Thursday, May 14, 2026
Google search engine
Homeಬೆಂಗಳೂರುಬೆಂಗಳೂರಿನಲ್ಲಿ ಭಾರೀ ಮಳೆಗೆ ಮೊದಲ ಬಲಿ: ಗೋಡೆ ಜೆಸಿಬಿ ಏರಿದ ಶಾಸಕ!

ಬೆಂಗಳೂರಿನಲ್ಲಿ ಭಾರೀ ಮಳೆಗೆ ಮೊದಲ ಬಲಿ: ಗೋಡೆ ಜೆಸಿಬಿ ಏರಿದ ಶಾಸಕ!

ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ನಗರದ ಮಹದೇವಪುರದಲ್ಲಿ ಗೋಡೆ ಕುಸಿದು ಖಾಸಗಿ ಕಂಪನಿಯ ಉದ್ಯೋಗಿ ಶಶಿಕಲಾ (35) ಮೃತಪಟ್ಟಿದ್ದಾರೆ. ಮಳೆಗೆ ರಾಜಧಾನಿಗೆ ಮೊದಲ ಬಲಿಯಾಗಿದೆ.

ಭಾನುವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ನಗರದ ಬಹುತೇಕ ತಗ್ಗುಪ್ರದೇಶಗಳಲ್ಲಿ ಮಳೆ ನೀರು ನಿಂತು ಜಲಾವೃತಗೊಂಡಿದೆ. ಇದರಿಂದ ಸಂಚಾರ ಅವ್ಯವಸ್ಥೆಯಿಂದ ವಾಹನ ಸವಾರರು ಪರದಾಡುವಂತಾಗಿದೆ.

ಬೆಂಗಳೂರಿನ ಹಲವೆಡೆ ಜಲವೃತಗೊಂಡ ಪ್ರದೇಶದಿಂದ ಜನರನ್ನು ರಕ್ಷಿಸಲು ಜೆಸಿಬಿ ವಾಹನಗಳನ್ನು ಬಳಸಲಾಗಿದ್ದು, ಶಾಸಕ ಬಸವರಾಜ್ ಜೆಸಿಬಿ ಮೇಲೆ ಸವಾರಿ ಮಾಡಿಕೊಂಡು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಬೆಳಗಾವಿ ಕೋಲಾರ, ಹಾಸನ, ಮೈಸೂರು, ಬೀದರ್, ರಾಯಚೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮೇ 22ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments