Wednesday, June 24, 2026
Google search engine
Homeವಾಣಿಜ್ಯಬೆಂಗಳೂರಿನಲ್ಲಿ ಔರ್ಯ ಡೈಮಂಡ್ಸ್ ಸಂಸ್ಥೆಯ ಐಷಾರಾಮಿ ಗ್ಯಾಲರಿ ಲೋಕಾರ್ಪಣೆ

ಬೆಂಗಳೂರಿನಲ್ಲಿ ಔರ್ಯ ಡೈಮಂಡ್ಸ್ ಸಂಸ್ಥೆಯ ಐಷಾರಾಮಿ ಗ್ಯಾಲರಿ ಲೋಕಾರ್ಪಣೆ

ಬೆಂಗಳೂರು: ಪ್ರಮಾಣೀಕೃತ ಲ್ಯಾಬ್ ಗ್ರೋನ್ ವಜ್ರಾಭರಣಗಳ ಬ್ರಾಂಡ್ ಆಗಿರುವ ‘ಔರ್ಯ ಡೈಮಂಡ್ಸ್’ ಸಂಸ್ಥೆಯು ಆಧುನಿಕ ಐಷಾರಾಮಿ ಆಭರಣಗಳ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದೆ.

ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಜಯನಗರದಲ್ಲಿ ತನ್ನ ಅತ್ಯಾಧುನಿಕ ‘ಲ್ಯಾಬ್-ಗ್ರೋನ್’ ವಜ್ರಗಳ ವಿಶಿಷ್ಟ ಗ್ಯಾಲರಿಯನ್ನು ಉದ್ಘಾಟಿಸಿದೆ.

ಈ ಮೂಲಕ ದಶಕಗಳ ಅನುಭವ ಹೊಂದಿರುವ ಜೆಮ್ಮಾಲಜಿಸ್ಟ್ ಹಾಗೂ ಪ್ರಶಸ್ತಿ ವಿಜೇತ ಉದ್ಯಮಿ ಶಿಖಾ ದಾದಾ ಮತ್ತು ಉದ್ಯಮದ ಹಿರಿಯರಾದ ಸಾದ್ ಸಲ್ಮಾನ್ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಪದಾರ್ಪಣೆ ಮಾಡಿದೆ.

ಸಾಮಾನ್ಯವಾಗಿ ಚಿನ್ನದ ಅಂಗಡಿಗಳಲ್ಲಿ ಇರುವ “ಗಾಜಿನ ಆಚೆಗಿನ” ಪ್ರದರ್ಶನ ಪದ್ಧತಿಯನ್ನು ಬದಿಗೊತ್ತಿರುವ ಔರ್ಯ ಡೈಮಂಡ್ಸ್, ಗ್ರಾಹಕರಿಗೆ ಆಭರಣಗಳನ್ನು ಮುಟ್ಟಿ ನೋಡುವ ಮತ್ತು ನೇರವಾಗಿ ಧರಿಸಿ ಅನುಭವಿಸುವ ಮುಕ್ತ ಅವಕಾಶವನ್ನು ಕಲ್ಪಿಸಿದೆ. ಆಧುನಿಕ ಭಾರತದ ಗ್ರಾಹಕರ ಅಭಿರುಚಿಗೆ ತಕ್ಕಂತೆ ಈ ಗ್ಯಾಲರಿಯನ್ನು ವಿನ್ಯಾಸಗೊಳಿಸಲಾಗಿದೆ. ಸೌಂದರ್ಯ ಮತ್ತು ಪಾರದರ್ಶಕತೆಯನ್ನು ಸಮಾನವಾಗಿ ಬಯಸುವ ಈ ಕಾಲದ ಗ್ರಾಹಕರಿಗೆ ಈ ‘ನ್ಯೂ ಇಂಡಿಯಾ’ ಪರಿಕಲ್ಪನೆಯ ಆಭರಣಗಳು ಇಲ್ಲಿ ಲಭ್ಯವಾಗಲಿವೆ.

ಬ್ರ್ಯಾಂಡ್‌ ನ ಆಗಮನವನ್ನು ಎರಡು ದಿನಗಳ ಕಾಲ ನಡೆದ ಅತ್ಯಂತ ಹೈ-ಪ್ರೊಫೈಲ್ ಕಾರ್ಯಕ್ರಮದ ಮೂಲಕ ಸಾರಲಾಯಿತು.

ಉದ್ಘಾಟನಾ ಸಂದರ್ಭದಲ್ಲಿ ಗೌರವಾನ್ವಿತ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್, ಮತ್ತು ವಸತಿ ಹಾಗೂ ವಕ್ಫ್ ಸಚಿವರಾದ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments