ಅಮೆರಿಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇರಾನ್ ಸುಪ್ರೀಂ ಖಮೇನಿ ಪತ್ನಿ ಖೋಜಾಸ್ತಾಹ್ ಬಗೇರ್ ಜಹಾದ್ ನಿಧನರಾಗಿದ್ದಾರೆ.
ಟೆಹರಾನ್ ನ ಖಮೇನಿ ನಿವಾಸ ಹಾಗೂ ಕಚೇರಿಯ ಮೇಲೆ ಅಮೆರಿಕ 30 ಬಾಂಬ್ ದಾಳಿ ಮಾಡಿತ್ತು. ದಾಳಿಯಲ್ಲಿ ಖಮೇನಿ, ಪುತ್ರಿ, ಸೊಸೆ ಹಾಗೂ ಅಳಿಯ ಸೇರಿದಂತೆ ಹಲವಾರು ಮಂದಿ ಮೃತಪಟ್ಟಿದ್ದರು.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಖಮೇನಿ ಪತ್ನಿ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಸಂಜೆ ನಿಧನರಾಗಿದ್ದಾರೆ.
1964ರಲ್ಲಿ ಖಮೇನಿ ಅವರನ್ನು ಮದುವೆ ಆಗಿದ್ದ ಖೋಜಾಸ್ತಾಹ್ ಬಗೇರ್ ಜಹಾದ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ದಂಪತಿಗೆ 6 ಮಕ್ಕಳು ಇದ್ದವು.



