Wednesday, May 13, 2026
Google search engine
Homeವಿದೇಶಭಾರತದ ಮೇಲೆ ದಾಳಿಗೆ 1000 ಆತ್ಮಾಹುತಿ ಬಾಂಬರ್‌ ಸಜ್ಜು: ಉಗ್ರ ಮಸೂದ್‌ ಅಜರ್‌ ಆಡೀಯೊ ಬಹಿರಂಗ

ಭಾರತದ ಮೇಲೆ ದಾಳಿಗೆ 1000 ಆತ್ಮಾಹುತಿ ಬಾಂಬರ್‌ ಸಜ್ಜು: ಉಗ್ರ ಮಸೂದ್‌ ಅಜರ್‌ ಆಡೀಯೊ ಬಹಿರಂಗ

ಒಂದಲ್ಲ 1000 ಆತ್ಮಾಹುತಿ ಬಾಂಬರ್‌ ಗಳು ಯಾವುದೇ ಕ್ಷಣದಲ್ಲಿ ದಾಳಿಗೆ ಸಜ್ಜಾಗಿದ್ದಾರೆ ಎಂದು ಪಾಕಿಸ್ತಾನದಲ್ಲಿರುವ ಜೈಷೇ ಮೊಹಮದ್‌ ಸಂಘಟನೆಯ ಉಗ್ರ ಮಸೂದ್‌ ಅಜರ್‌ ಎಚ್ಚರಿಸಿದ್ದಾರೆ.

ಭಾರತದ ಮೇಲೆ ಪದೇಪದೆ ದಾಳಿಯ ಹಿಂದಿನ ರೂವಾರಿ ಆಗಿರುವ ಮಸೂದ್‌ ಅಜರ್‌ ಮಾತನಾಡಿರುವ ಆಡೀಯೋ ಬಹಿರಂಗವಾಗಿದ್ದು, ಈ ಆಡಿಯೋದಲ್ಲಿ ಮಾಡಿರುವ ಭಾಷಣ ಆತಂಕ ಉಂಟು ಮಾಡುವಂತಿದೆ.
ಒಂದಲ್ಲ 1000 ಸೂಸೈಡ್‌ ಬಾಂಬರ್ಸ್‌ ಯಾವುದೇ ಕ್ಷಣದಲ್ಲಿ ದಾಳಿ ನಡೆಸಲು ಸಜ್ಜಾಗಿದ್ದಾರೆ. ಭಾರತದ ಮೇಲೆ ಈ ಬಾರಿ ನಡೆವ ದಾಳಿಯಲ್ಲಿ ಜಗತ್ತು ಬೆಚ್ಚಿಬೀಳಲಿದೆ ಎಂದು ಅವರು ಹೇಳಿದ್ದಾರೆ.

ನಮ್ಮ ಬಳಿ ಈಗ ಒಂದಲ್ಲ, ಎರಡಲ್ಲ, 100 ಅಲ್ಲ, 1000 ಅಲ್ಲ, ಎಷ್ಟು ಮಂದಿ ಆತ್ಮಾಹುತಿ ಬಾಂಬರ್‌ ಗಳು ಸಜ್ಜಾಗಿದ್ದಾರೆ ಎಂಬುದು ತಿಳಿದರೆ ಇಡೀ ಜಗತ್ತು ಬೆಚ್ಚಿ ಬೀಳಲಿದೆ. ನಾನು ಸಂಪೂರ್ಣ ಸಂಖ್ಯೆಗಳನ್ನು ವಿವರಿಸಿದರೆ ತಲ್ಲಣಿಸುತ್ತಾರೆ ಎಂದು ಮಸೂದ್‌ ಅಜರ್‌ ಹೇಳಿದ್ದಾರೆ.

ಮಸೂದ್‌ ಅಜರ್‌ ಹೇಳಿಕೆಯ ಆಡಿಯೋದ ಸ್ಥಳ ಹಾಗೂ ಸಮಯದ ಮಾಹಿತಿ ಲಭ್ಯವಾಗಿಲ್ಲ. ಆದರೆ ಆಡಿಯೋದಲ್ಲಿ ದಾಳಿಗೆ ಸಂಪೂರ್ಣವಾಗಿ ಆತ್ಮಾಹುತಿ ಬಾಂಬರ್‌ ಗಳು ಸಜ್ಜಾಗಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಂಪೂರ್ಣವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

2001ರ ಸಂಸತ್‌ ಭವನದ ಮೇಲೆ ದಾಳಿ ಹಾಗೂ 2008ರ ಮುಂಬೈ ದಾಳಿ ಹಿಂದಿನ ಮಾಸ್ಟರ್‌ ಮೈಂಡ್‌ ಆಗಿರುವ ಮಸೂದ್‌ ಅಜರ್‌ ಭಾರತದ ವಿರುದ್ಧ ಪದೇಪದೇ ಹೇಳಿಕೆ ನೀಡುತ್ತಲೇ ಬಂದಿದ್ದು ಈ ಬಾರಿಯ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments