Wednesday, May 13, 2026
Google search engine
Homeವಾಣಿಜ್ಯಲೋಹದ ಮೇಲೆ ಮೋಹ: 4 ಲಕ್ಷ ಗಡಿ ಸಮೀಪಿಸಿದ ಬೆಳ್ಳಿ

ಲೋಹದ ಮೇಲೆ ಮೋಹ: 4 ಲಕ್ಷ ಗಡಿ ಸಮೀಪಿಸಿದ ಬೆಳ್ಳಿ

ನವದೆಹಲಿ: ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇರುವ ಚಿನ್ನ ಮತ್ತು ಬೆಳ್ಳಿ ದರ ಬುಧವಾರವೂ ಸಾರ್ವಕಾಲಿಕ ದಾಖಲೆ ಏರಿಕೆ ದಾಖಲಿಸಿದೆ.

ಕಳೆದ ಕೆಲವು ತಿಂಗಳಿಂದ ಗಗನ ಮುಖಿ ಆಗಿರುವ ಚಿನ್ನದ ಬೆಲೆ ಬುಧವಾರ ಮಾರುಕಟ್ಟೆಯಲ್ಲಿ 10 ಗ್ರಾಂಗೆ 1,57,000 ರೂ.ನಿಂದ 1,65,000 ರೂ.ಗೆ ಜಿಗಿತ ಕಂಡರೆ, ಬೆಳ್ಳಿ ದರ ಕೆಜಿಗೆ 3,80,000 ರೂ. ತಲುಪಿದೆ. ಬೆಳ್ಳಿ 4 ಲಕ್ಷ ಗಡಿ ಸಮೀಪ ಬಂದಿದ್ದು, ಫೆಬ್ರವರಿ ಮೊದಲ ವಾರದಲ್ಲಿ 45 ಲಕ್ಷ ರೂ. ಗಡಿ ದಾಟುವ ಸಾಧ್ಯತೆ ಇದೆ ಎಂದು ಪಂಡಿತರು ವಿಶ್ಲೇಷಿಸಿದ್ದಾರೆ.

ಬುಧವಾರ ಬೆಳ್ಳಿ ದರ ಕೆಜಿಗೆ 3,80,000 ರೂ. ಇದ್ದು, ಮಾಸಾಂತ್ಯದಲ್ಲಿ 3.90 ಲಕ್ಷ ರೂ. ತಲುಪಲಿದೆ. ಮುಂದಿನ ವಾರ ಅಂದರೆ ಫೆಬ್ರವರಿ ಮೊದಲ ವಾರದಲ್ಲಿ 4 ಲಕ್ಷ ರೂ. ಗಡಿ ದಾಟುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಪಂಡಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಳ್ಳಿ ಬೆಲೆಯು ಜನವರಿ 28ರಂದು 1 ಗ್ರಾಂಗೆ 380 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 3,80,000 ರೂಪಾಯಿ ಆಗಿದೆ. ಜನವರಿ 27ರ ಬೆಳ್ಳಿ ಬೆಲೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂ ಬೆಳ್ಳಿ ಬೆಲೆಯು 10 ರೂಪಾಯಿ ಹಾಗೂ ಒಂದು ಕೆ.ಜಿಯ ಮೇಲೆ ಬರೋಬ್ಬರಿ 10,000 ಸಾವಿರ ರೂಪಾಯಿ ಹೆಚ್ಚಳವಾಗಿದೆ. ಬೆಳ್ಳಿ ಬೆಲೆ ಕೆಲವೇ ದಿನಗಳಲ್ಲಿ ಬರೋಬ್ಬರಿ 1 ಲಕ್ಷ ರೂಪಾಯಿ ಹೆಚ್ಚಳವಾಗಿದೆ.

ಅಮೂಲ್ಯ ಲೋಹಗಳಾದ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಸಾರ್ವತ್ರಿಕ ದಾಖಲೆಯನ್ನು ಬರೆದಿವೆ. ಬೆಳ್ಳಿ ಮತ್ತು ಚಿನ್ನದ ಬೆಲೆಗಳು ಇತಿಹಾಸದಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೆಳ್ಳಿ ಮತ್ತು ಚಿನ್ನದ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ.

ಬೆಳ್ಳಿ ಬೆಲೆ ಹೆಚ್ಚಾಗುವ ನಿರೀಕ್ಷೆ

ಅಮೆರಿಕನ್ ಡಾಲರ್ ಮೌಲ್ಯ ಕುಸಿತ, ಅಮೆರಿಕನ್ ಡಾಲರ್ ಮುಂದೆ ಭಾರತದ ರೂಪಾಯಿ ಮೌಲ್ಯ ಕುಸಿತ, ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಸುರಕ್ಷಿತ ಹೂಡಿಕೆಗಳು ಸೇರಿದಂತೆ ಹಲವು ಕಾರಣಗಳಿಗೆ ಬೆಳ್ಳಿಯ ಬೆಲೆಯು ಹೆಚ್ಚಳವಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments