Thursday, 12 November 2026 — Kannadavahini
BREAKING NEWS
ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜಕೀಯ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳಿಗೆ ಕುತ್ತು: ಸಿಎಂ ಡಿ ಕೆ ಶಿವಕುಮಾರ್ ಅಪರಾಧ ದರೋಡೆ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಗನ್‌ ಮ್ಯಾನ್: 2.39 ಕೋಟಿ ರೂ. ವಶ ರಾಜ್ಯ ಎಥೆನಾಲ್ ಮಿಶ್ರಣ ಕುರಿತು 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ: ಸಿಎಂ ಡಿಕೆ ಶಿವಕುಮಾರ್ ರಾಜ್ಯ ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ವಾಪಸ್: ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಹಸಿರು ನಿಶಾನೆ ರಾಜ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರಿಂದ ಜೈಲ್ ಭರೋ ಹೋರಾಟ ತೀವ್ರ ಕಾನೂನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಗಡುವು ಆರಂಭ: ಸುಪ್ರೀಂ ಮಹತ್ವದ ತೀರ್ಪು ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜಕೀಯ ಬಿಜೆಪಿ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳಿಗೆ ಕುತ್ತು: ಸಿಎಂ ಡಿ ಕೆ ಶಿವಕುಮಾರ್ ಅಪರಾಧ ದರೋಡೆ ಪ್ರಕರಣದಲ್ಲಿ ಶಾಸಕ ರಮೇಶ ಜಾರಕಿಹೊಳಿ ಗನ್‌ ಮ್ಯಾನ್: 2.39 ಕೋಟಿ ರೂ. ವಶ ರಾಜ್ಯ ಎಥೆನಾಲ್ ಮಿಶ್ರಣ ಕುರಿತು 67 ಕಡೆ ಪೆಟ್ರೋಲ್ ಮಾದರಿ ಸಂಗ್ರಹಿಸಿ ಪರಿಶೀಲನೆ: ಸಿಎಂ ಡಿಕೆ ಶಿವಕುಮಾರ್ ರಾಜ್ಯ ಕಬ್ಬು ಬೆಳೆಗಾರರ ಹೋರಾಟ ತಾತ್ಕಾಲಿಕ ವಾಪಸ್: ಸಕ್ಕರೆ ಕಾರ್ಖಾನೆಗಳ ಆರಂಭಕ್ಕೆ ಹಸಿರು ನಿಶಾನೆ ರಾಜ್ಯ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರಿಂದ ಜೈಲ್ ಭರೋ ಹೋರಾಟ ತೀವ್ರ ಕಾನೂನು ವಶಕ್ಕೆ ಪಡೆದ ಕ್ಷಣದಿಂದಲೇ 24 ಗಂಟೆಗಳ ಗಡುವು ಆರಂಭ: ಸುಪ್ರೀಂ ಮಹತ್ವದ ತೀರ್ಪು
ವಿದೇಶ

ಪಿಲಿಪ್ಪೆನ್ಸ್‌ನಲ್ಲಿ 7.8 ತೀವ್ರತೆಯ ಭೂಕಂಪನ: ಅಲುಗಾಡಿದ ಮಕ್ಕಳ ವೀಡಿಯೋ ವೈರಲ್

Vahini
ವರದಿ: Vahini ಮುಖ್ಯ ಸಂಪಾದಕರು (Chief Editor)
2 ನಿಮಿಷ ಓದು 13 ವೀಕ್ಷಣೆಗಳು
earthquack

ದಕ್ಷಿಣ ಪಿಲಿಪ್ಪೆನ್ಸ್‌ ನಲ್ಲಿ ಸೋಮವಾರ ಬೆಳಿಗ್ಗೆ 7.8 ತೀವ್ರತೆಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಹಲವಾರು ಕಟ್ಟಡಗಳು ಧರೆಗುರುಳಿದ್ದು, ಸುನಾಮಿ ಅಲೆಗಳು ಕಾಣಿಸಿಕೊಂಡಿದ್ದರಿಂದ ಜನರು ಭಯಭೀತರಾಗಿದ್ದಾರೆ.‌

ಸೋಮವಾರ ಬೆಳಿಗ್ಗೆ 7.37ರ ಸುಮಾರಿಗೆ ಸಮುದ್ರದಲ್ಲಿ ಕೇಂದ್ರೀಕೃತವಾದ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ಕರಾವಳಿ ನಗರದಲ್ಲಿ ಭಾರಿ ಹಾನಿಯನ್ನುಂಟಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕರಾವಳಿಯಲ್ಲಿ 1 ಮೀಟರ್ (3 ಅಡಿ) ಸುನಾಮಿ ಅಲೆಗಳು ಎದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪನದ ತೀವ್ರತೆಗೆ ಹಲವೆಡೆ ಬೃಹತ್​ ಕಟ್ಟಡಗಳು ನಡುಗಿದ್ದು, ಸಾಕಷ್ಟು ಹಾನಿಗೊಳಗಾಗಿವೆ. ಕಟ್ಟಡಗಳ ಅವಶೇಷಗಳು ರಸ್ತೆಗಳ ತುಂಬೆಲ್ಲಾ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ. ಅಲ್ಲದೆ, ಕಂಪನದಿಂದ ಭಯಬಿದ್ದ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ.

ಭೂಕಂಪದಿಂದ ಇದುವರೆಗೆ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ದಕ್ಷಿಣ ಫಿಲಿಪೈನ್ಸ್‌ನ ವಾಣಿಜ್ಯ ಕೇಂದ್ರವಾಗಿರುವ 700,000ಕ್ಕೂ ಹೆಚ್ಚು ಜನರಿರುವ ನಗರವಾದ ಜನರಲ್ ಸ್ಯಾಂಟೋಸ್‌ನಲ್ಲಿ ಕಟ್ಟಡವೊಂದು ಕುಸಿದು ಬಿದ್ದಿದೆ. ಘಟನೆಯಿಂದ ಜನರು ಅವಶೇಷಗಳಡಿ ಸಿಲುಕಿರುವ ಹಾಗೂ ಗಾಯಗೊಂಡಿರುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

ಸುನಾಮಿ ಭೀತಿಯಲ್ಲಿರುವ ಪ್ರದೇಶಗಳಲ್ಲಿನ ಜನರು ತಕ್ಷಣ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಕರೆ ನೀಡಿದ್ದಾರೆ. ಜೊತೆಗೆ, ಇಂಡೋನೇಷ್ಯಾ ಮತ್ತು ಮಲೇಷಿಯಾದಲ್ಲೂ ಸಹ ಕರಾವಳಿಯಲ್ಲಿನ ನಿವಾಸಿಗಳು ಮುಂಜಾಗ್ರತೆ ವಹಿಸುವಂತೆ ಅಲ್ಲಿನ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ವರ್ಷ ಫಿಲಿಪೈನ್ಸ್​ಗೆ ಅಪ್ಪಳಿಸಿದ ಪ್ರಬಲ ಭೂಕಂಪ ಇದಾಗಿದ್ದು, ಜನರಲ್ ಸ್ಯಾಂಟೋಸ್‌ನ ನೈಋತ್ಯಕ್ಕೆ 13 ಕಿಲೋಮೀಟರ್ (8 ಮೈಲಿ) ದೂರದಲ್ಲಿರುವ ಸಮುದ್ರದಲ್ಲಿ ಕೇಂದ್ರಿತವಾಗಿದೆ. 10 ಕಿಲೋಮೀಟರ್ (6.2 ಮೈಲಿ) ಆಳದಲ್ಲಿರುವ ಕೊಟಾಬಾಟೊ ಕಂದಕದಲ್ಲಿನ ಚಲನೆಯಿಂದ ಉಂಟಾಗಿದೆ ಎಂದು ಫಿಲಿಪೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆ ತಿಳಿಸಿದೆ. ಬೆಳಗ್ಗೆ 7:37ಕ್ಕೆ ಭೂಕಂಪ ಸಂಭವಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಟೆರೆಸಿಟೊ ಬಾಕೊಲ್ಕೋಲ್ ಹೇಳಿದ್ದಾರೆ.

ಮನಿಲಾದಲ್ಲಿರುವ DZRH ರೇಡಿಯೋ ಕೇಂದ್ರವು ತನ್ನ ಪ್ರಾಂತೀಯ ಶಾಖೆ ಇದ್ದ ಸಣ್ಣ ವಾಣಿಜ್ಯ ಕಟ್ಟಡ ಭಾಗಶಃ ಕುಸಿದುಬಿದ್ದಿದೆ. ಘಟನೆಯಲ್ಲಿ ಎಲ್ಲ ಸಿಬ್ಬಂದಿ ನೆಲ ಮಹಡಿಗೆ ಧಾವಿಸಿದ್ದು, ಯಾರಿಗೂ ತೊಂದರೆಯಾಗಿಲ್ಲ ಎಂದು ವರದಿಯಾಗಿದೆ. ಕಚೇರಿ ಸಮಯಕ್ಕೆ ಮುಂಚಿತವಾಗಿ ಸಂಭವಿಸಿದ ಭೂಕಂಪದಿಂದಾಗಿ ನಾಲ್ಕು ಅಂತಸ್ತಿನ ಕಚೇರಿ ಕಟ್ಟಡದ ಅವಶೇಷಗಳಲ್ಲಿ ಇತರರು ಸಿಲುಕಿಕೊಂಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಇತರ ಕಟ್ಟಡಗಳಿಂದ ಅವಶೇಷಗಳು ಬಿದ್ದವು, ಕೆಳಗೆ ನಿಲ್ಲಿಸಿದ್ದ ಟ್ರೈಸಿಕಲ್ ಟ್ಯಾಕ್ಸಿಗಳಿಗೆ ಹಾನಿಯಾಗಿದೆ..

👑

JOIN OUR COMMUNITY

✈️
Get Latest Updates, News, Offers & More
ಮುಖ್ಯ ಸಂಪಾದಕರು (Chief Editor) ✍️ 8409 ಲೇಖನಗಳು

Vahini

Vahini ಅವರು ಸಮಕಾಲೀನ ವಿದ್ಯಮಾನಗಳು, ರಾಜ್ಯ ಸುದ್ದಿ ಹಾಗೂ ವಿಶೇಷ ವರದಿಗಳನ್ನು ಬರೆಯುವ ಜವಾಬ್ದಾರಿಯುತ ಲೇಖಕರಾಗಿದ್ದಾರೆ.

Leave a comment