Tuesday, May 26, 2026
Google search engine
Homeವಿದೇಶದುಪ್ಪಟ್ಟು ತೆರಿಗೆ ಆದೇಶಕ್ಕೆ 90 ದಿನ ಬ್ರೇಕ್: ಉಲ್ಟಾ ಹೊಡೆದ ಡೊನಾಲ್ಡ್ ಟ್ರಂಪ್!

ದುಪ್ಪಟ್ಟು ತೆರಿಗೆ ಆದೇಶಕ್ಕೆ 90 ದಿನ ಬ್ರೇಕ್: ಉಲ್ಟಾ ಹೊಡೆದ ಡೊನಾಲ್ಡ್ ಟ್ರಂಪ್!

ಚೀನಾ ಹೊರತುಪಡಿಸಿ ಉಳಿದ ಎಲ್ಲಾ ದೇಶಗಳ ವಿರುದ್ಧ ಹೊರಡಿಸಿದ್ದ ದುಪ್ಪಟ್ಟು ತೆರಿಗೆ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 90 ದಿನಗಳ ತಡೆ ನೀಡಿದ್ದಾರೆ. ಇದರಿಂದ ಸುಂಕ ಸಮರದಿಂದ ತತ್ತರಿಸಿದ್ದ ದೇಶಗಳು ನಿಟ್ಟುಸಿರುಬಿಡುವಂತಾಗಿದೆ.

ಬುಧವಾರ ದಿಢೀರನೆ ಚೀನಾ ಹೊರತುಪಡಿಸಿ ಉಳಿದೆಲ್ಲಾ ದೇಶಗಳ ಮೇಲೆ ಹೇರಿದ್ದ ತೆರಿಗೆಯನ್ನು 90 ದಿನಗಳ ಕಾಲ ಜಾರಿ ಮಾಡದೇ ಇರುವುದಾಗಿ ಘೋಷಿಸಿದ್ದಾರೆ. ಇದರಿಂದ ವಿವಿಧ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದ ವಸ್ತುಗಳ ಮೇಲೆ ಈ ಹಿಂದಿನಂತೆ ಸುಂಕ ವಿಧಿಸಲಾಗುತ್ತದೆ.

ಅಮೆರಿಕ ಶೇ.34ರಷ್ಟು ವಿಧಿಸಿದ್ದ ತೆರಿಗೆಯನ್ನು ಶೇ.104ಕ್ಕೆ ಏರಿಕೆ ಮಾಡಿತ್ತು. ಇದರಿಂದ ಚೀನಾ ಅಮೆರಿಕ ವಿರುದ್ಧ ಶೇ.84ರಷ್ಟು ತೆರಿಗೆ ವಿಧಿಸಿತ್ತು. ಮೂಲಗಳ ಪ್ರಕಾರ ಚೀನಾ ಶೇ.125ರಷ್ಟು ತೆರಿಗೆ ವಿಧಿಸಲು ಮುಂದಾಗಿತ್ತು ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments