ಸೈಪ್ರಸ್ ನಲ್ಲಿರುವ ಬ್ರಿಟಿಷ್ ನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿದ್ದರಿಂದ ಗ್ರೀಸ್ ಇದೀಗ ಯುದ್ಧಕ್ಕೆ ಪ್ರವೇಶಿಸಲು ಮುಂದಾಗಿದೆ.
ಬ್ರಿಟಿಷ್ ನೆಲೆಯ ಮೇಲೆ ದಾಳಿ ಮಾಡಿದ ನಂತರ ಗ್ರೀಸ್ ‘ಯಾವುದೇ ಸಂಭಾವ್ಯ ದಾಳಿಗಳಿಂದ’ ಸೈಪ್ರಸ್ ಅನ್ನು ರಕ್ಷಿಸಲು ಸಿದ್ಧವಾಗಿದೆ ಎಂದು ಗ್ರೀಕ್ ರಕ್ಷಣಾ ಸಚಿವ ನಿಕೋಸ್ ಡೆಂಡಿಯಾಸ್ ಹೇಳಿದ್ದಾರೆ.
ಯುಕೆಯ ಆರ್‌ಎಎಫ್ ಅಕ್ರೋತಿರಿ ವಾಯುನೆಲೆಯನ್ನು ಗುರಿಯಾಗಿಸಿಕೊಂಡಿದ್ದ ಎರಡು ಡ್ರೋಣ್ ಗಳನ್ನು ಸೈಪ್ರಸ್ ವಾಯುಪ್ರದೇಶದಲ್ಲಿ ಹೊಡೆದುರುಳಿಸಲಾಯಿತು. ನಂತರ ದಾಳಿಗಳನ್ನು ಹಿಮ್ಮೆಟ್ಟಿಸಲು ಗ್ರೀಸ್ ಎರಡು ಫ್ರಿಗೇಟ್‌ಗಳು ಮತ್ತು ಎರಡು ಎಫ್ -16 ಜೆಟ್‌ಗಳನ್ನು ಸೈಪ್ರಸ್‌ಗೆ ಕಳುಹಿಸುತ್ತಿರುವುದಾಗಿ ಘೋಷಿಸಿದೆ.
ಕತಾರ್ ವಿದ್ಯುತ್ ಸ್ಥಾವರ, ಸೌದಿಯ ತೈಲ ಘಟಕಕ್ಕೆ ಹಾನಿ
ಇರಾನ್ ನಡೆಸಿದ ಡ್ರೋನ್ ದಾಳಿ ನಂತರ ಸೌದಿಯ ಅರಾಮ್ಕೊ ಸಂಸ್ಥೆ ಸೋಮವಾರ ದಮ್ಮಾಮ್ ಬಳಿಯ ತನ್ನ ರಾಸ್ ತನುರಾ ತೈಲ ಸಂಸ್ಕರಣಾಗಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದು ಕಿಂಗ್ಡಮ್‌ನ ಅತಿದೊಡ್ಡ ತೈಲ ಸಂಸ್ಕರಣಾಗಾರವಾಗಿದ್ದು, ದಿನಕ್ಕೆ ಅರ್ಧ ಮಿಲಿಯನ್ ಬ್ಯಾರೆಲ್‌ಗಳಿಗಿಂತ ಹೆಚ್ಚು ಕಚ್ಚಾ ತೈಲವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಕತಾರ್ 2 ವಿದ್ಯುತ್ ಸ್ಥಾವರಗಳ ಮೇಲೆ ಡ್ರೋಣ್ ದಾಳಿ ಮೂಲಕ ಧ್ವಂಸಗೊಳಿಸಿರುವ ಇರಾನ್, ಜೋರ್ಡಾನ್ ವಾಯುನೆಲೆ ಮೇಲೆ ದಾಳಿ ಮಾಡಿದ್ದರಿಂದ ಬಂದ್ ಮಾಡಲಾಗಿದೆ. ಹಲವಾರು ಯುದ್ಧ ವಿಮಾನ ಹಾಗೂ ವಾಯುನೆಲೆಗಳನ್ನು ಧ್ವಂಸಗೊಳಿಸಿದೆ.
ಹೌತಿ ಬಂಡುಕೋರರ ಪ್ರತಿಜ್ಞೆ
ಇರಾನ್‌ನೊಂದಿಗೆ ಉತ್ತಮ ಸಂಬಂ ಕಾಯ್ದುಕೊಂಡಿರುವ ಹೆಜ್ಬೊಲ್ಲಾ, ಉತ್ತರ ಇಸ್ರೇಲ್‌ನ ಹೈಫಾ ಬಳಿಯ ಮಿಲಿಟರಿ ನೆಲೆಯ ಮೇಲೆ ರಾಕೆಟ್ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಈ ಪರಿಣಾಮ ಸಂಘರ್ಷವು ಈಗ ಲೆಬನಾನ್‌ಗೂ ಹರಡಿದೆ.
ಲೆಬನಾನ್ ನ ರಾಜಧಾನಿ ಬೈರುತ್ ಮೇಲೆ ಇಸ್ರೇಲ್ ಕ್ಷಿಪಣಿಗಳು ಅಪ್ಪಳಿಸಿವೆ. 2024 ರ ನವೆಂಬರ್‌ನಲ್ಲಿ ಇಸ್ರೇಲ್ ಮತ್ತು ಹೆಜ್ಬೊಲ್ಲಾ ಕದನ ವಿರಾಮ ಒಪ್ಪಂದಕ್ಕೆ ಬಂದ ನಂತರ ಈ ದಾಳಿಗಳು ನಡೆದಿವೆ.
ಯೆಮೆನ್‌ನಲ್ಲಿ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಕೆಂಪು ಸಮುದ್ರದ ಹಡಗು ಮಾರ್ಗಗಳು ಮತ್ತು ಇಸ್ರೇಲ್ ಮೇಲೆ ದಾಳಿಗಳನ್ನು ಪುನರಾರಂಭಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.



