Wednesday, June 24, 2026
Google search engine
Homeದೇಶಏರ್ ಇಂಡಿಯಾ ವಿಮಾನ ದುರಂತದಿಂದ ಕನಿಷ್ಠ 2400 ಕೋಟಿ ನಷ್ಟ: ದೇಶದ ದುಬಾರಿ ವಿಮಾನ ದುರಂತ!

ಏರ್ ಇಂಡಿಯಾ ವಿಮಾನ ದುರಂತದಿಂದ ಕನಿಷ್ಠ 2400 ಕೋಟಿ ನಷ್ಟ: ದೇಶದ ದುಬಾರಿ ವಿಮಾನ ದುರಂತ!

ಏರ್ ಇಂಡಿಯಾ ವಿಮಾನ ದುರಂತ ದೇಶದ ಅತ್ಯಂತ ಭೀಕರ ದುರಂತ ಮಾತ್ರವಲ್ಲ, ಅತ್ಯಂತ ದುಬಾರಿ ದುರಂತವೂ ಆಗಿದೆ.

ಹೌದು, ಗುಜರಾತ್ ನ ಅಹಮದಾಬಾದ್ ನಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಬೋಯಿಂಗ್ 787-8 ವಿಮಾನ ದುರಂತದಲ್ಲಿ 241 ಮಂದಿ ಪ್ರಯಾಣಿರು ಮೃತಪಟ್ಟಿದ್ದರು. ಅಲ್ಲದೇ ಮೆಡಿಕಲ್ ಕಾಲೇಜಿನ ಮೆಸ್ ಮೇಲೆ ಬಿದ್ದಿದ್ದರಿಂದ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸುನೀಗಿದ್ದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ವಿಮಾನ ದುರಂತದಲ್ಲಿ 211 ದಶಲಕ್ಷ ಡಾಲರ್ ನಿಂದ 280 ದಶಲಕ್ಷ ಡಾಲರ್ ಅಂದರೆ ಸುಮಾರು 2400 ಕೋಟಿ ರೂ. ನಷ್ಟವುಂಟಾಗಿದೆ ಎಂದು ಅಂದಾಜಿಸಲಾಗಿದೆ. ಇದು ಭಾರತೀಯ ವಿಮಾನ ದುರಂತದಲ್ಲಿ ಅತ್ಯಂತ ದುಬಾರಿ ದುರಂತ ಎಂದು ಹೇಳಲಾಗಿದೆ.

ಅಹಮಹಾಬಾದ್ ನ ಗಾಟ್ವಿಕ್ ವಿಮಾನ ನಿಲ್ದಾಣದಿಂದ ಲಂಡನ್ ಕಡೆಗೆ ಪ್ರಯಾಣ ಬೆಳೆಸಿದ್ದ ಬೋಯಿಂಗ್ ವಿಮಾನ ಟೇಕಾಫ್ ಆದ ಕೇವಲ 32 ಸೆಕೆಂಡ್ ಗಳಲ್ಲಿ ಸ್ಫೋಟಗೊಂಡು ಪತನತೊಂಡಿತ್ತು. ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷರು ಮತ್ತು 9 ಮಂದಿ ಪೋರ್ಚುಗಲ್ ಒಬ್ಬ ಕೆನಡಾ ಪ್ರಜೆ ಪ್ರಯಾಣಿಸುತ್ತಿದ್ದರು. ದುರಂತದಲ್ಲಿ ವಿಶ್ವಾಸ್ ಕುಮಾರ್ ರಮೇಶ್ ಏಕಮಾತ್ರ ವ್ಯಕ್ತಿ ಬದುಕುಳಿದಿದ್ದಾರೆ.

ಜನರಲ್ ಇನ್ಶೂರೆನ್ಸ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಮಸ್ವಾಮಿ ನಾರಾಯಣ್ ದುರಂತದ ಬಗ್ಗೆ ಪ್ರತಿಕ್ರಿಯಿಸಿ, ಟಾಟಾ ಏರ್ ಲೈನ್ಸ್ ದುರಂತಗಳು ಸಂಭವಿಸಬಹುದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ವಿಮೆ ಮಾಡಿಸಿದೆ. ವಿಮಾ ಕಂಪನಿ ಪ್ರಯಾಣಿಕರ ಜೀವಹಾನಿ, ವಿಮಾನ ಬಿಡಿಭಾಗಗಳು ಸೇರಿದಂತೆ ಪ್ರತಿಯೊಂದಕ್ಕೂ ವಿಮೆ ಪರಿಹಾರ ನೀಡಬೇಕಿದೆ ಎಂದರು.

ವಿಮಾನ ದುರಂತದ ಮೌಲ್ಯಮಾಪನ ನಡೆಯುತ್ತಿದ್ದು, ಸದ್ಯದ ಅಂದಾಜು ಪ್ರಕಾರ 211 ದಶಲಕ್ಷ ಡಾಲರ್ ನಿಂದ 280 ದಶಲಕ್ಷ ಡಾಲರ್ ಅಂದರೆ ಸುಮಾರು 2400 ಕೋಟಿ ರೂ. ನಷ್ಟವುಂಟಾಗಿದೆ ಎಂದು ಅವರು ಹೇಳಿದರು.

ಬೋಯಿಂಗ್ ವಿಮಾನ ಸಂಸ್ಥೆ ಡ್ರೀಮ್ ಲೈನರ್ 2011ರಲ್ಲಿ 115 ದಶಲಕ್ಷ ಡಾಲರ್ ಮೊತ್ತದ ವಿಮೆ ಮಾಡಿಸಿತ್ತು. ದುರಂತದಲ್ಲಿ ಪೂರ್ಣ ಅಥವಾ ಭಾಗಶಃ ಹಾನಿಯಾದರೂ ಮೌಲ್ಯಮಾಪನ ಮಾಡಿ ನಷ್ಟದ ಪರಿಹಾರವನ್ನು ವಿಮಾ ಕಂಪನಿ ನೀಡಬೇಕಿದೆ.

ವಿಮಾನದ ಪ್ರಯಾಣಿಕರಿಗೆ ಪರಿಹಾರ ಮೊತ್ತ ನೀಡಬೇಕು ಎಂಬದು ಭಾರತ 1999ರಲ್ಲಿ ಒಪ್ಪಂದಕ್ಕೆ ಸಹಿ ಹಾಕಿದೆ. ಅಲ್ಲದೇ ಮಾರುಕಟ್ಟೆ ಆಧರಿಸಿ ಪರಿಹಾರ ಮೊತ್ತ ನೀಡಬೇಕಿದ್ದು, ಪ್ರಸ್ತುತ ಅಂಕಿ ಅಂಶದ ಪ್ರಕಾರ 1,71,000 ಡಾಲರ್ ಅಂದರೆ 1.47 ಕೋಟಿ ರೂ. ಪರಿಹಾರ ಮೊತ್ತ ಪ್ರಯಾಣಿಕರಿಗೆ ಲಭಿಸಲಿದೆ.

ವಿಮಾನ ದುರಂತದಲ್ಲಿ ಮೂರನೇ ಪಾರ್ಟಿ ಅನುಭವಿಸಿದ ನಷ್ಟಕ್ಕೆ ಕೂಡ ಪರಿಹಾರ ನೀಡಬೇಕಾಗಿದ್ದು, ಇದರ ಬಗ್ಗೆ ಮೌಲ್ಯಮಾಪನ ನಡೆಯುತ್ತಿದೆ.  ಟಾಟಾ ಗ್ರೂಪ್ ಈಗಾಗಲೇ ವಿಮಾನದಲ್ಲಿ ಮೃತಪಟ್ಟವರಿಗೆ ತಲಾ 1 ಕೋಟಿ ರೂ. ಪರಿಹಾರ ಮೊತ್ತ ಘೋಷಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments