ಕದನ ವಿರಾಮ ಘೋಷಣೆ ನಂತರ ಇದೇ ಮೊದಲ ಬಾರಿ ಇಸ್ರೇಲ್ ಮೇಲೆ ಇರಾನ್ ಭೀಕರ ವಾಯುದಾಳಿ ನಡೆಸಿದರೆ, ಪ್ರತಿಯಾಗಿ ಇರಾನ್ ನ ಪೆಟ್ರೋ ಕೆಮಿಕಲ್ ಘಟಕವನ್ನು ಕೇಂದ್ರೀಕರಿಸಿ ಪ್ರತಿದಾಳಿ ನಡೆಸಿದೆ. ಈ ಮೂಲಕ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಆತಂಕ ಶುರುವಾಗಿದೆ.
ಇಸ್ರೇಲ್ ನಡೆಸಿದ ದಾಳಿಯಲ್ಲಿ ಟೆಹರಾನ್ ನ ಎರಡು ಕಡೆ ಪ್ರಬಲ ಸ್ಫೋಟಗಳು ಕೇಳಿ ಬಂದಿವೆ. ಆದರೆ ಹಾನಿ ಪ್ರಮಾಣದ ಬಗ್ಗೆ ಯಾವುದೇ ವರದಿಯಾಗಿಲ್ಲ. ನಾವು ಇರಾನ್ ನ ಮಹಶರ್ ಬಳಿ ಇರುವ ಪೆಟ್ರೋ ಕೆಮಿಕಲ್ ಘಟಕವನ್ನು ಕೇಂದ್ರೀಕರಿಸಿ ದಾಳಿ ನಡೆಸಿದ್ದು, ಹಾನಿ ಉಂಟುಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ.
ಇರಾನ್ ತನ್ನ ವಾಯುನೆಲೆಯನ್ನು ಸಂಪೂರ್ಣವಾಗಿ ಮುಚ್ಚಿದೆ. ಎರಡು ದಿನಗಳಿಂದ ಅರಬ್ ದೇಶಗಳಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸುತ್ತಿದ್ದ ಇರಾನ್ ಇದೇ ಮೊದಲ ಬಾರಿ ಇಸ್ರೇಲ್ 2 ವಾಯುನೆಲೆಗಳ ಮೇಲೆ ಭಾರೀ ಪ್ರಮಾಣದ ವಾಯುದಾಳಿ ನಡೆಸಿದೆ.
ಏಪ್ರಿಲ್ ನಲ್ಲಿ ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾಗಿದ್ದು, 40 ದಿನಗಳ ಯುದ್ಧದ ನಂತರ ಕದನ ವಿರಾಮ ಘೋಷಣೆ ಆಗಿತ್ತು. ಕದನ ವಿರಾಮ ಘೋಷಣೆ ಆದ ನಂತರ ಇದೇ ಮೊದಲ ಬಾರಿಗೆ ಇರಾನ್ ಯಾವುದೇ ಮುನ್ನೆಚ್ಚರಿಕೆ ನೀಡದೇ ದಿಢೀರ್ ದಾಳಿ ನಡೆಸಿದೆ.



