Monday, June 29, 2026
Google search engine
Homeವಿದೇಶಚಳಿಗಾಳಿಗೆ ಅಮೆರಿಕ ಗಢಗಢ: 7 ಲಕ್ಷ ಮನೆ ವಿದ್ಯುತ್‌ ಕಡಿತ, 10,000 ವಿಮಾನ ಸಂಚಾರ ವ್ಯತ್ಯಯ

ಚಳಿಗಾಳಿಗೆ ಅಮೆರಿಕ ಗಢಗಢ: 7 ಲಕ್ಷ ಮನೆ ವಿದ್ಯುತ್‌ ಕಡಿತ, 10,000 ವಿಮಾನ ಸಂಚಾರ ವ್ಯತ್ಯಯ

ಚಳಿಗಾಲದ ಭೀಕರ ಚಳಿಗೆ ಅಮೆರಿಕ ತತ್ತರಿಸಿದ್ದು, ಟೆಕ್ಸಾಸ್‌ ನಿಂದ ನ್ಯೂ ಇಂಗ್ಲೆಂಡ್‌ ವರಗೆ ಚಳಿ ಆವರಿಸಿದ್ದು, ಜನರು ಮನೆ ಹೊರಗೆ ಬಾರಲು ಹಿಂದೇಟು ಹಾಕುತ್ತಿದ್ದಾರೆ.

ಭೀಕರ ಚಳಿಗೆ ಅಮೆರಿಕದ ಜನತೆ ತಲ್ಲಣಿಸಿದ್ದು, 7 ಲಕ್ಷ ಕುಟುಂಬಗಳು ವಿದ್ಯುತ್‌ ಪೂರೈಕೆ ಇಲ್ಲದೇ ತತ್ತರಿಸುತ್ತಿವೆ. ಮತ್ತೊಂದೆಡೆ 10,000ಕ್ಕೂ ಅಧಿಕ ವಿಮಾನಗಳು ಹವಾಮಾನ ವೈಪರಿತ್ಯದಿಂದ ಸಂಚಾರ ಆರಂಭಿಸಲು ಆಗದೇ ತಟಸ್ಥಗೊಂಡಿವೆ.

ಮುಂದಿನ ವಾರ ಚಳಿಯ ಅಬ್ಬರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ಜನರು ಮನೆಯಿಂದ ಹೊರಗೆ ಬರುವುದಾಗಲಿ, ವಾಹನ ಚಲಾಯಿಸುವುದಾಗಿ ಅಪಾಯಕಾರಿ ಎಂದು ಸಾರ್ವಜನಿಕರಿಗೆ ಪ್ರಕಟಣೆ ಹೊರಡಿಸಿ ಎಚ್ಚರಿಸಿದೆ.

ಭಾನುವಾರ ಬೆಳಿಗ್ಗೆ ಸುಮಾರು 7 ಲಕ್ಷ ಕುಟುಂಬಗಳ ವಿದ್ಯುತ್‌ ಪೂರೈಕೆಯಲ್ಲಿ ಕಡಿತ ಉಂಟಾಗಿದೆ. ಇದರಿಂದ ಹೀಟರ್‌ ಅಥವಾ ಬೆಂಕಿಯ ಸೌಲಭ್ಯ ಇಲ್ಲದೇ ಪರದಾಡುವಂತಾಗಿದೆ. ಬಹುತೇಕ ದಕ್ಷಿಣ ಅಮೆರಿಕದಲ್ಲಿ 2.50 ಲಕ್ಷ ಜನರು ವಿದ್ಯುತ್‌ ಸೇವೆ ಸಿಗದೇ ಪರಿತಪಿಸುತ್ತಿದ್ದಾರೆ. ವಾಣಿಜ್ಯ ಮಳಿಗೆಗಳು ವಿದ್ಯುತ್‌ ಪೂರೈಕೆ ಎರಡು ದಿನಗಳಿಂದ ಸಿಗದೇ ಬಾಗಿಲು ಮುಚ್ಚಿವೆ.

ಟೆಕ್ಸಾಸ್‌, ಮೆಸ್ಸಿಸಿಪಿ, ಲೂಸಿಯಾನಾ ಮುಂತಾದ ಪ್ರಮುಖ ನಗರಗಳಲ್ಲಿ ಕನಿಷ್ಠ 10 ಸಾವಿರ ಮನೆಗಳ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿವೆ. ಹವಾಮಾನ ಪರಿಸ್ಥಿತಿ ಬಿಗಡಾಯಿಸಿದ್ದು ಈ ವಾತಾವರಣದಲ್ಲಿ ಓಡಾಡಿದರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸರ್ಕಾರ ಎಚ್ಚರಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments