಿ ಧ್ವಂಸ

ರಿಯಾದ್‌ ನ ಅಮೆರಿಕ ರಾಯಭಾರ ಕಚೇರಿ ಧ್ವಂಸ

ರಿಯಾದ್‌ ನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಮೇಲೆ ಇರಾನ್‌ ದಾಳಿ ನಡೆಸಿ ಧ್ವಂಸಗೊಳಿಸಿದೆ. ಇದರಿಂದ ಮಧ್ಯಪ್ರಾಚ್ಯದ ಬಿಕ್ಕಟ್ಟು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.

ಇರಾನ್‌ ನಲ್ಲಿ ಅಮೆರಿಕ ಕಾಲಿಡಲು ಹಿಂಜರಿಯುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆ ಬೆನ್ನಲ್ಲೇ ಇರಾನ್‌ ಕ್ಷಿಪಣಿಗಳು ರಿಯಾದ್‌ ಅಮೆರಿಕದ ರಾಯಭಾರ ಕಚೇರಿ ಮೇಲೆ ಬಿದ್ದಿದೆ. ಈ ದಾಳಿ ಬೆನ್ನಲ್ಲೇ ಟ್ರಂಪ್‌ ಅದರ ಅಗತ್ಯವಿಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.

ಇರಾನ್‌ ಮೇಲಿನ ದಾಳಿ ಆರಂಭವಾಗಿದೆ ಅಷ್ಟೆ. ನಾವಿನ್ನು ದೊಡ್ಡ ಮಟ್ಟದಲ್ಲಿ ದಾಳಿ ಮಾಡಿಲ್ಲ. ಶಸ್ತ್ರಾಸ್ತ್ರ ತ್ಯಜಿಸದೇ ಇದ್ದರೆ ನಾವು ಊಹೆಗೂ ಮೀರಿದ ದಾಳಿ ಮಾಡುವುದಾಗಿ ಟ್ರಂಪ್‌ ಹೇಳಿಕೆ ನೀಡಿದ್ದರು.

ಇರಾನ್‌ ದುಬೈ. ಕತಾರ್‌, ಜೋರ್ಡಾನ್‌ ಸೇರಿದಂತೆ ಹಲವು ಅರಬ್‌ ರಾಷ್ಟ್ರಗಳಲ್ಲಿರುವ ಅಮೆರಿಕ ರಾಯಭಾರ ಕಚೇರಿಗಳ ಮೇಲೆ ದಾಳಿ ಮಾಡಿ ಅಪಾರ ಹಾನಿ ಉಂಟು ಮಾಡಿದೆ. ಅಲ್ಲದೇ ಇಸ್ರೇಲ್‌ ನ ಪ್ರಧಾನಿ ಕಚೇರಿ ಮೇಲೆ ಕೂಡ ಕ್ಷಿಪಣಿ ಹಾಕಿದೆ.

ಮತ್ತೊಂದೆಡೆ ಇಸ್ರೇಲ್‌ ಕೂಡ ಇರಾನ್‌ ರಾಯಭಾರ ಕಚೇರಿ ಮೇಲೆ ದಾಳಿ ಮಾಡಿದೆ. ದಾಳಿ ಪ್ರತಿದಾಳಿಯಲ್ಲಿ ಇರಾನ್‌ ನ ೫೫೦ ಮಂದಿ ಮೃತಪಟ್ಟಿದ್ದರೆ ಉಳಿದೆಡೆ ೫೦೦ ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments