ಅಮೆರಿ್ ಮಧ್ಯಪ್ರವೇಶಿಸಿ ಕೂಡಲೇ ಭಾರತ ಆರಂಭಿಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಿಲ್ಲಿಸದೇ ಇದ್ದರೆ 3.5 ಕೋಟಿ ಜನರು ಸಾವಿಗೀಡಾಗುತ್ತಾರೆ ಎಂದು ಪಾಕಿಸ್ತಾನದ ಪ್ರಧಾನಿ ಹೇಳಿದ್ದರು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧ ಸಾಧ್ಯತೆ ಸೇರಿದಂತೆ 8 ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂಬ ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಪುನರುಚ್ಚರಿಸಿದ ಡೊನಾಲ್ಡ್ ಟ್ರಂಪ್, ಆಪರೇಷನ್ ಸಿಂಧೂರ್ ನಿಲ್ಲಿಸದೇ ಇದ್ದರೆ 3.5 ಕೋಟಿ ಜನರು ಸಾಯಬೇಕಾಗುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್ ಆತಂಕ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ.
ಅಮೆರಿಕನ್ನರು ಆದ ನಾವು ದೇಶ- ವಿದೇಶಗಳಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಪುನರ್ ಸ್ಥಾಪಿಸುತ್ತಿದ್ದೇವೆ. ಅಧಿಕಾರ ವಹಿಸಿಕೊಂಡ ನನ್ನ ಮೊದಲ ಹತ್ತು ತಿಂಗಳಲ್ಲಿ 8 ಯುದ್ಧಗಳನ್ನು ಕೊನೆಗೊಳಿಸಿದೆ. ಪರಮಾಣು ಶಸ್ತ್ರಾಸ್ತ್ರ ಹೊಂದಿದ ಪಾಕಿಸ್ತಾನ ಮತ್ತು ಭಾರತ ಯುದ್ಧವನ್ನು ಕೊನೆಗಾಣಿಸಿದ್ದು ನಾವೇ ಎಂದು ಯುಎಸ್ ಕಾಂಗ್ರೆಸ್‌ಗೆ ಮಾಡಿದ ಸ್ಟೇಟ್ ಆಫ್ ದಿ ಯೂನಿಯನ್ ಭಾಷಣದಲ್ಲಿ ಟ್ರಂಪ್ ಹೇಳಿಕೊಂಡಿದ್ದಾರೆ.
“ನಾನು ಮಧ್ಯಪ್ರವೇಶಿಸದೇ ಇದ್ದಿದ್ದರೆ 35 ದಶಲಕ್ಷ ಜನರು ಸಾಯುತ್ತಿದ್ದರು ಎಂದು ಪಾಕಿಸ್ತಾನದ ಪ್ರಧಾನಿ ಹೇಳಿದ್ದರು. ಇದೀಗ ನಾವು 9ನೇ ಯುದ್ಧವನ್ನು ನಿಲ್ಲಿಸಲು ಶ್ರಮಿಸುತ್ತಿದ್ದೇವೆ ಎಂದು ಅವರು ಹೇಳಿದರು.
ನಾನು ಸತತ ಎರಡನೇ ಬಾರಿಗೆ ಅಧ್ಯಕ್ಷನಾಗದೇ ಇದ್ದಿದ್ದರೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಸಂಭವಿಸಲು ಬಿಡುತ್ತಿರಲಿಲ್ಲ.
ಟ್ರಂಪ್ ಎರಡನೇ ಮಹಾಯುದ್ಧದ ಅನುಭವಿಯನ್ನೂ ಗೌರವಿಸಿದರು. ನಂತರ ಅವರು, “ನಾನು ಯಾವಾಗಲೂ ಕಾಂಗ್ರೆಷನಲ್ ಮೆಡಲ್ ಆಫ್ ಆನರ್ ಅನ್ನು ಬಯಸುತ್ತಿದ್ದೆ, ಆದರೆ ಅದನ್ನು ನನಗೆ ನೀಡಲು ನನಗೆ ಅನುಮತಿ ಇಲ್ಲ ಎಂದು ನನಗೆ ತಿಳಿಸಲಾಯಿತು” ಎಂದು ಹೇಳಿದರು.



