ಎನ್ ಸಿಇಆರ್ ಟಿ ಪ್ರಕಟಿಸಿದ ಪಠ್ಯದಲ್ಲಿ ವಿವಾದಾತ್ಮಕ ವಿಷಯದ ಪಿಡಿಎಫ್ ಕಾಪಿಯನ್ನು ಕೂಡಲೇ ತೆಗೆದುಹಾಕಿರುವಂತೆ ಸೂಚಿಸಿರುವ ಸುಪ್ರೀಂಕೋರ್ಟ್, ವಿವಾದಕ್ಕೆ ಕಾರಣವಾದ ಅಧಿಕಾರಿಗಳ ತಲೆದಂಡವಾಗಬೇಕು ಎಂದು ಖಡಕ್ ಸೂಚನೆ ನೀಡಿದೆ.
ಎನ್ ಸಿಇಆರ್ ಟಿ ಪಠ್ಯದಲ್ಲಿ ನ್ಯಾಯಾಂಗದಲ್ಲಿ ಭ್ರಷ್ಟಾಚಾರ ವಿಷಯ ಸೇರ್ಪಡೆಯಾಗಿರುವ ಪತ್ರಿಕೆಯೊಂದರಲ್ಲಿ ಬಂದ ವರದಿಯನ್ನು ಗಮನಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಕೂಡಲೇ ಸ್ವಯಂ ಆಗಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದೂ ಅಲ್ಲದೇ ಪಠ್ಯದಲ್ಲಿ ವಿವಾದಾತ್ಮಕ ಅಂಶಗಳನ್ನು ಸೇರಿಸಿರುವ ಬಗ್ಗೆ ಆಘಾತ ವ್ಯಕ್ತಪಡಿಸಿತು. ಅಲ್ಲದೇ ಇಂತಹ ದುರ್ವತನೆ ಮೂಲಕ ನ್ಯಾಯಾಂಗಕ್ಕೆ ಕಳಂಕ ತರಲು ಪ್ರಯತ್ನಿಸಿದ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಸುಪ್ರೀಂಕೋರ್ಟ್ ಸೂಚನೆ ಬೆನ್ನಲ್ಲೇ ಕೇಂದ್ರ ಸರ್ಕಾರ ಗುರುವಾರ ಆಕ್ಷೇಪಾರ್ಹ ವಿಷಯ ಎನ್ ಸಿಆರ್ ಟಿ ಪಠ್ಯದಲ್ಲಿ ಸೇರ್ಪಡೆ ಕುರಿತು ಕ್ಷಮೆಯಾಚಿಸಿದ್ದ್, ಮುದ್ರಿತ ಪಠ್ಯ ಕೇವಲ 32 ಪ್ರತಿಗಳು ಮಾತ್ರ ಮಾರಾಟವಾಗಿವೆ. ಆದ್ದರಿಂದ ವಾಪಸ್ ಪಡೆಯಲಾಗುವುದು ಎಂದು ವರದಿ ನೀಡಿದೆ. ಆದರೆ ವೆಬ್ ಸೈಟ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿರುವ ಪಿಡಿಎಫ್ ಕಾಪಿಯನ್ನು ಕೂಡಲೇ ತೆರವುಗೊಳಿಸುವಂತೆ ಸುಪ್ರೀಂ ಸೂಚಿಸಿದೆ.



