Thursday, June 11, 2026
Google search engine
Homeತಾಜಾ ಸುದ್ದಿಇರಾನ್ ನಲ್ಲಿ ಬಸ್ ಅಪಘಾತದಲ್ಲಿ 35 ಪಾಕಿಸ್ತಾನಿ ಯಾತ್ರಿಗಳ ಸಾವು

ಇರಾನ್ ನಲ್ಲಿ ಬಸ್ ಅಪಘಾತದಲ್ಲಿ 35 ಪಾಕಿಸ್ತಾನಿ ಯಾತ್ರಿಗಳ ಸಾವು

ಇರಾನ್ ನಲ್ಲಿ ಬಸ್ ಉರುಳಿಬಿದ್ದು ಸಂಭವಿಸಿದ ಭೀಕರ ಅಪಘಾತದಲ್ಲಿ ಪಾಕಿಸ್ತಾನದ 35 ಯಾತ್ರಿಗಳು ಮೃತಪಟ್ಟಿದ್ದಾರೆ.

ಪಾಕಿಸ್ತಾನದಿಂದ ಇರಾಕ್ ಗೆ ಪ್ರಯಾಣಿಸುತ್ತಿದ್ದ 53 ಪಾಕಿಸ್ತಾನಿಯರು ಇದ್ದ ಬಸ್ ಇರಾನ್ ನ ಯಜ್ದ್ ಪ್ರಾವಿನೆನ್ಸ್ ನಲ್ಲಿ ಪಲ್ಟಿ ಹೊಡೆದಿದೆ.

ಮೃತಪಟ್ಟ ಬಹುತೇಕರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕಾನಾದ ನಿವಾಸಿಗಳು ಎಂದು ಹೇಳಲಾಗಿದೆ. ದುರ್ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments