ಐಟಿ ದಿಗ್ಗಜ ಮೈಕ್ರೊಸಾಫ್ಟ್ ಸಂಸ್ಥೆ ಶೇ.4ರಷ್ಟು ಅಂದರೆ 9100 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು 2023ರ ನಂತರ ನಡೆದ ಅತೀ ದೊಡ್ಡ ಉದ್ಯೋಗ ಕಡಿತವಾಗಿದೆ.
2024 ಜೂನ್ ವೇಳೆಗೆ ಜಗತ್ತಿನಾದ್ಯಂತ 2,28,000 ಉದ್ಯೋಗಿಗಳನ್ನು ಹೊಂದಿತ್ತು. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ಉದ್ಯೋಗ ಕಡಿತ ಮಾಡಿರುವುದಕ್ಕೆ ಮೈಕ್ರೊಸಾಫ್ಟ್ ಸಂಸ್ಥೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬೂಮ್ ಬರ್ಗ್ ನ್ಯೂಸ್ ವರದಿ ಪ್ರಕಾರ ಅತೀ ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳ ವಜಾ ಪ್ರಕ್ರಿಯೆ ಆರಂಭಿಸಿದೆ. ಕಳೆದ ಮೇ ತಿಂಗಳಲ್ಲಿ 6000 ಉದ್ಯೋಗಿಗಳನ್ನು ವಜಾಗೊಳಿಸಿದ್ದ ಮೈಕ್ರೊಸಾಫ್ಟ್ ಇದೀಗ 9100 ಉದ್ಯೋಗಿಗಳನ್ನು ವಜಾಗೊಳಿಸಿದೆ.



