Monday, June 8, 2026
Google search engine
Homeವಿದೇಶಪಿಲಿಪ್ಪೆನ್ಸ್ ನಲ್ಲಿ ಪ್ರಬಲ ಭೂಕಂಪನ; 32 ಸಾವು, 200 ಮಂದಿಗೆ ಗಾಯ

ಪಿಲಿಪ್ಪೆನ್ಸ್ ನಲ್ಲಿ ಪ್ರಬಲ ಭೂಕಂಪನ; 32 ಸಾವು, 200 ಮಂದಿಗೆ ಗಾಯ

ಮನಿಲಾ: ದಕ್ಷಿಣ ಪಿಲಿಪ್ಪೆನ್ಸ್‌ ನಲ್ಲಿ ಸೋಮವಾರ ಬೆಳಿಗ್ಗೆ 7.8 ತೀವ್ರತೆಯಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಿಂದ 32 ಮಂದಿ ಮೃತಪಟ್ಟಿದ್ದು, 200 ಮಂದಿ ಗಾಯಗೊಂಡಿದ್ದಾರೆ.

ಸೋಮವಾರ ಬೆಳಿಗ್ಗೆ 7.37ರ ಸುಮಾರಿಗೆ ಸಮುದ್ರದಲ್ಲಿ ಕೇಂದ್ರೀಕೃತವಾದ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ಕರಾವಳಿ ನಗರದಲ್ಲಿ ಭಾರಿ ಹಾನಿಯನ್ನುಂಟಾಗಿದ್ದು, ಸಂಭವಿಸಿದ್ದು, ಹಲವಾರು ಕಟ್ಟಡಗಳು ಧರೆಗುರುಳಿದ್ದು, ಸುನಾಮಿ ಅಲೆಗಳು ಕಾಣಿಸಿಕೊಂಡಿದ್ದರಿಂದ ಜನರು ಭಯಭೀತರಾಗಿದ್ದಾರೆ.‌

ಕರಾವಳಿಯಲ್ಲಿ 1 ಮೀಟರ್ (3 ಅಡಿ) ಸುನಾಮಿ ಅಲೆಗಳು ಎದ್ದಿದ್ದು, ಸುಮಾರು 13 ಗ್ರಾಮಗಳಿಗೆ ಭಾರೀ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪನದ ತೀವ್ರತೆಗೆ ಹಲವೆಡೆ ಬೃಹತ್​ ಕಟ್ಟಡಗಳು ನಡುಗಿದ್ದು, ಸಾಕಷ್ಟು ಹಾನಿಗೊಳಗಾಗಿವೆ. ಕಟ್ಟಡಗಳ ಅವಶೇಷಗಳು ರಸ್ತೆಗಳ ತುಂಬೆಲ್ಲಾ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ. ಅಲ್ಲದೆ, ಕಂಪನದಿಂದ ಭಯಬಿದ್ದ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ.

ಭೂಕಂಪದಿಂದ ಇದುವರೆಗೆ ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ದಕ್ಷಿಣ ಫಿಲಿಪೈನ್ಸ್‌ನ ವಾಣಿಜ್ಯ ಕೇಂದ್ರವಾಗಿರುವ 700,000ಕ್ಕೂ ಹೆಚ್ಚು ಜನರಿರುವ ನಗರವಾದ ಜನರಲ್ ಸ್ಯಾಂಟೋಸ್‌ನಲ್ಲಿ ಕಟ್ಟಡವೊಂದು ಕುಸಿದು ಬಿದ್ದಿದೆ. ಘಟನೆಯಿಂದ ಜನರು ಅವಶೇಷಗಳಡಿ ಸಿಲುಕಿರುವ ಹಾಗೂ ಗಾಯಗೊಂಡಿರುವ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.

ಸುನಾಮಿ ಭೀತಿಯಲ್ಲಿರುವ ಪ್ರದೇಶಗಳಲ್ಲಿನ ಜನರು ತಕ್ಷಣ ಎತ್ತರದ ಪ್ರದೇಶಗಳಿಗೆ ತೆರಳುವಂತೆ ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಕರೆ ನೀಡಿದ್ದಾರೆ. ಜೊತೆಗೆ, ಇಂಡೋನೇಷ್ಯಾ ಮತ್ತು ಮಲೇಷಿಯಾದಲ್ಲೂ ಸಹ ಕರಾವಳಿಯಲ್ಲಿನ ನಿವಾಸಿಗಳು ಮುಂಜಾಗ್ರತೆ ವಹಿಸುವಂತೆ ಅಲ್ಲಿನ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ವರ್ಷ ಫಿಲಿಪೈನ್ಸ್​ಗೆ ಅಪ್ಪಳಿಸಿದ ಪ್ರಬಲ ಭೂಕಂಪ ಇದಾಗಿದ್ದು, ಜನರಲ್ ಸ್ಯಾಂಟೋಸ್‌ನ ನೈಋತ್ಯಕ್ಕೆ 13 ಕಿಲೋಮೀಟರ್ (8 ಮೈಲಿ) ದೂರದಲ್ಲಿರುವ ಸಮುದ್ರದಲ್ಲಿ ಕೇಂದ್ರಿತವಾಗಿದೆ. 10 ಕಿಲೋಮೀಟರ್ (6.2 ಮೈಲಿ) ಆಳದಲ್ಲಿರುವ ಕೊಟಾಬಾಟೊ ಕಂದಕದಲ್ಲಿನ ಚಲನೆಯಿಂದ ಉಂಟಾಗಿದೆ ಎಂದು ಫಿಲಿಪೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆ ತಿಳಿಸಿದೆ. ಬೆಳಗ್ಗೆ 7:37ಕ್ಕೆ ಭೂಕಂಪ ಸಂಭವಿಸಿದೆ ಎಂದು ಸಂಸ್ಥೆಯ ನಿರ್ದೇಶಕ ಟೆರೆಸಿಟೊ ಬಾಕೊಲ್ಕೋಲ್ ಹೇಳಿದ್ದಾರೆ.

ಮನಿಲಾದಲ್ಲಿರುವ DZRH ರೇಡಿಯೋ ಕೇಂದ್ರವು ತನ್ನ ಪ್ರಾಂತೀಯ ಶಾಖೆ ಇದ್ದ ಸಣ್ಣ ವಾಣಿಜ್ಯ ಕಟ್ಟಡ ಭಾಗಶಃ ಕುಸಿದುಬಿದ್ದಿದೆ. ಘಟನೆಯಲ್ಲಿ ಎಲ್ಲ ಸಿಬ್ಬಂದಿ ನೆಲ ಮಹಡಿಗೆ ಧಾವಿಸಿದ್ದು, ಯಾರಿಗೂ ತೊಂದರೆಯಾಗಿಲ್ಲ ಎಂದು ವರದಿಯಾಗಿದೆ. ಕಚೇರಿ ಸಮಯಕ್ಕೆ ಮುಂಚಿತವಾಗಿ ಸಂಭವಿಸಿದ ಭೂಕಂಪದಿಂದಾಗಿ ನಾಲ್ಕು ಅಂತಸ್ತಿನ ಕಚೇರಿ ಕಟ್ಟಡದ ಅವಶೇಷಗಳಲ್ಲಿ ಇತರರು ಸಿಲುಕಿಕೊಂಡಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಇತರ ಕಟ್ಟಡಗಳಿಂದ ಅವಶೇಷಗಳು ಬಿದ್ದವು, ಕೆಳಗೆ ನಿಲ್ಲಿಸಿದ್ದ ಟ್ರೈಸಿಕಲ್ ಟ್ಯಾಕ್ಸಿಗಳಿಗೆ ಹಾನಿಯಾಗಿದೆ..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments